ಉಪ್ಪಳ: ದುರಂತಗಳನ್ನು ಎದುರಿಸುವ ಸಿದ್ಧತೆಗಳ ಅವಲೋಕನ ನಡೆಸುವ ನಿಟ್ಟಿನಲ್ಲಿ ತುರ್ತು ಚಟುವಟಿಕೆಗಳ ಸೌಲಭ್ಯ(ಇನ್ಸಿಡೆಂಟ್ ರೆಸ್ಪಾನ್ಸ್ ಸಿಸ್ಟಂ-ಐ.ಆರ್.ಎಸ್.) ಬಗ್ಗೆ ಮಂಜೇಶ್ವರ ತಾಲೂಕು ಮಟ್ಟದ ಸಭೆ ಶುಕ್ರವಾರ ಜರಗಿತು. ವಿವಿಧ ಇಲಾಖೆಗಳ ಜಂಟಿ ಚಟುವಟಿಕೆಗಳ ಮೂಲಕ ಸಿದ್ಧತೆಗಳನ್ನು ಚುರುಕುಗೊಳಿಸಲು ಸಭೆ ನಿರ್ಧರಿಸಿದೆ.
ಮಂಜೇಶ್ವರ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಐ.ಆರ್.ಎಸ್. ರೆಸ್ಪಾನ್ಸ್ ಅಧಿಕಾರಿಯಾಗಿರುವ ಸಹಾಯಕ ಜಿಲ್ಲಾಧಿಕಾರಿ ಕೆ.ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಳೆದ ವರ್ಷಗಳ ಅನುಭವದ ಹಿನ್ನೆಲೆಯಲ್ಲಿ ಮುಂಜಾಗರೂ ಕ್ರಮಗಳನ್ನು ನಡೆಸಬೇಕು. ಕಡಲ್ಕೊರತೆ, ಮಣ್ಣು ಕುಸಿತ ಸಹಿತ ದುರಂತಗಳು ಸಾಧ್ಯತೆಯಿರುವ ಪ್ರದೇಶಗಳ ಪಟ್ಟಿ ಸಿದ್ಧಪಡಿಸಬೇಕು ಎಂದವರು ತಿಳಿಸಿದರು.
ಇಂಥಾ ಪ್ರದೇಶಗಳ ಜನಗಣನತಿ ನಡೆಯುತ್ತಿದ್ದು, ಇಲ್ಲಿ ವಿಕೋಪಗಳು ಸಂಭವಿಸಿದಲ್ಲಿ ಅಗತ್ಯವಿರುವ ಶಿಬಿರಗಳ ಸೌಲಭ್ಯಗಳನ್ನು ಶಾಲೆಗಳಲ್ಲಿ ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಎ.ಇ.ಒ. ವಿ.ದಿನೇಶ ಹೇಳಿದರು. ಅಪಾಯಕಾರಿ ರೀತಿಯಲ್ಲಿರುವ ಮರಗಳನ್ನು ಕಡಿದು ತೆರವುಗೊಳಿಸುವುದಾಗಿ ಅಗ್ಮಿಶಾಮಕದಳ ವಿಭಾಗ ತಿಳಿಸಿದೆ. ವಿಕೋಪಗಳನ್ನು ಎದುರಿಸಲು ಸದಾ ಸಿದ್ಧರಿರುವಂತೆ ಕರಾವಳಿ ಪೆÇಲೀಸ್ ಮತ್ತು ಆರೋಗ್ಯ ಇಲಾಖೆಗೆ ಸಭೆ ತಿಳಿಸಿದೆ.
ತಹಸೀಲ್ದಾರ್ ಪಿ.ಜೆ.ಆಂಟೋ, ವಿವಿಧ ಇಲಾಖೆಗಳ ಪ್ರತಿನಿಧಿಗಳು, ಗ್ರಾಮಾಧಿಕಾರಿಗಳು ಮೊದಲದವರು ಉಪಸ್ಥಿತರಿದ್ದರು.

