ಕುಂಬಳೆ: ಯಕ್ಷಗಾನೀಯ ಹಲವಾರು ಚಟುವಟಿಕೆಗಳಲ್ಲಿ ಪ್ರಧಾನ ಪಾತ್ರವಹಿಸುತ್ತಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ಯಕ್ಷಗಾನ ಕಲಾವಿದರಿಗಾಗಿ ಕೊರೋನ ದಿಗ್ಬಂಧನ ನಾನು ಕಲಿತ ಪಾಠಗಳು ಎಂಬ ವಿಷಯದ ಮೇಲೆ ವೃತ್ತಿ, ಹವ್ಯಾಸಿ, ಹಾಗೂ ತಾಳಮದ್ದಳೆ ಕಲಾವಿದರಿಗಾಗಿ ಏರ್ಪಡಿಸಿದ್ದ ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು ಅದರಂತೆ ವೃತ್ತಿಕಲಾವಿದ ವಿಭಾಗದಲ್ಲಿ ಪ್ರಥಮ - ಸಂದೇಶ ಕುಮಾರ್ ಬಡಗಬೆಳ್ಳೂರು, ದ್ವಿತೀಯ - ಶಂಕರ ವಿಶ್ವನಾಥ ಹೆಗಡೆ ನೀಲ್ಕೋಡು, ತೃತೀಯ ರಾಕೇಶ ರೈ ಅಡ್ಕ, ಆಕರ್ಷಕ ಬಹುಮಾನ ರವಿರಾಜ ಪನೆಯಾಲ ಪಡೆದಿದ್ದಾರೆ.
ಹವ್ಯಾಸಿ ಕಲಾವಿದರ ವಿಭಾಗದಲ್ಲಿ ಪ್ರಥಮ ಆಜ್ಞಾ ಸೋಹಮ್, ದ್ವಿತೀಯ- ರಾಮಕೃಷ್ಣ ಭಟ್ ಬಳಂಜ, ತೃತೀಯ ವೆಂಕಟರಮಣ ಆಚಾರ್ಯ ಕಲ್ಮಡ್ಕ, ಆಕರ್ಷಕ ಬಹುಮಾನ ಭಾರತಿ ಕೆ ಪಿ, ತಾಳಮದ್ದಳೆ ವಿಭಾಗದಲ್ಲಿ ಪ್ರಥಮ ಸುಲೋಚನ ಕುಮಾರಿ ಬಿ ಕೆ, ದ್ವಿತೀಯ- ಹರೀಶ ಬಳಂತಿಮೊಗರು, ತೃತೀಯ ಕೆ.ಕಲಾವತಿ, ಆಕರ್ಷಕ ಬಹುಮಾನ ಸರ್ಪಂಗಳ ಈಶ್ವರ ಭಟ್ ಹಾಗೂ ವಿದ್ವಾನ್ ಎಸ್ ಬಿ ಖಂಡಿಗೆ ಪಡೆದುಕೊಂಡಿದ್ದಾರೆ.
ವಿಜೇತ ಕಲಾವಿದರು ತಮ್ಮ ಬ್ಯಾಂಕ್ ಖಾತೆ ವಿವರ ನೀಡುವಂತೆ ವಿನಂತಿಸಲಾಗಿದೆ.

