ನವದೆಹಲಿ: ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಮದ್ರಾಸ್ಸಿನ ಐಐಟಿ ಅಗ್ರ ಶ್ರೇಯಾಂಕ ಪಡೆದರೆ, ಉದ್ಯಾನನಗರಿ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ( ಐಐಎಸ್ ಸಿ) ಎರಡನೇ ಶ್ರೇಯಾಂಕ ಪಡೆದುಕೊಂಡಿದೆ. ದೆಹಲಿಯ ಐಐಟಿ ಮೂರನೇ ಸ್ಥಾನದಲ್ಲಿದೆ.
ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಇಂದು ರಾಷ್ಟ್ರೀಯ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಶ್ರೇಯಾಂಕ ಪಟ್ಟಿಯನ್ನು ಪ್ರಕಟ ಮಾಡಿದೆ.ಬೆಂಗಳೂರಿನ ಐಐಎಸ್ ಸಿ, ಜವಹರ್ ಲಾಲ್ ನೆಹರು ವಿವಿ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯ ದೇಶದ ಅತ್ಯುತ್ತಮ ಮೂರು ವಿಶ್ವವಿದ್ಯಾಲಯಗಳಾಗಿವೆ.ಅಹಮದಾಬಾದ್, ಬೆಂಗಳೂರು ಮತ್ತು ಕಲ್ಕತ್ತಾದ ಐಐಎಂಗಳು ನಂತರದ ಸ್ಥಾನದಲ್ಲಿವೆ.
ಅತ್ಯುತ್ತಮ ಕಾಲೇಜುಗಳ ಪೈಕಿಯಲ್ಲಿ ಮಿರಾಂದಾ ಕಾಲೇಜ್ ಅಗ್ರ ಸ್ಥಾನದಲ್ಲಿದ್ದರೆ, ಲೇಡಿ ಶ್ರೀರಾಮ ಮಹಿಳಾ ಕಾಲೇಜು ಮತ್ತು ಸೆಂಟ್ ಸ್ಟೇಫೆನ್ಸ್ ಕಾಲೇಜು ಕ್ರಮವಾಗಿ ಎರಡು ಮತ್ತು ಮೂರನೇ ಶ್ರೇಯಾಂಕ ಪಡೆದುಕೊಂಡಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೆÇಖ್ರಿಯಾಲ್ ನಿಶಾಂಕ್ ಘೋಷಿಸಿದ್ದಾರೆ.


