ತಿರುವನಂತಪುರ: ದೇಶದಲ್ಲಿ ರೈಲು ಸೇವೆ ಆರಂಭಗೊಳ್ಳಲಿದೆ ಎಂದು ಕೇಂದ್ರ ಸರಕಾರ ತಿಳಿಸಿರುವ ಹಿನ್ನೆಲೆಯಲ್ಲಿ ಟಿಕೆಟ್ ಪಡೆಯುವವರು ಪಾಸ್ ಪಡೆದುಕೊಳ್ಳಬೇಕು. ಪಾಸ್ ಗಾಗಿ "ಕೋವಿಡ್ 19 ಜಾಗ್ರತಾ" ಪೆÇೀರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ರಾಜ್ಯ ಸರಕಾರ ತಿಳಿಸಿದೆ.
ಇತರ ಮಾರ್ಗಗಳ ಮೂಲಕ ಆಗಮಿಸುವುದಾಗಿ ಈಗಾಗಲೇ ಅರ್ಜಿ ಸಲ್ಲಿಸಿದವರು ಅವನ್ನು ರದ್ದುಗೊಳಿಸಿ ರೈಲಿನ ಮೂಲಕ ಬರುತ್ತಿರುವುದಾಗಿ ನಮೂದಿಸಿ ನೂತನವಾಗಿ ಅರ್ಜಿ ಸಲ್ಲಿಸಬೇಕಿದೆ. ಈ ವರೆಗೆ ಪಾಸ್ ಗಾಗಿ ಅರ್ಜಿ ಸಲ್ಲಿಸದೇ ಇದ್ದವರು ನೂತನವಾಗಿ ಅರ್ಜಿ ಸಲ್ಲಿಸಲು ಸೌಲಭ್ಯ ಏರ್ಪಡಿಸಲಾಗುವುದು. ಒಂದು ಟಿಕೆಟ್ ನಲ್ಲಿ ಇರುವೆಲ್ಲರ ಮಾಹಿತಿಗಳನ್ನು ಪಾಸ್ ಗಾಗಿ ಸಲ್ಲಿಸುವ ಅರ್ಜಿಯಲ್ಲಿ ಒಂದೇ ಗ್ರೂಪ್ ಆಗಿ ನಮೂದಿಸಬೇಕು. ಹೊರಡುವ ಸ್ಟೇಷನ್, ತಲಪುವ ಸ್ಟೇಷನ್, ಟ್ರೈನ್ ನಂಬ್ರ ಇತ್ಯಾದಿಗಳನ್ನೂ ಕಡ್ಡಾಯವಾಗಿ ದಾಖಲಿಸಬೇಕು. ಕೇರಳದಲ್ಲಿ ತಾವು ಇಳಿಯುವ ಸ್ಟೇಷನ್ ನಲ್ಲಿ ಮಾಹಿತಿ ಪರಿಶೀಲಿನೆ ನಡೆಸಲಾಗುವುದು. ವೈದ್ಯಕೀಯ ತಪಾಸಣೆಯ ನಂತರ ರೋಗಲಕ್ಷಣ ಇಲ್ಲದೇ ಇರುವ ಮಂದಿ ಮನೆಗಳಲ್ಲಿ ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿರಬೇಕು. ಈ ಆದೇಶ ಉಲ್ಲಂಘಿಸುವವರನ್ನು ಕಡ್ಡಾಯವಾಗಿ ಇನ್ ಸ್ಟಿಟ್ಯೂಷನಲ್ ಕ್ವಾರಂಟೈನ್ ಗೆ ದಾಖಲಿಸಲಾಗುವುದು. ರೋಗ ಲಕ್ಷಣ ಇರುವವರನ್ನು ಮುಂದಿನ ತಪಾಸಣೆಗಳಿಗೆ ಒಳಪಡಿಸಲಾಗುವುದು.
ರೈಲು ನಿಲ್ದಾನದಿಂದ ಮನೆಗಳಿಗೆ ಪ್ರಯಾಣಿಕರನ್ನು ಕರೆದೊಯ್ಯುವ ವಾಹನಗಳಲ್ಲಿ ಚಾಲಕ ಮಾತ್ರ ಇರಬೇಕು. ಇಂಥಾ ವಾಹನಗಳಲ್ಲೂ ಸಾಮಾಜಿಕ ಅಂತರ ಪಾಲಿಸಬೇಕು. ಚಾಲಕ ಹೋಂ ಕ್ವಾರೆಂಟೈನ್ ಬಗ್ಗೆ ಖಚಿತ ಪಡಿಸಬೇಕು. ರೈಲು ನಿಲ್ದಾಣದಿಂದ ವಿವಿಧೆಡೆಗೆ ಕೆ.ಎಸ್.ಆರ್.ಟಿ.ಸಿ. ಸಂಚಾರ ನಡೆಸಲಾಗುವುದು. ರೈಲು ನಿಲ್ದಾಣದಿಂದ ವಾಹನಗಳ ಪಾಕಿರ್ಂಗ್ ಸ್ಥಳಕ್ಕೆ ಅಗತ್ಯವಿದ್ದರೆ ಕೆ.ಎಸ್.ಆರ್.ಟಿ.ಸಿ. ಬಸ್ ಸೇವೆ ನಡೆಸಲಾಗುವುದು.
ಕೋವಿಡ್ 19 ಜಾಗ್ರತಾ ಪೆÇೀರ್ಟಲ್ ನಲ್ಲಿ ಅರ್ಜಿ ಸಲ್ಲಿಸದೇ ಆಗಮಿಸುವ ಪ್ರಯಾಣಿಕರು 14ದಿನಗಳ ಕಾಲ ಕಡ್ಡಾಯವಾಗಿ ಇನ್ಸ್ ಸ್ಟಿಟ್ಯೂ ಷನಲ್ ಕ್ವಾರೆಂಟೈನ್ನಲ್ಲಿ ದಾಖಲಿಸಲಾಗುವುದು ಎಂದು ಸರಕಾರ ಸ್ಪಷ್ಟಪಡಿಸಿದೆ.



