ಕಾಸರಗೋಡು: ಕೇರಳ ರಾಜ್ಯದಲ್ಲಿ ಬುಧವಾರ ಮತ್ತೆ ಹೊಸದಾಗಿ 10 ಮಂದಿಗೆ ಕೊರೊನಾ ವೈರಸ್ ಸೋಂಕು ಪ್ರಕರಣ ದಾಖಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ ಪ್ರಕರಣ ದಾಖಲಾಗಿಲ್ಲ.
ಮಲಪ್ಪುರ ಜಿಲ್ಲೆಯಲ್ಲಿ 3 ಮಂದಿಗೆ, ವಯನಾಡು, ಪಾಲ್ಘಾಟ್ ಜಿಲ್ಲೆಯಲ್ಲಿ ತಲಾ 2 ಮಂದಿಗೆ, ಕೋಟ್ಟಯಂ, ಕಣ್ಣೂರು ಮತ್ತು ಕಲ್ಲಿಕೋಟೆ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢೀಕರಿಸಲಾಗಿದೆ.
ಇವರಲ್ಲಿ ನಾಲ್ವರು ದಿನಗಳ ಹಿಂದೆ ವಿದೇಶದಿಂದ ಬಂದವರು. ಇಬ್ಬರು ಚೆನ್ನೈಯಿಂದ ಬಂದವರು. ನಾಲ್ವರಿಗೆ ಸಂಪರ್ಕದಿಂದ ಸೋಂಕು ಹರಡಿದೆ. ವಯನಾಡು ಜಿಲ್ಲೆಯ ಇಬ್ಬರಿಗೆ ಚೆನ್ನೆಯಿಂದ ಬಂದ ಟ್ರಕ್ ಚಾಲಕನ ಸಂಪರ್ಕದಿಂದ ಸೋಂಕು ಬಾ„ಸಿದೆ. ಮಲಪ್ಪುರ ಜಿಲ್ಲೆಯ ಮತ್ತು ಕಣ್ಣೂರು ಜಿಲ್ಲೆಯ ತಲಾ ಒಬ್ಬರು ವಯನಾಡಿನಲ್ಲಿ ಡ್ಯೂಟಿಯಲ್ಲಿದ್ದ ಪೆÇಲೀಸರು. ಇವರಿಗೂ ಟ್ರಕ್ ಚಾಲಕನ ಮೂಲಕ ಸೋಂಕು ಬಾ„ಸಿದೆ. ಈ ಟ್ರಕ್ ಚಾಲಕನಿಂದ ಒಟ್ಟು 10 ಮಂದಿಗೆ ಸೋಂಕು ಹರಡಿದೆ. ಕೊಲ್ಲಂ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಬ್ಬರು ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಈ ವರೆಗೆ 490 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಾಗಿ 41 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 34447 ಮಂದಿ ನಿಗಾವಣೆಯಲ್ಲಿದ್ದಾರೆ. ಇವರಲ್ಲಿ 33953 ಮಂದಿ ಮನೆಗಳಲ್ಲೂ, 494 ಮಂದಿ ಆಸ್ಪತ್ರೆಗಳಲ್ಲೂ ನಿಗಾವಣೆಯಲ್ಲಿದ್ದಾರೆ. ಬುಧವಾರ ಶಂಕಿತ 168 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 39380 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಲಭ್ಯ 38509 ನೆಗೆಟಿವ್ ಆಗಿದೆ.
ಲಾಕ್ ಡೌನ್ ಉಲ್ಲಂಘಿಸಿದ ಆರೋಪದಲ್ಲಿ ಜಿಲ್ಲೆಯಲ್ಲಿ 12 ಕೇಸುಗಳನ್ನು ಪೆÇಲೀಸರು ದಾಖಲಿಸಿದ್ದಾರೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 1, ವಿದ್ಯಾನಗರ-1, ಕಾಸರಗೋಡು-3, ಬೇಡಡ್ಕಂ-1, ಮೇಲ್ಪರಂಬ-5, ಹೊಸದುರ್ಗ-1 ಎಂಬಂತೆ ಪೆÇಲೀಸರು ಕೇಸು ದಾಖಿಲಿಸಿದ್ದಾರೆ. ವಿವಿಧ ಕೇಸುಗಳಿಗೆ ಸಂಬಂಧಿಸಿ 19 ಮಂದಿಯನ್ನು ಬಂಧಿಸಲಾಗಿದೆ. ಏಳು ವಾಹನಗಳನ್ನು ವಶಪಡಿಸಲಾಗಿದೆ. ಜಿಲ್ಲೆಯಲ್ಲಿ ಈ ತನಕ 2127 ಕೇಸುಗಳನ್ನು ದಾಖಲಿಸಲಾಗಿದೆ. 2777 ಮಂದಿಯನ್ನು ಬಂಧಿಸಲಾಗಿದ್ದು, 885 ವಾಹನಗಳನ್ನು ವಶಪಡಿಸಲಾಗಿದೆ.


