ಕಾಸರಗೋಡು: ಜಿಲ್ಲೆಯಲ್ಲಿ ಮೂರನೇ ಹಂತದ ಕೋವಿಡ್ ಕಟ್ಟುನಿಟ್ಟು ಜಾರಿಗೆ ವಿಸ್ತೃತ ಯೋಜನೆ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಕೊರೋನಾ ನಿಯಂತ್ರಣ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತರ ರಾಜ್ಯಗಳಿಂದ ತಲಪ್ಪಾಡಿ ಚೆಕ್ಪೋಸ್ಟ್ ಮೂಲಕ ಆಗಮಿಸುವವರಿಗೆ ಪಾಸ್ ಕಡ್ಡಾಯವಾಗಿದೆ. ಪಾಸ್ ಮಂಜೂರಾತಿಯಲಲಿ ಗರ್ಭಿಣಿಯರಿಗೆ, ಮಕ್ಕಳಿಗೆ, ರೀಗಿಗಳಿಗೆ, ವಯೋವೃದ್ಧರಿಗೆ, ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಪಾಸ್ ಮಂಜೂರಾತಿಯಲ್ಲಿ ಆದ್ಯತೆ ಕ್ರಮ ಖಚಿತಗೊಳಿಸುವ ಹೊಣೆಯನ್ನು ಹೆಚ್ಚುವರಿ ದಂಡನಾಧಿಕಾರಿ ಮತ್ತು ಉಪಜಿಲ್ಲಾಧಿಕಾರಿಗೆ ನೀಡಲಾಗಿದೆ. ಪಾಸ್ ಇಲ್ಲದೇ ಜನರನ್ನು ಅಕ್ರಮವಾಗಿ ಗಡಿದಾಟಿಸುವವರನ್ನು ಸರಕಾರಿ ಕ್ವಾರೆಂಟೈನ್ ಗೆ ದಾಖಲಿಸಲಾಗುವುದು. ಜೊತೆಗೆ ಇಂಥವರ ವಿರುದ್ಧ ಎಪಿಡೆಮಿಕ್ ಡಿಸೀಸ್ ಆರ್ಡಿನೆನ್ಸ್ ಪ್ರಕಾರ ಕಾನೂನು ಕಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ತಲಪ್ಪಾಡಿ ಮೂಲಕ ಕೇರಳ ಪ್ರವೇಶ ಮಾಡುವವರು ರಾಷ್ಟ್ರೀಯ ಹೆದ್ದಾರಿ ಮೂಲಕವೇ ತಮ್ಮೂರಿಗೆ ತಲಪಬೇಕು. ತಮ್ಮ ಪ್ರಯಾಣಕ್ಕಾಗಿ ಅಡ್ಡದಾರಿ, ಎಸ್.ಪಿ.ಟಿ.ರಸ್ತೆ ಬಳಸಬಾರದು ಎಂದವರು ನುಡಿದರು.
ಕ್ವಾರೆಂಟೈನ್ ಸಂಬಂಧ ವಿಷಯದಲ್ಲಿ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ, ಉಪ ಜಿಲ್ಲಾಧಿಕಾರಿ, ಹೆಚ್ಚುವರಿ ದಂಡನಾಧಿಕಾರಿ, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿಪಂಚಾಯತ್ ಸಹಾಯಕ ನಿರ್ದೇಶಕ, ವಲಯ ಕಂದಾಯಾಧಿಕಾರಿ, ಲೋಕೋಪಯೋಗಿ(ಕಟ್ಟಡ) ಕಾರ್ಯಕಾರಿಇಂಜಿನಿಯರ್, ಹುಸೂರ್ ಶಿರಸ್ತೇದಾರ್ ಸೇರಿರುವ ಗುಂಪಿಗೆ ಜಿಲ್ಲಾಧಿಕಾರಿ ನೀಡಿದ್ದಾರೆ. ಕ್ವಾರೆಂಟೈನ್ ನಡೆಸುವ ವೇಳೆ ಜಿಲ್ಲಾ ವೈದ್ಯಾಧಿಕಾರಿಯ ಅನುಮತಿ ಅಗತ್ಯ. ಪೆÇಲೀಸ್ ಮತ್ತು ಕಂದಾಯ ಸಿಬ್ಬಂದಿ ಮಾತ್ರ ಕ್ವಾರೆಂಟೈನ್ ನಡೆಸುವ ಯತ್ನ ನಡೆಸಕೂಡದು. ರೈಲು ಮೂಲಕ ಆಗಮಿಸುವವರ ತಪಾಸಣೆಗೆ ಕಾಲಿಕ್ಕಡವು ಮತ್ತು ತಲಪ್ಪಾಡಿ ಚೆಕ್ ಪೆÇೀಸ್ಟ್ ಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗುವುದು. ಇವರಿಗೆ ಪಾಸ್ ಕಡ್ಡಾಯವಾಗಿದೆ. ಮುಂದಿನ ದಿನಗಳಲ್ಲಿ ತಲಪ್ಪಾಡಿಯಲ್ಲಿ ಹೆಲ್ಪ್ ಡೆಸ್ಕ್ಸಂಖ್ಯೆ ಕಡಿತಗೊಳಿಸಲಾಗುವುದು. ಇದಕ್ಕಿರುವ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಶಿಕ್ಷ ಉಪನಿರ್ದೇಶಕರಿಗೆ ಹೊಣೆ ನೀಡಲಾಗಿದೆ. ಪ್ರತಿರೋಧ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ವಾಡ್ರ್ಮಟ್ಟದ ಜಾಗ್ರತಾ ಸಮಿತಿಗಳನ್ನು ಪ್ರಬಲಗೊಳಿಸಲು ಜಿಲ್ಲಾ ಪೆÇಲೀಸ್ವರಿಷ್ಠಾಧಿಕಾರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ವಿವಿಧ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು.
ಮೇ 15ರಂದು ಕಾಞಂಗಾಡಿನಿಂದ 1480 ಮಂದಿ ಇತರ ರಾಜ್ಯ ಕಾರ್ಮಿಕರು ಉತ್ತರಪ್ರದೇಶಕ್ಕೆ ತೆರಳಲು ರೈಲು ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಪ್ರತಿರೋಧ ಅಂಗವಾಗಿ ಸ್ತುತ್ಯರ್ಹ ಸೇವೆ ನಡೆಸಿದ ಅಗನಿಶಾಮಕದಳವನ್ನು ಜಿಲ್ಲಾಧಿಕಾರಿ ಶ್ಲಾಘಿಸಿದರು. ಇಂದಿನಿಂದ ಜಿಲ್ಲಾಧಿಕಾರಿ ಕಚೇರಿ ಮತ್ತು ಜಿಲ್ಲಾ ನ್ಯಾಯಾಲಯಕ್ಕೆ ಸಿಬ್ಬಂದಿಯನ್ನು ಕರೆತರಲು ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ನಡೆಸಲಿದೆ ಎಂದು ತಿಳಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಸಾಬು, ಉಪಜಿಲ್ಲಾಧಿಕಾರ ಅರುಣ್ ಕೆ.ವಿಜಯನ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ವಲಯ ಕಂದಾಯಾಧಿಕಾರಿ ಅಹಮ್ಮದ್ ಕಬೀರ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಎ.ಟಿ.ಮನೋಜ್, ಎನ್.ಎಚ್.ಎಂ. ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ಡಾ.ರಾಮನ್ ಸ್ವಾತಿ ವಾಮನ್, ಪಂಚಾಯತ್ ಸಹಾಯಕ ನಿರ್ದೇಶಕ ರೆಜಿ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.


