ಮಂಜೇಶ್ವರ: ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಕೈಲಾಗುವ ಸಹಾಯ ಮಾಡುವ ಸಂಘಟನೆಯೊಂದು ಕಾಲನಿಯೊಂದಕ್ಕೆ ಭೇಟಿ ನೀಡಿದಾಗ ಅಲ್ಲಿ ಕಂಡ ವಸ್ತು ಸ್ಥಿತಿ ಎಂತಹ ಕಠೋರ ಹೃದಯಿಗಳನ್ನು ಕರಗಿಸಬಲ್ಲದಂತದ್ದಾಗಿದೆ. ಅಷ್ಟಕ್ಕೂ ಈ ಕಾಲಘಟ್ಟದಲ್ಲಿ ಇಂತಹವೊಂದು ವಿಷಮ ಸ್ಥಿತಿ ನಿರ್ಮಾಣವಾಗಿರೋದು ಸರ್ಕಾರದ ನಿರ್ಲಕ್ಷ್ಯಕ್ಕೆ ಒಂದನೇ ಸ್ಥಾನ ಕಲ್ಪಿಸಿದ ಮಂಜೇಶ್ವರ ತಾಲೂಕಿನ ಸಾಕ್ಷಾತ್ ಮಂಜೇಶ್ವರ ಗ್ರಾಮ ಪಂಚಾಯತಿನ ಕೇಂದ್ರ ಪ್ರದೇಶವಾದ ಮಂಜೇಶ್ವರದಲ್ಲಾಗಿದೆ.
ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಜತ್ತೂರು ಬಳಿಯ ಐಗ್ಲೋದಿ ಎಂಬಲ್ಲಿ ವಾಸಿಸುವ ಆಂಧ್ರ ಬೆಸ್ತರ ವರ್ಗಕ್ಕೆ ಸೇರಿದ ಸುಮಾರು 60 ಕುಟುಂಬಗಳು ಕಾಲನಿಯಂತಾಗಿಸಿ ವಾಸಿಸುತ್ತಿದೆ. ಕಳೆದ 40 ವರ್ಷಗಳಿಂದ ಇಲ್ಲಿ ನೆಲೆಸಿರುವ ಈ ಕುಟುಂಬಗಳ ಸಂಬಂಧಿಕರು ಕರ್ನಾಟಕದ ಸಾಗರ, ಚಾರ್ಮಾಡಿ, ಹಾಗೂ ಕೇರಳದ ಪಯ್ಯನ್ನೂರು ಪ್ರದೇಶಗಳಲ್ಲಿ ವಲಸಿತರಾಗಿ ನೆಲೆಸುತ್ತಿದ್ದಾರೆ. ಇವರು ಶ್ರೀ ಮಾರಿಯಮ್ಮ, ಹಾಗೂ ಇನ್ನಿತರ ಪರಿವಾರ ದೇವರುಗಳ ಗುಡಿಗಳನ್ನ ನಿರ್ಮಿಸಿ, ಆರಾಧಿಸುತ್ತಿದ್ದಾರೆ.
ಹಿಂದಿ ಭಾಷೆಯಲ್ಲಿ ಮಾತನಾಡ ಬಲ್ಲ ಈ ಜನಾಂಗದವರು ಹೊಳೆಯಲ್ಲಿ ಮೀನು ಹಿಡಿದು ಅದನ್ನ ಮಾರಿ ಬದುಕು ಸವೆಸುತ್ತಿದ್ದಾರೆ. ದಿನಂಪ್ರತಿ ಬೆಳ್ಳಂಬೆಳಗ್ಗೆ 4 ಗಂಟೆಗೆ ಮಂಗಳೂರಿನ ನೇತ್ರಾವತಿ ನದಿ ಅಥವಾ ಕಾಸರಗೋಡಿನ ಚಂದ್ರಗಿರಿ ಹೊಳೆ ತೀರ ಮೀನು ಹಿಡಿಯುವ ಕಾಯಕವನ್ನ ಮಾಡ್ತಿದ್ದಾರೆ. ಅದರಿಂದ ಸಿಗುವ ಅಲ್ಪ ಆದಾಯವೇ ಈ ಬಡ ಕುಟುಂಬಗಳ ಜೀವನಾಧಾರ.
ಲಾಕ್ ಡೌನ್ ನ ಈ ವೇಳೆ ಕೆಲಸ ವಿಲ್ಲದೆ ಮನೆಯಲ್ಲಿರುವ ಈ ಕುಟುಂಬದ ಪರಿಸ್ಥಿತಿ ವೇಳೆ ವಾರ್ಡ್ ಪ್ರತಿನಿಧಿಯಾಗಲಿ ಇನ್ನಿತರ ಯಾವುದೇ ರಾಜಕೀಯ ಪಕ್ಷಗಳು ನೆರವನ್ನು ನೀಡಿಲ್ಲ. ಆಹಾರೋಪಯೋಗಿ ವಸ್ತುಗಳನ್ನು ಕೂಡ ನೀಡಿಲ್ಲ. ಇದುವರೆಗೆ ಒಂದೇ ಒಂದು ಕಿಟ್ ಕೂಡ ಇವರ ಬಳಿ ಬಂದಿಲ್ಲ. ಅತೀ ಹೆಚ್ಚಾಗಿ ಕಡು ಬಡ ಕುಟುಂಬದ ಡೇರೆ ಗಳಲ್ಲಿ ವಾಸವಾಗಿರುವ ಈ ಕುಟುಂಬಗಳು ಇದೀಗ ಸಂಕಷ್ಟ ಪಡುತ್ತಿದೆ.
ಈ ಬಗ್ಗೆ ಮಾಹಿತಿಯನ್ನರಿತು ಸ್ಕಂದ ಕರೊನಾ ಹೆಲ್ಪ್ ಡೆಸ್ಕ್ ಮಂಜೇಶ್ವರ ಇದರ ವತಿಯಿಂದ ವಜ್ರಿ ಟೆಕ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ನೇತೃತ್ವದಲ್ಲಿ ಸ್ಕಂದ ಹೆಲ್ಪ್ ಡೆಸ್ಕ್ ನ ಪಧಾಧಿಕಾರಿಗಳಾದ ಹರಿಣಾಕ್ಷಿ ಟೀಚರ್ ಕುಂಜತ್ತೂರು ಸಣ್ಣಡ್ಕ, ದಾಮೋದರ ಶೆಟ್ಟಿ ಕುಂಜತ್ತೂರು, ಬಾಲಕೃಷ್ಣ ಮಜಿಬೈಲ್ ಕಟ್ಟೆ, ರತನ್ ಕುಮಾರ್ ಹೊಸಂಗಡಿ, ಸುಖೇಶ್ ಬೆಜ್ಜ ಭೇಟಿ ನೀಡಿ, ಕುಟುಂಬದವರ ಸಂಕಷ್ಟವನ್ನರಿತು ಕುಟುಂಬಗಳ ಮಕ್ಕಳಿಗೆ ಸುಮಾರು 94 ಬಿಸ್ಕತ್ ಪ್ಯಾಕೆಟ್ ಗಳನ್ನ ನೀಡಿ, ಸಂತೈಸಿದ್ದಾರೆ.
ಮಾನವೀಯತೆಯ ನೆಲೆಯಲ್ಲಿ ಈ ಬಡ ಕುಟುಂಬಗಳಿಗೆ ನಿತ್ಯೋಪಯೋಗ ಕಿಟ್ ಆದರೂ ವಿತರಿಸುವ ಸಹಾಯ ಆಗಬೇಕಿದೆ. ಈ ಬಗ್ಗೆ ನೆರವು ನೀಡುವವರು +91 97463 68580,+91 70343 38773 ನಂಬ್ರಗಳನ್ನು ಸಂಪರ್ಕಿಸಿ ಸಹೃದಯ ಮನದಿಂದ ಸಹಾಯ ನೀಡಬಹುದು.




