ಮಂಜೇಶ್ವರ: ಗಡಿ ಪ್ರದೇಶಗಳ ಮೂಲಕ ಇತರ ರಾಜ್ಯಗಳಿಂದ ಊರಿಗೆ ಮರಳುವ ಮಂದಿಗೆ ಸಹಾಯ ಒದಗಿಸಲು ಚೆಕ್ ಪೋಸ್ಟ್ ಗಳಲ್ಲಿ ದುಡಿಯುತ್ತಿರುವ ಶಿಕ್ಷಕರ ಸಹಿತ ಮಂದಿಗಳ ಸಾಲಿನಲ್ಲಿ ಅಕ್ಷಯ ಜಿಲ್ಲಾ ಯೋಜನೆ ಕಚೇರಿಯ ಸಿಬ್ಬಂದಿಯ ಸೇವೆಯೂ ಅನನ್ಯವಾಗಿದೆ.
ಮೂರು ಶಿಫ್ಟ್ ಗಳಲ್ಲಿ 24 ತಾಸುಗಳೂ ಇಲ್ಲಿ ಸೇವೆ ನಡೆಯುತ್ತಿದೆ. ಗಡಿದಾಟಿ ಬರುವ ಪ್ರಯಾಣಿಕ ಮಾಹಿತಿ ಸಂಗ್ರಹಿಸಿ ವೆಬ್ ಸೈಟ್ ನಲ್ಲಿ ಅಪ್ ಲೋಡ್ ನಡೆಸುವ ವೇಳೆ ಹೆಲ್ಪ್ ಡೆಸ್ಕ್ ಸದಸ್ಯರ ಕರ್ತವ್ಯಕಕ್ಕೆ ತಲೆದೋರುವ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ವನ್ನು ಇವರು ಒದಗಿಸುತ್ತಿದ್ದಾರೆ. ಬೆಳಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ, ಸಂಜೆ 4 ರಿಂದ ರಾತ್ರಿ 12 ಗಂಟೆ ವರೆಗೆ, ರಾತ್ರಿ 12ರಿಂದ ಬೆಳಗ್ಗೆ 8 ಗಂಟೆ ವರೆಗಿನ ಮೂರು ಶಿಫ್ಟ್ ಗಳಲ್ಲಿ ಇಲ್ಲಿ ಸೇವೆ ಜರುಗುತ್ತಿದೆ. ಪ್ರತಿ ಶಿಫ್ಟ್ ನಲ್ಲಿ ತಲಾ 5 ಅಕ್ಷಯ ಘಟಕದಾರರು, ಅಕ್ಷಯ ಜಿಲ್ಲಾ ಕಚೇರಿಯ ಇಬ್ಬರು ಸಿಬ್ಬಂದಿ ಇರುವರು. ನ್ಯಾಷನಲ್ ಇನ್ ಫಾರ್ಮೆ ಟಿಕ್ ಜಿಲ್ಲಾ ಅಧಿಕಾರಿಯ ಮತ್ತು ಐ.ಟಿ.ಮಿಷನ್ ಸಿಬ್ಬಂದಿಯ ಸಹಕಾರದೊಂದಿಗೆ ಅಕ್ಷಯ ತಲಪ್ಪಾಡಿ ಹೆಲ್ಪ್ ಡೆಸ್ಕ್ ಚಟುವಟಿಕೆಗಳು ಸಕ್ರಿಯವಾಗಿವೆ ಎಂದು ಅಕ್ಷ ಜಿಲ್ಲಾ ಯೋಜನೆ ಪ್ರಬಂಧಕ ಎನ್.ಎಸ್.ಅಜೀಷ್ ತಿಳಿಸಿರುವರು.


