ಕಾಸರಗೋಡು: ಉದಯಗಿರಿ ವಕಿರ್ಂಗ್ ವುಮನ್ಸ್ ಹಾಸ್ಟೆಲ್ ನಿನ್ನೆ ಉದ್ಘಾಟನೆಗೊಂಡಿತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟನೆ ನಡೆಸಿದರು.ಇದೇ ವೇಳೆ ಚೆರ್ಕಳದಲ್ಲಿ ನಿರ್ಮಿಸಲಾಗುವ ಚಂದ್ರಗಿರಿ ಮೆನ್ಸ್ ಹಾಸ್ಟೆಲ್ ನ ಶಿಲಾನ್ಯಾಸವನ್ನೂ ಅವರು ನೆರವೇರಿಸಿದರು.
ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಶಾಸಕ ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಮಧೂರು ಗ್ರಾಮಪಂಚಾಯತ್ ಅಧ್ಯಕ್ಷೆ ಮಾಲತಿ ಸುರೇಶ್, ಉಪಾಧ್ಯಕ್ಷ ದಿವಾಕ ಆಚಾರ್ಯ, ಚೆಂಗಳ ಗ್ರಾಮಪಂಚಾಯತ್ ಅಧ್ಯಕ್ಷೆ ಷಾಹಿನಾ ಸಲೀಂ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ವಾಗತಿಸಿದರು. ಕಾಸರಗೋಡು ಅಭಿವೃದ್ಧಿ ಅಧಿಕಾರಿ ಇ.ಪಿ.ರಾಜ್ ಮೋಹನ್ ವಂದಿಸಿದರು.


