ಮಂಜೇಶ್ವರ: ಜಿಲ್ಲೆಯ ಗಡಿಪ್ರದೇಶಗಳ ಚೆಕ್ ಪೆÇೀಸ್ಟ್ ಗಳಲ್ಲಿ ಇತರ ರಾಜ್ಯಗಳಿಂದ ಆಗಮಿಸಿದ ಮಂದಿಯ ಕೇರಳ ಪ್ರವೇಶ ಭಾನುವಾರವೂ ಅನಾಯಾಸವಾಗಿ ನಡೆದಿದೆ.
ರಾಜ್ಯದಲ್ಲಿ ಭಾನುವಾರ ಪೂರ್ಣರೂಪದ ಲಾಕ್ ಡೌನ್ ಜಾರಿಯಲ್ಲಿದ್ದರೂ, ಗಡಿಪ್ರದೇಶಗಳಲ್ಲಿ ಪರಿಪೂರ್ಣ ವ್ಯವಸ್ಥೆಗಳನ್ನು ಏರ್ಪಡಿಸಿದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಸುಗಮವಾಗಿದೆ.
ಚೆಕ್ ಪೆÇೀಸ್ಟ್ ನಲ್ಲಿದ್ದವರಿಗೆ ಕುಟುಂಬಶ್ರೀ ನೇತೃತ್ವದಲ್ಲಿ ಆಹಾರ-ನೀರು ಪೂರೈಕೆ ನಡೆಸಲಾಗಿದೆ. ಹಣವಿಲ್ಲದೇ ಇದ್ದವರಿಗೆ ಉಚಿತವಾಗಿ ಆಹಾರ ನೀಡಲಾಗಿದೆ. ರಾಜ್ಯ ಸರಕಾರ ಮಂಜೂರು ಮಾಡಿರುವ ಪಾಸ್ ಸಹಿತ ಆಗಮಿಸಿದವರ ಎಲ್ಲ ವಿಧದ ತಪಾಸಣೆ ಪೂರ್ಣಗೊಳಿಸಿ ದಷ್ಟು ಬೇಗ ಜಿಲ್ಲೆಗೆ ಪ್ರವೇಶ ನಡೆಸಲು ವ್ಯವಸ್ಥೆ ಮಾಡಲಾಗಿತ್ತು. ಸ್ವಂತ ವಾಹನವಿದ್ದವರು ಆ ಮೂಲಕ ತಮ್ಮೂರಿಗೆ ತೆರಳಿದ್ದರು. ವಾಹನವಿಲ್ಲದೇ ಇದ್ದವರಿಗೆ ಹೆಲ್ಪ್ ಡೆಸ್ಕ್ ಕೇಂದ್ರ ವ್ಯಾಪ್ತಿಯಲ್ಲಿದ್ದ ಆಂಬುಲೆನ್ಸ್ ಮೂಲಕ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು.
ಪಾಸ್ ಇಲ್ಲದೇ ಇರುವವರನ್ನು ಯಾವ ಕಾರಣಕ್ಕೂ ಕೇರಳ ಪ್ರವೇಶಕ್ಕೆ ಅನುಮತಿಯಿಲ್ಲ ಎಂಬ ರಾಜ್ಯಸರಕಾರದ ಆದೇಶದ ಹಿನ್ನೆಲೆಯಲ್ಲಿ ಕಟ್ಟುನಿಟ್ಟು ನಡೆಸಿದ ಪರಿಣಾಮ ಭಾನುವಾರ ಪಾಸ್ ಇಲ್ಲದೆ ಆಗಮಿಸಿದವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು.
ಈಗ 30 ಹೆಲ್ಪ್ ಡೆಸ್ಕ್ ಕೌಂಟರ್ ಗಳು ಇಲ್ಲಿ ಚಟುವಟಿಕೆ ನಡೆಸುತ್ತಿವೆ. ಮೊದಲ ಹಂತದಲ್ಲಿ 60 ಕೌಂಟರ್ ಗಳನ್ನು ಸಜ್ಜುಗೊಳಿಸಲಾಗಿದ್ದರೂ, ಗಡಿ ಪ್ರದೇಶಕ್ಕೆ ಆಗಮಿಸುವವರ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ನಂತರ ಕೌಂಟರ್ ಗಳನ್ನು ಕಡಿತಗೊಳಿಸಲಾಗಿತ್ತು.
ಮಂಜೇಶ್ವರ ಚೆಕ್ ಪೆÇೀಸ್ಟ್ ಮೂಲಕ ಭಾನುವಾರ 215 ಮಂದಿ ಕೇರಳ ಪ್ರವೇಶ:
ಮಂಜೇಶ್ವರ ಚೆಕ್ ಪೆÇೀಸ್ಟ್ ಮೂಲಕ ಭಾನುವಾರ 215 ಮಂದಿ ಕೇರಳ ಪ್ರವೇಶ ಮಾಡಿದ್ದಾರೆ. 591 ಮಂದಿಗೆ ಭಾನುವಾರ ಪಾಸ್ ಮಂಜೂರು ಮಾಡಲಾಗಿದೆ. ಈ ವರೆಗೆ ಮಂಜೇಶ್ವರ ಗಡಿ ಮೂಲಕ 4658 ಮಂದಿ ಪ್ರವೇಶ ಮಾಡಿದ್ದಾರೆ. ಒಟ್ಟು 11878 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ. ಕಾಸರಗೋಡು ಜಿಲ್ಲೆಗೆ ಈ ಮೂಲಕ 1459 ಮಂದಿ ಮೂಲನಿವಾಸಿಗಳು ಆಗಮಿಸಿದ್ದಾರೆ. 3203 ಮಂದಿಗೆ ಪಾಸ್ ಮಂಜೂರು ಮಾಡಿದ್ದಾರೆ.



