ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ ನಾಲ್ಕು ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇವರಲ್ಲಿ ಮಹಾರಾಷ್ಟ್ರದಿಂದ ಬಂದ ಇಬ್ಬರು ಮಹಿಳೆಯರು, ವಿದೇಶದಿಂದ ಬಂದ ಇಬ್ಬರು ಪುರುಷರಿಗೆ ರೋಗ ಬಾಧಿಸಿದೆ ಎಂದು ಜಿಲ್ಲಾ ವೈದಾ„ಕಾರಿ ಎ.ವಿ.ರಾಮದಾಸ್ ತಿಳಿಸಿದ್ದಾರೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 104 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಾರಾಷ್ಟ್ರದಿಂದ ಬಂದ 44 ಮತ್ತು 45 ವರ್ಷ ಪ್ರಾಯದ ಮಂಗಲ್ಪಾಡಿಯ ಇಬ್ಬರು ಮಹಿಳೆಯರು. ದುಬೈಯಿಂದ ಬಂದ 49 ವರ್ಷ ಪ್ರಾಯದ ಚೆಮ್ನಾಡ್ ನಿವಾಸಿ, ಕುವೈಟ್‍ನಿಂದ ಬಂದ 36 ವರ್ಷ ಪ್ರಾಯನದ ಮಡಿಕೈ ನಿವಾಸಿಗೆ ರೋಗ ಬಾಧಿಸಿದೆ.
ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 21 ವರ್ಷ ಪ್ರಾಯದ ಚೆಮ್ನಾಡ್ ನಿವಾಸಿ ಮತ್ತು ಪಡನ್ನಕಾಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಾರಾಷ್ಟ್ರದಿಂದ ಬಂದ 38 ವರ್ಷ ಪ್ರಾಯದ ವಲಿಯಪರಂಬ ನಿವಾಸಿ ಗುಣಮುಖ ರಾಗಿದ್ದಾರೆ.
ಮನೆಗಳಲ್ಲಿ 3220 ಮಂದಿ ಮತ್ತು ಆಸ್ಪತ್ರೆಗಳಲ್ಲಿ 358 ಮಂದಿ ಸಹಿತ 3578 ಮಂದಿ ನಿಗಾದಲ್ಲಿದ್ದಾರೆ. ಶಂಕಿತ 39 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 322 ಮಂದಿ ನಿಗಾ ದಿನಗಳನ್ನು ಪೂರ್ತಿಗೊಳಿಸಿದರು.
ಕೇರಳದಲ್ಲಿ 78 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಶುಕ್ರವಾರ 78 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ 32 ಮಂದಿ ಗುಣಮುಖರಾಗಿದ್ದಾರೆ.
ತೃಶ್ಶೂರು-14, ಮಲಪ್ಪುರಂ-14. ಆಲಪ್ಪುಳ-13, ಪತ್ತನಂತಿಟ್ಟ-7, ಎರ್ನಾಕುಳಂ-5, ಪಾಲ್ಘಾಟ್-5, ಕೊಲ್ಲಂ-4, ಕಲ್ಲಿಕೋಟೆ-4, ಕಾಸರಗೋಡು-4, ಕೋಟ್ಟಯಂ-3, ಕಣ್ಣೂರು-3(ಒಬ್ಬರು ಸಾವಿಗೀಡಾದರು), ತಿರುವನಂತಪುರ-2, ಇಡುಕ್ಕಿ-1 ಎಂಬಂತೆ ರೋಗ ಬಾಧಿಸಿದೆ. ಇವರಲ್ಲಿ 36 ಮಂದಿ ವಿದೇಶದಿಂದ ಬಂದವರು. 31 ಮಂದಿ ಇತರ ರಾಜ್ಯಗಳಿಂದ ಬಂದವರು. 10 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಕಣ್ಣೂರು ಜಿಲ್ಲೆಯಲ್ಲಿ ಸಾವಿಗೀಡಾದ ಉಸ್ಮಾನ್ ಕುಟ್ಟಿ(71) ಅವರಿಗೆ ಕೋವಿಡ್ ಬಾಧಿಸಿದ್ದು ದೃಢೀಕರಿಸಲಾಗಿದೆ. ಇದರೊಂದಿಗೆ ಕೇರಳದಲ್ಲಿ ಕೋವಿಡ್‍ನಿಂದ ಸಾವಿಗೀಡಾದವರ ಸಂಖ್ಯೆ 19ಕ್ಕೇರಿತು.
ರೋಗ ದೃಢೀಕರಿಸಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 32 ಮಂದಿ ಗುಣಮುಖರಾಗಿದ್ದಾರೆ. ಕೊಲ್ಲಂ-7, ಪಾಲ್ಘಾಟ್-6, ಇಡುಕ್ಕಿ-4, ಎರ್ನಾಕುಳಂ-4(ಒಬ್ಬರು ತಿರುವನಂತಪುರ ನಿವಾಸಿ), ತೃಶ್ಶೂರು-4, ಕಲ್ಲಿಕೋಟೆ-2, ಕಣ್ಣೂರು-2(ಒಬ್ಬರು ಕಾಸರಗೋಡು ನಿವಾಸಿ), ತಿರುವನಂತಪುರ-1, ಕೋಟ್ಟಯಂ-1, ಕಾಸರಗೋಡು -1 ಎಂಬಂತೆ ಗುಣಮುಖರಾಗಿದ್ದಾರೆ. ಇದೀಗ ವಿವಿಧ ಆಸ್ಪತ್ರೆಗಳಲ್ಲಿ 1303 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ತನಕ 999 ಮಂದಿ ರೋಗ ಮುಕ್ತರಾಗಿದ್ದಾರೆ.
ವಿವಿಧ ಜಿಲ್ಲೆಗಳಲ್ಲಾಗಿ 2,27,402 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 2,25,417 ಮಂದಿ ಮನೆಗಳಲ್ಲೂ, ಇನ್‍ಸ್ಟಿಟ್ಯೂಶನಲ್ ಕ್ವಾರೆಂಟೈನ್‍ನಲ್ಲಿದ್ದಾರೆ. 1985 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಶುಕ್ರವಾರ ಶಂಕಿತ 242 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ವರೆಗೆ 1,06,850 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದೆ. 3392 ಸ್ಯಾಂಪಲ್ ಪರೀಕ್ಷೆ ವರದಿ ಬರಲು ಬಾಕಿಯಿದೆ. ಕಾಸರಗೋಡು ಜಿಲ್ಲೆಯ ಪೈವಳಿಕೆ ಮತ್ತು ಪಿಲಿಕ್ಕೋಡನ್ನು ಹಾಟ್‍ಸ್ಪಾಟ್‍ನಿಂದ ಹೊರತು
ಪಡಿಸಲಾಗಿದೆ.
ಮಾಸ್ಕ್ ಧರಿಸದ 246 ಮಂದಿ ವಿರುದ್ಧ ಕೇಸು : ಕಾಸರಗೋಡು ಜಿಲ್ಲೆಯಲ್ಲಿ ಮಾಸ್ಕ್ ಧರಿಸದ 246 ಮಂದಿ ವಿರುದ್ಧ ಪೆÇಲೀಸರು ಕೇಸು ದಾಖಲಿಸಿದ್ದಾರೆ. ಇದು ವರೆಗೆ ಒಟ್ಟು ಮಾಸ್ಕ್ ಧರಿಸದ 5937 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.
ಲಾಕ್‍ಡೌನ್ ಉಲ್ಲಂಘನೆ : 6 ಮಂದಿ ಬಂಧನ : ಲಾಕ್‍ಡೌನ್ ಉಲ್ಲಂಘಿಸಿದ ಆರೋಪದಲ್ಲಿ ಐದು ಕೇಸುಗಳನ್ನು ದಾಖಲಿಸಲಾಗಿದೆ. ಕುಂಬಳೆ-2, ಕಾಸರಗೋಡು-1, ಬೇಕಲ-1, ಹೊಸದುರ್ಗ-1 ಕೇಸು ದಾಖಲಾಗಿದೆ. ಆರು ಮಂದಿಯನ್ನು ಬಂಧಿಸಲಾಯಿತು. ಈ ವರೆಗೆ 2617 ಮಂದಿ ವಿರುದ್ಧ ಕೇಸುಗಳನ್ನು ದಾಖಲಿಸಲಾಗಿದ್ದು, 3289 ಮಂದಿಯನ್ನು ಬಂಧಿಸಲಾಗಿದೆ. 1124 ವಾಹನಗಳನ್ನು ವಶಪಡಿಸಲಾಗಿದೆ.


