ಕಾಸರಗೋಡು: ಮಸ್ಕತ್ ನಿಂದ 181 ಮಂದಿ ಪ್ರಯಾಣಿಕರನ್ನು ಹೊತ್ತ 9-442ಏರ್ ಇಂಡಿಯಾ ಎಕ್ಸ್‍ಪ್ರಸ್ ವಿಮಾನ ಶನಿವಾರ ರಾತ್ರಿ 10ಕ್ಕೆ ಕೊಚ್ಚಿ ನೆಡುಂಬಾಶ್ಯೇರಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ. ವಿಮಾನದಲ್ಲಿ 48ಮಂದಿ ಗರ್ಭಿಣಿಯರು ಹಾಗೂ ನಾಲ್ಕು ಹಸುಗೂಸುಗಳು, 77ಮಂದಿ ಚಿಕಿತ್ಸೆಗಾಗಿ ಊರಿಗೆ ಆಗಮಿಸಿದವರು, 22ಮಂದಿ ಉದ್ಯೋಗಿಗಳು, ವಿಸಿಟಿಂಗ್ ವಿಸಾ ಮೂಲಕ ಓಮಾನ್ ತೆರಳಿದ್ದ 30ಮಂದಿಯೂ ಒಳಗೊಂಡಿದ್ದಾರೆ.
ಇನ್ನು ದೋಹಾದಿಂದ 178 ಮಂದಿ ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನ ತಡರಾತ್ರಿ ಕೊಚ್ಚಿ ವಿಮಾನ ನಿಲ್ದಾಣ ತಲುಪಿದೆ. ಗರ್ಭಿಣಿಯರು, ನವಜಾತ ಶಿಶುಗಳು, ವೃದ್ಧರನ್ನು ಒಳಗೊಂಡಿತ್ತು. ವಿಮಾಣದಲ್ಲಿ ಆಗಮಿಸಿದ ಗರ್ಭಿಣಿಯರು ಹಾಗೂ ವೃದ್ಧರನ್ನು ಅವರ ಮನೆಗಳಲ್ಲಿ ನಿಗಾದಲ್ಲಿರಲು ಸೂಚಿಸಲಾಗಿದ್ದರೆ, ಇತರ ಪ್ರಯಾಣಿಕರನ್ನು ಸರ್ಕಾರ ನಿಗದಿಪಡಿಸಿದ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಿಕೊಡಲಾಗಿದೆ. ಮಾಲ್ದೀವ್ಸ್‍ನಿಂದ 698ಮಂದಿ ಪ್ರಯಾಣಿಕರನ್ನು ಹೊತ್ತ ನೌಕಾಪಡೆಯ ಹಡಗು ಭಾನುವಾರ ಕೊಚ್ಚಿ ಬಂದರಿಗೆ ತಲುಪಿದ್ದು, ಅದರಲ್ಲಿನ ಪ್ರಯಾಣಿಕರನ್ನು ಆಯಾ ಜಿಲ್ಲೆಯನಿಗಾ ಕೇಂದ್ರಕ್ಕೆ ಕಳುಹಿಸಲಾಗಿದೆ. 'ಜಲಾಶ್ವ'ಹೆಸರಿನ ಈ ಹಡಗಿನಲ್ಲಿ 440ಮಂದಿ ಕೇರಳೀಯರು, 187ಮಂದಿ ತಮಿಳ್ನಾಡು ನಿವಾಸಿಗಳು ಒಳಗೊಂಡಂತೆ ದೇಶದ ವಿವಿಧ ರಾಜ್ಯಗಳ ನಿವಾಸಿಗಳಿದ್ದಾರೆ. ತಮಿಳ್ನಾಡು ಹೊರತುಪಡಿಸಿ, ಇತರ ರಾಜ್ಯಗಳ ನಿವಾಸಿಗಳನ್ನು ಕೊಚ್ಚಿಯಲ್ಲಿ ಕ್ವಾರಂಟೈನ್‍ನಲ್ಲಿರಿಸಲು ಸರ್ಕಾರ ತೀರ್ಮಾನಿಸಿದೆ.


