ಕುಂಬಳೆ: ಕೊರೊನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಳೆದ ಐವತ್ತೊಂದು ದಿನಗಳಿಂದ ಮುಚ್ಚಲ್ಪಟ್ಟ ಅಂತರ್ ರಾಜ್ಯ ಗಡಿ ತಲಪಾಡಿಯ ಪೂರ್ಣ ನಿಯಂತ್ರಣದಿಂದಾಗಿ ಕಾಸರಗೋಡು ಜಿಲ್ಲೆಯ ವಿವಿಧ ಪ್ರದೇಶಗಳ ನೂರಾರು ಜನರಿಗೆ ಮಂಗಳೂರಿನ ಸಂಪರ್ಕ ಕಡಿತಗೊಂಡು ವ್ಯಾಪಕ ಸಮಸ್ಯೆಗಳಿಗೆ ಕಾರಣವಾಗಿದೆ.
ಮಂಗಳೂರು ಸಹಿತ ದಕ್ಷಿಣ ಕನ್ನಡದ ವಿವಿಧ ಪ್ರದೇಶಗಳಲ್ಲಿ ಕಾಸರಗೋಡಿನ ಸಾವಿರಕ್ಕಿಂತಲೂ ಮಿಕ್ಕಿದ ಜನರು ನಿತ್ಯ ವಿವಿಧ ಉದ್ಯೋಗ, ವ್ಯಾಪಾರ ಅಗತ್ಯಗಳಿಗೆ ಮಂಗಳೂರನ್ನು ಆಶ್ರಯಿಸಿರುವವರು. ಪ್ರಸ್ತುತದ ಹೆದ್ದಾರಿ ಸಹಿತ ಎಲ್ಲಾ ಗಡಿಗಳನ್ನೂ ಮುಚ್ಚಿರುವುದರಿಂದ ಮಂಗಳೂರಿಗೆ ತೆರಳಲು ಗತ್ಯಂತರವಿಲ್ಲದೆ ಸಂಕಷ್ಟಕ್ಕೊಳಗಾಗಿದ್ದು, ಹಲವು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲೂ ಇದ್ದಾರೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕವು ಕಾಸರಗೋಡಿನ ಜನಸಾಮಾನ್ಯರ ಅಗತ್ಯಗಳಿಗೆ ಕರ್ನಾಟಕದ ದಕ್ಷಿಣ ಕನ್ನಡಕ್ಕೆ ಸಂಚರಿಸಲು ಮತ್ತು ಮರಳಲು ಅನುವು ಮಾಡಿಕೊಡುವಂತೆ ಆಗ್ರಹಿಸಿ ನಿತ್ಯ ಪಾಸ್, ಅಥವಾ ವಾರದ ಪಾಸ್ ವ್ಯವಸ್ಥೆಗೊಳಿಸಿಕೊಡುವಂತೆ ಕರ್ನಾಟಕದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರು, ಮಾಜಿ ಪೋಲೀಸ್ ಮಹಾನಿರ್ದೇಶಕ ಡಾ.ಕೆ.ವಿ.ಆರ್ ಠಾಗೂರ್, ಕರ್ನಾಟಕ ಜಾನಪದ ಪರಿಷತ್ತು ಕೇಂದ್ರಾಧ್ಯಕ್ಷ ಡಾ.ಟಿ.ತಿಮ್ಮೇ ಗೌಡ ಮೊದಲಾದ ಅಧಿಕೃತರಿಗೆ ಮನವಿ ಪತ್ರ ಸಲ್ಲಿಸಿದೆ.
ಮನವಿಯ ಪೂರ್ಣ ಪಾಠ:
ವಿಷಯ : ಕಾಸರಗೋಡು - ಮಂಗಳೂರು ಕರ್ನಾಟಕ ಪ್ರಸ್ತುತ ಗಡಿಯಲ್ಲಿರುವ ಸಮಶ್ಯೆ ಪರಿಹರಿಸಲು ಕೋರಿಕೆ
ಕನ್ನಡ ನಾಡು ಎಂದೇ ಖ್ಯಾತಿ ಪಡೆದ ಗಡಿನಾಡು ಕಾಸರಗೋಡಿನ ಹೆಚ್ಚಿನ ಜನರು, ಉದ್ಯೋಗ ಹಾಗೂ ತಮ್ಮ ದೈನಂದಿನ ಅವಶ್ಯಕತೆಗಳಿಗೆ ಮಂಗಳೂರನ್ನು ಅವಲಂಬಿಸಿದ್ದಾರೆ. ಮಂಗಳೂರಿನ ಎಲ್ಲಾ ಅಂಗಡಿಗಳು ಹಾಗು ಸಂಸ್ಥೆಗಳು ಕೆಲಸ ಇದೀಗ ಮೂರನೇ ಹಂತದ ಲೋಕ್ ಡೌನ್ ಬಳಿಕ ಕಾರ್ಯಾರಂಭಿಸಿದ್ದು ಇಲ್ಲಿ ದುಡುಯುತಿರುವ , ಕಾಸರಗೋಡಿನ ಕನ್ನಡಿಗರಿಗೆ ತಮ್ಮ ಉದ್ಯೋಗಕ್ಕೆ ತಲುಪಲು ತಲಪಾಡಿಯಲ್ಲಿ ವಾಹನಗಳನ್ನು ಹೋಗಲು ಬಿಡದಿರುವುದ್ದರಿಂದ ತುಂಬಾ ತೊಂದರೆಗೊಳಗುತಿದ್ದಾರೆ . ಇದರಿಂದ ಮುಂದಿನ ದಿನಗಳಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಗಡಿನಾಡಿನಲ್ಲಿ ಬರುವ ಸಾಧ್ಯತೆ ಇದೇ. ಅದೇರೀತಿ ತರಬೇತಿ ಪಡೆದ ಉದ್ಯೋಗಾರ್ಥಿಗಳ ಕೊರತೆಯಿಂದ ಮಂಗಳೂರಿನ ಕಚೇರಿಗಳಲ್ಲಿ ಕೆಲಸಕಾರ್ಯಗಳು ವಿಳಂಬ ವಾಗುವ ಸಾಧ್ಯತೆ ಇದೆ ಇದರಿಂದ ಆರ್ಥಿಕ ಸಂಕಷ್ಟ ತಲೆದೋರಲು ಸಾಧ್ಯತೆ ಇದೆ. ಆದುದ್ದರಿಂದ ಮಂಗಳೂರಿನಲ್ಲಿ ಕೆಲಸಮಾಡುವ ಜನರಿಗೆ ಕಾಸರಗೋಡು ಮತ್ತು ಮಂಗಳೂರು ಮಧ್ಯೆ ದಿನನಿತ್ಯ ತಮ್ಮ ಸ್ವಂತ ವಾಹನಗಳಲ್ಲಿ ಹೋಗಿ ಬರಲು ಅನುವು ಮಾಡಿಕೊಡುವ ಪಾಸ್ ವ್ಯವಸ್ಥೆಯನ್ನು ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಯಪೂರ್ವಕವಾಗಿ ಗಡಿನಾಡಿನ ಜನತೆಯ ವತಿಯಿಂದ ಈ ಮೂಲಕ ಕೇಳಿಕೊಳ್ಳುತೇನೇ.


