ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ ನಾಲ್ಕು ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ ನಾಲ್ಕು ಮಂದಿ ಗುಣಮುಖರಾಗಿದ್ದಾರೆ. ರೋಗ ಬಾಧಿತರಲ್ಲಿ ಇಬ್ಬರು ವಿದೇಶದಿಂದ ಹಾಗು ಇಬ್ಬರು ಮಹಾರಾಷ್ಟ್ರದಿಂದ ಬಂದವರು.
58 ವರ್ಷದ ಮೀಂಜ ಪಂಚಾಯತ್‍ನ ನಿವಾಸಿ, 59 ವರ್ಷದ ಉದುಮ ಪಂಚಾಯತ್ ನಿವಾಸಿ, 18 ವರ್ಷದ ಚೆಮ್ನಾಡ್ ಪಂಚಾಯತ್ ನಿವಾಸಿ, 36 ವರ್ಷದ ಉದುಮ ಪಂಚಾಯತ್ ನಿವಾಸಿಗೆ ಸೋಂಕು ಬಾಧಿಸಿದೆ.
ಕಾಂಞಂಗಾಡ್‍ನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 21 ವರ್ಷದ ಮಂಗಲ್ಪಾಡಿ ಪಂಚಾಯತ್ ನಿವಾಸಿ, ಪಡನ್ನಕ್ಕಾಡ್ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 58 ವರ್ಷದ ವಲಿಯಪರಂಬ ನಿವಾಸಿ, ಉಕ್ಕಿನಡ್ಕ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 40 ವರ್ಷದ ಪುಲ್ಲೂರು ಪೆರಿಯ ನಿವಾಸಿ, ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 30 ವರ್ಷದ ಕಾರಡ್ಕ ಪಂಚಾಯತ್ ನಿವಾಸಿ ಗುಣಮುಖರಾಗಿದ್ದಾರೆ.
ಕೇರಳದಲ್ಲಿ 118 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಶುಕ್ರವಾರ 118 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಮಲಪ್ಪುರ ಜಿಲ್ಲೆಯಲ್ಲಿ 18, ಕೊಲ್ಲಂ-17, ಆಲಪ್ಪುಳ-13, ಎರ್ನಾಕುಳಂ-11, ಪಾಲ್ಘಾಟ್-10, ಪತ್ತನಂತಿಟ್ಟ-9, ತಿರುವನಂತಪುರ-8, ಕಣ್ಣೂರು-8, ಕೋಟ್ಟಯಂ-7, ಕಲ್ಲಿಕೋಟೆ-6, ವಯನಾಡು-4, ಕಾಸರಗೋಡು-4, ಇಡುಕ್ಕಿ-2 ತೃಶ್ಶೂರು-1 ಎಂಬಂತೆ ರೋಗ ಬಾಧಿಸಿದೆ.
ರೋಗ ಬಾಧಿತರಲ್ಲಿ 67 ಮಂದಿ ವಿದೇಶದಿಂದ ಬಂದವರು. 45 ಮಂದಿ ಇತರ ರಾಜ್ಯಗಳಿಂದ ಬಂದವರು. 6 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ.
ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 96 ಮಂದಿ ಗುಣಮುಖರಾಗಿದ್ದಾರೆ. ಕಣ್ಣೂರು ಜಿಲ್ಲೆ-21(ಒಬ್ಬರು ಕಾಸರಗೋಡು), ಮಲಪ್ಪುರಂ-15(ಒಬ್ಬರು ಪಾಲ್ಘಾಟ್), ಕೊಲ್ಲಂ-14, ಪಾಲ್ಘಾಟ್-14(ತಲಾ ಒಬ್ಬರು ಮಲಪ್ಪುರಂ ಮತ್ತು ತೃಶ್ಶೂರು), ತೃಶ್ಶೂರು-12, ಕೋಟ್ಟಯಂ-7(ಒಬ್ಬರು ತಿರುವನಂತಪುರ), ಆಲಪ್ಪುಳ-4, ತಿರುವನಂತಪುರ-3, ಕಲ್ಲಿಕೋಟೆ-3, ಕಾಸರಗೋಡು-3 ಎಂಬಂತೆ ಗುಣಮುಖರಾಗಿದ್ದಾರೆ.
ಪ್ರಸ್ತುತ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 1380 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ 1509 ಮಂದಿ ಗುಣಮುಖರಾಗಿದ್ದಾರೆ. 21 ಮಂದಿ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 132569 ಮಂದಿ ನಿಗಾದಲ್ಲಿದ್ದಾರೆ. ಅವರಲ್ಲಿ 130655 ಮಂದಿ ಮನೆಗಳಲ್ಲೂ, ಇನ್‍ಸ್ಟಿಟ್ಯೂಶನಲ್ ಕ್ವಾರೆಂಟೈನ್‍ನಲ್ಲಿದ್ದಾರೆ. 1914 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಶುಕ್ರವಾರ ಶಂಕಿತ 197 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


