ಕಾಸರಗೋಡು: ಜಿಲ್ಲೆಯಲ್ಲಿ ನಡೆಸಿರುವ ವಿದ್ಯುತ್ ವಿತರಣೆ ಪ್ರಕ್ರಿಯೆಯಯಲ್ಲಿ ಚುರುಕುತನ ಇತರರಿಗೆ ಮಾದರಿಯಾಗಿದೆ. ಕಳೆದ 4 ವರ್ಷದಲ್ಲಿ ಈ ನಿಟ್ಟಿನಲ್ಲಿ ವೆಚ್ಚಮಾಡಿದ್ದು ಬರೋಬ್ಬರಿ 176.78 ಕೋಟಿ ರೂ.
ಉತ್ತಮ ಗುಣಮಟ್ಟದ ವಿದ್ಯುತ್ ಸಂಪರ್ಕ ಎಲ್ಲರಿಗೂ ಲಭಿಸಿಬೇಕು ಎಂಬ ಉದ್ದೇಶವನ್ನು ಮುಂದಿರಿಸಿಕೊಂಡು ರಾಜ್ಯ ಸರಕಾರ ನಡೆಸಿದ ಯತ್ನ ಕಾಸರಗೋಡು ಜಿಲ್ಲೆಯ ಅಭಿವೃದ್ಧಿಗೆ ಬಹಳದೊಡ್ಡ ಕೊಡುಗೆ ನೀಡಿದೆ. ವಿದ್ಯುತ್ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಮೂಲಭೂತ ಸೌಲಭ್ಯಗಳಿಗಾಗಿ ಮತ್ತು ವಿವಿಧ ತತ್ಸಂಬಧಿ ಚಟುವಟಿಕೆಗಳಿಗೆ ಜಿಲ್ಲೆಯಲ್ಲಿ 176,78,33,991 ರೂ. ವೆಚ್ಚ ಮಾಡಲಾಗಿದೆ.
ಸಂಪರ್ಕ ಕ್ಕಾಗಿ ಅರ್ಜಿ ಸಲ್ಲಿಸಿದ್ದ ಎಲ್ಲರಿಗೂ ವಿಳಂಬವಿಲ್ಲದೆ ವಿದ್ಯುತ್ ಸಂಪರ್ಕ ಲಭಿಸುತ್ತಿದೆ. ಕಳೆದ 4 ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ 80.966 ಮಂದಿಗೆ ನೂತನ ಸಂಪರ್ಕ ಲಭಿಸಿದೆ ಎಂದು ಕೆ.ಎಸ್.ಇ.ಬಿ. ಡೆಪ್ಯೂಟಿ ಚೀಫ್ ಇಜಿನಿಯರ್ ಪಿ.ಸುರೇಂದ್ರ ತಿಳಿಸಿದರು. ಈ ನಿಟ್ಟಿನಲ್ಲಿ 34.16 ಕೋಟಿ ರೂ. ವೆಚ್ಚಮಾಡಲಾಗಿದೆ. ವಿದ್ಯುತ್ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ 280.36 ಕಿ.ಮೀ. ಹೈಟೆನ್ಶನ್ ಲೈನ್ ಗಳು, 897.67 ಕಿ.ಮೀ. ಲೋ ಟೆನ್ಶನ್ ಲೈನ್ ಗಳನ್ನು ಸ್ಥಾಪಿಸಲಾಗಿದೆ. ಇದಕ್ಕಾಗಿ 64.80 ಕೊಟಿ ರೂ. ವೆಚ್ಚವಾಗಿದೆ. 18.10 ಕೋಟಿ ರೂ. ವೆಚ್ಚದಲ್ಲಿ 2726.55 ಕಿ.ಮೀ. ಲೋ ಟೆನ್ಶನ್ ಲೈನ್, 129.39 ಕಿ.ಮೀ. ಹೈಟೆನ್ಶನ್ ಲೈನ್ ಗಳ ರೀ ಕಂಡಕ್ಟರಿಂಗ್ ಚಟುವಟಿಕೆಗಳನ್ನು ನಡೆಸಲಾಗಿದೆ. ವಿವಿಧ ಪ್ರದೇಶಗಳ ವೋಲ್ಟೇಜ್ ಸಮಸ್ಯೆ ಪರಿಹಾರಕ್ಕಾಗಿ 546 ಟ್ರಾನ್ಸ್ ಫಾರ್ಮರ್ ಸ್ಥಾಪಿಸಲಾಗಿದೆ. ಇದಕ್ಕಾಗಿ 25.22 ಕೋಟಿ ರೂ. ವೆಚ್ಚ ಮಾಡಲಾಗಿದೆ.
ತಡೆಯಿಲ್ಲದ ವಿದ್ಯುತ್ ಸರಬರಾಜಿಗೆ ಪೂರಕ ಸಬ್ ಸ್ಟೇಷನ್ ಗಳು:
ಫಲಾನುಭವಿಗಳಿಗೆ ಉತ್ತಮ ಗುಣಮಟ್ಟದ, ತಡೆರಹಿತ ವಿದ್ಯುತ್ ಲಭ್ಯತೆಗಾಗಿ ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯ ವಿವಿಧೆಡೆ ಸಬ್ ಸ್ಟೇಷನ್ ಗಳನ್ನು ಸ್ಥಾಪಿಸಲಾಗಿದೆ. 2016ರಲ್ಲಿ ಕಾಞಂಗಾಡು ಪೇಟೆರ, 2017ರಲ್ಲಿ ಕಾಸರಗೋಡು ಪೇಟೆ, 2020ರಲಲಿ ರಾಜಪುರಂ(ಕಳ್ಳಾರ್) ಗಳಲ್ಲಿ ನೂತನವಾಗಿ 33 ಕೆ.ವಿ. ಸಬ್ ಸ್ಟೇಷನ್ ಗಳನ್ನು ಸ್ಥಾಪಿಸಲಾಗಿದೆ. ಇದಲ್ಲದೆ 2019ರಲ್ಲಿ
ಕುತ್ತಿಕೋಲ್ ವಲಯಪರಂಬದಲ್ಲಿ 110 ಕೆ.ವಿ. ಸಬ್ ಸ್ಟೇಷನ್ ಸ್ಥಾಪನೆ ನಿರ್ಮಾಣ ಚಟುವಟಿಕೆಗಳ ಉದ್ಘಾಟನೆ ನಡೆಸಲಾಗಿದೆ. ಸೀತಂಗೋಳಿಯಲ್ಲಿ 110 ಕೆ.ವಿ. ಸಬ್ ಸ್ಟೇಷನ್ ಸ್ಥಾಪನೆಗೆ ಆರಮಭ ಹಂತದ ಚಟುವಟಿಕೆಗಳು ಪ್ರಗತಿಯಲ್ಲಿವೆ. ಇದಕ್ಕೆ ನಿಧಿ ಒದಗಿಸುವ ನಿಟ್ಟಿನಲ್ಲಿ ಕಾಸರಗೋಡು ಅಭಿವೃದ್ಧಿಗೆ 12 ಕೋಟಿ ರೂ.ನ ಯೋಜನೆ ಸಲ್ಲಿಸಲಾಗಿದೆ. ಕಾಸರಗೋಡು, ಕಾಞಂಗಾಡ್, ನೀಲೇಶ್ವರ ನಗರಸಭೆ ಗಳ ವಿದ್ಯುತ್ ಸಂಪರ್ಕ ಜಾಲ ಆಧುನೀಕೃತ ಗೊಳಿಸುವ ನಿಟ್ಟಿನಲ್ಲಿ 4 ಕೋಟಿ ರೂ.ನ ಯೋಜನೆಯ ರೂಪುರೇಷೆ ಸಿದ್ಧತೆ ಕೆ.ಎಸ್.ಇ.ಬಿ.ಯ ನೇತೃತ್ವದಲ್ಲಿ ನಡೆದಿದೆ. ಇದಕ್ಕಾಗಿ ನಿಧಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಿಂದ ಲಭಿಸುವ ನಿರೀಕ್ಷೆಯಿದೆ ಎಂದು ಚೀಫ್ ಇಂಜಿನಿಯರ್ ಪಿ.ಸುರೇಂದ್ರ ತಿಳಿಸಿದರು.
50 ಮೆಗಾವ್ಯಾಟ್ ನ ಅಂಬಲತ್ತರ ಸೋಲಾರ್ ಪಾರ್ಕ್ ಅನುಷ್ಠಾನಗೊಳ್ಳುವ ಮೂಲಕ ಜಿಲ್ಲೆಯ ವಿದ್ಯುತ್ ವಲಯಕ್ಕೆ ಬಲುದೊಡ್ಡ ಯೋಗದಾನ ಲಭಿಸಲಿದೆ. ಜಿಲ್ಲೆಯ ಅಭಿವೃದ್ಧಿ ಸಂಬಂಧ ಪ್ರಭಾಕರನ್ ಆಯೋಗ ವರದಿಯಲ್ಲಿ ಶಿಫಾರಸು ಮಾಡಲಾದ ವಿದ್ಯುತ್ ವಲಯದ ಹಿಂದುಳಿಯುವಿಕೆ ಹಂತಹಂತವಾಗಿ ಪರಿಹಾರಗೊಳ್ಳುತ್ತಿರುವುದು ಕಳೆದ 4 ವರ್ಷಗಳಲ್ಲಿ ಖಚಿತಗೊಂಡಿದೆ. ಇದು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚುವರಿ ಉತ್ತೇಜನ ನೀಡುತ್ತಿದೆ.


