ಕಾಸರಗೋಡು: ಸಂಪರ್ಕ ಮೂಲಕ ಕೋವಿಡ್ ಹರಡದಂತೆ ಅತೀವ ಜಾಗ್ರತೆ ವಹಿಸಬೇಕು ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೋವಿಡ್ ಪ್ರತಿರೋಧ ಸಂಬಂಧ ಜನಪ್ರತಿನಿಧಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸಂಪರ್ಕ ಮೂಲಕ ಕೋವಿಡ್ ಹರಡುವಿಕೆ ನಿಯಂತ್ರಣದಲ್ಲಿದೆ. ಈ ವರೆಗೆ 11 ಮಂದಿಗೆ ಸಂಪರ್ಕ ಮೂಲಕ ಈ ರೋಗ ತಗುಲಿದೆ. ಇತರ ರಾಜ್ಯಗಳಿಂದ, ವಿದೇಶಗಳಿಂದ ಆಗಮಿಸುವ ಮಂದಿಗೆ ಮನೆಗಳಲ್ಲಿ ಕ್ವಾರೆಂಟೈನ್ ಕಡ್ಡಾಯಯವಾಗಿದೆ. ಅನಿವಾರ್ಯವಾದಲ್ಲಿ ಸಾಂಸ್ಥಿಕ ನಿಗಾ ವ್ಯವಸ್ಥೆ ಒದಗಿಸಲಾಗುವುದು ಎಂದವರು ವಿವರಿಸಿದರು. ಜಿಲ್ಲಾಡಳಿತೆ ಈ ಸಂಬಂಧ ನಡೆಸುತ್ತಿರುವ ಅವಿರತ ಯತ್ನಗಳಿಗೆ ಜನಪ್ರತಿನಿಧಿಗಳ ಬೆಂಬಲ ಅನಿವಾರ್ಯ ಎಂದು ತಿಳಿಸಿದರು. ಪ್ರತಿರೋಧ ಚಟುವಟಿಕೆಗಳ ಸಂಬಂಧ ವಿವಿಧ ವಿಚಾರಗಳಲ್ಲಿ ಚರ್ಚೆ ನಡೆಸಲಾಯಿತು.
ಕೋವಿಡ್ ಪ್ರತಿರೋಧ ಸಂಬಂಧ ಅವಲೋಕನ ಸಭೆ ಪ್ರತಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ನಡೆಸಲು ನಿರ್ಧರಿಸಲಾಗಿದೆ. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎಂ.ಸಿ.ಕಮರುದ್ದೀನ್, ಎಂ.ರಾಜಗೋಪಾಲನ್, ಕೆ.ಕುಂಞÂ ರಾಮನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಕಾಞಂಗಾಡ್ ನಗರಸಭೆ ಅಧ್ಯಕ್ಷ ಪೆÇ್ರ.ಕ.ಪಿ.ಜಯರಾಜನ್, ಗ್ರಾಮ ಪಂಚಾಯತ್ ಅಧ್ಯಕ್ಷರ ಅಸೋಸಿಯೇಶನ್ ಅಧ್ಯಕ್ಷ ಎ.ಎ.ಜಲೀಲ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ಕೆ.ಕೆ.ರೆಜಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಸಭೆಯ ಚರ್ಚೆಗಳು:
ಜನ್ಮ ಶತಾಬ್ಧಿ ಎಕ್ಸ್ ಪ್ರೆಸ್ ರೈಲು ಕಣ್ಣೂರಿಗೆ ಆಗಮಿಸುವ ಅವಧಿಯಲ್ಲಿ ಮತ್ತು ಹೊರಡುವ ಸಮಯದಲ್ಲಿ ಕಾಸರಗೋಡು ಜಿಲ್ಲೆಗೆ ಪ್ರತ್ಯೇಕ ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ ಒದಗಿಸಬೇಕು ಎಂದು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಆಗ್ರಹಿಸಿದರು.
ಮಂಗಳೂರಿನಿಂದ ಕೇರಳಕ್ಕೆ ಮೆಮು ಸರ್ವೇಸ್ ಆರಂಭಿಸಬೇಕು. ಡ್ರೈ ವಿಂಗ್ ಸ್ಕೂಲ್ ಗಳು ಚಟುವಟಿಕೆ ಪುನರಾರಂಭಿಸಲು ಅನುಮತಿ ನೀಡಬೇಕು. ಮಂಗಳೂರಿಗೆ ತೆರಳುವವರ ಮತ್ತು ಮಂಗಳೂರಿನಿಂದ ಮರಳುವವರ ಯಾತ್ರಾ ಪಾಸ್ ಸೌಲಭ್ಯ ವಿಚಾರದಲ್ಲಿ ಖಚಿತತೆ ಬೇಕು ಎಂಬ ಬೇಡಿಕೆಗಳು ಸಭೆಯಲ್ಲಿ ಮೂಡಿಬಂದುವು. ವಿವಿಧ ವಿಚಾರಗಳಲ್ಲಿ ಚರ್ಚೆಗಳು ನಡೆದುವು.


