ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ ಕೊರೊನಾ ವೈರಸ್ ಸೋಂಕು ಪ್ರಕರಣ ದಾಖಲಾಗಿಲ್ಲ. ಜಿಲ್ಲೆಯಲ್ಲಿ ಕೇವಲ ನಾಲ್ಕು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 183 ಮಂದಿಗೆ ಕೊರೊನಾ ವೈರಸ್ ಸೋಂಕು ಬಾ„ಸಿದ್ದು, ಈ ಪೈಕಿ 179 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ 1149 ಮಂದಿ ನಿಗಾವಣೆಯಲ್ಲಿದ್ದಾರೆ. ಈ ಪೈಕಿ 963 ಮಂದಿ ಮನೆಗಳಲ್ಲೂ, 186 ಮಂದಿ ಆಸ್ಪತ್ರೆಗಳಲ್ಲಿ ನಿಗಾವಣೆಯಲ್ಲಿದ್ದಾರೆ. 5140 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಿದ್ದು,ಲಭ್ಯ 4638 ನೆಗೆಟಿವ್ ಆಗಿದೆ. ಮಂಗಳವಾರ ಹೊಸದಾಗಿ 21 ಮಂದಿಯನ್ನು ಐಸೋಲೇಷನ್‍ಗೆ ದಾಖಲಿಸಲಾಗಿದೆ. ನಿಗಾದಲ್ಲಿದ್ದ 262 ಮಂದಿ ಮಂಗಳವಾರ ಕಾಲಾವಧಿ ಪೂರ್ತಿಗೊಳಿಸಿದ್ದಾರೆ.
ರಾಜ್ಯದಲ್ಲಿ ಐವರಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಮಂಗಳವಾರ ಮತ್ತೆ ಐದು ಮಂದಿಗೆ ಕೊರೊನಾ ವೈರಸ್ ಸೋಂಕು ಬಾ„ಸಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು 32 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ 32 ಮಂದಿ ಪೈಕಿ 23 ಮಂದಿಗೆ ಕೇರಳದ ಹೊರಗಿನಿಂದ ರೋಗ ಬಾಧಿಸಿದೆ. ಚೆನ್ನೆಯಿಂದ 6 ಮಂದಿಗೆ, ಮಹಾರಾಷ್ಟ್ರದಿಂದ 4, ನಿಜಾಮುದ್ದೀನ್‍ನಿಂದ 2, ವಿದೇಶದಿಂದ 11 ಮಂದಿಗೆ ರೋಗ ಬಾ„ಸಿದೆ. ಸಂಪರ್ಕದಿಂದ 9 ಮಂದಿಗೆ ರೋಗ ಬಾ„ಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಮಂಗಳವಾರ ರಾಜ್ಯದಲ್ಲಿ ಮಲಪ್ಪುರಂ ಜಿಲ್ಲೆಯ 3 ಮಂದಿಗೆ, ಪತ್ತನಂತಿಟ್ಟ ಮತ್ತು ಕೋಟ್ಟಯಂನಲ್ಲಿ ತಲಾ ಒಬ್ಬರಿಗೆ ರೋಗ ಬಾಧಿಸಿದೆ. ಇವರಲ್ಲಿ ನಾಲ್ವರು ವಿದೇಶದಿಂದ ಬಂದವರು ಮತ್ತು ಒಬ್ಬರು ಚೆನ್ನೈಯಿಂದ ಬಂದವರು.
ರಾಜ್ಯದಲ್ಲಿ 31616 ಮಂದಿ ನಿಗಾವಣೆಯಲ್ಲಿದ್ದಾರೆ. ಈ ಪೈಕಿ 31143 ಮಂದಿ ಮನೆಗಳಲ್ಲೂ, 473 ಮಂದಿ ಆಸ್ಪತ್ರೆಗಳಲ್ಲಿ ನಿಗಾವಣೆಯಲ್ಲಿದ್ದಾರೆ. ಮಂಗಳವಾರ ಶಂಕಿತ 95 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 38547 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, ಲಭ್ಯ 37727 ನೆಗೆಟಿವ್ ಆಗಿದೆ.
7 ಕೇಸು ದಾಖಲು : ಲಾಕ್ ಡೌನ್ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 7 ಕೇಸುಗಳನ್ನು ದಾಖಲಿಸಲಾಗಿದೆ. ಕುಂಬಳೆ ಠಾಣೆಯಲ್ಲಿ 1, ವಿದ್ಯಾನಗರ-1, ಬೇಡಗಂ-1, ಅಂಬಲತ್ತರ-1, ನೀಲೇಶ್ವರ-1, ಚೀಮೇನಿ-1, ರಾಜಪುರಂ-1 ಎಂಬಂತೆ ಕೇಸುಗಳನ್ನು ದಾಖಲಿಸಲಾಗಿದೆ. ವಿವಿಧ ಕೇಸುಗಳಲ್ಲಿ 19 ಮಂದಿಯನ್ನು ಬಂಧಿಸಲಾಗಿದೆ. ವಾಹನವೊಂದನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈ ತನಕ 2115 ಕೇಸುಗಳನ್ನು ದಾಖಲಿಸಲಾಗಿದೆ. ವಿವಿಧ ಕೇಸುಗಳಲ್ಲಾಗಿ 2758 ಮಂದಿಯನ್ನು ಬಂಧಿಸಲಾಗಿದ್ದು, 878 ವಾಹನಗಳನ್ನು ವಶಪಡಿಸಲಾಗಿದೆ.


