ಕಾಸರಗೋಡು: ಕೋವಿಡ್ ಕೊರೊನಾ ಬಾಧಿತರ ಸಂಖ್ಯೆ ಶನಿವಾರ ಎರಡು ಶತಕದ ಸನಿಹ ಬಂದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿತ್ತಾದರೂ ಭಾನುವಾರದ ಲೆಕ್ಕಾಚಾರ ಒಂದಷ್ಟು ಸಮಧಾನ ನೀಡಿದೆ. ರಾಜ್ಯದಲ್ಲಿ ಇಂದು 118 ಮಂದಿಗಳಲಲ್ಲಿ ಕೊರೊನಾ ದೃಢಪಟ್ಟಿದೆ.
ಕಾಸರಗೋಡು ಜಿಲ್ಲೆಯಲ್ಲಿ 6 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 5 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಸೋಂಕು ಖಚಿತಗೊಂಡವರಲ್ಲಿ 5 ಮಂದಿ ವಿದೇಶಗಳಿಂದ, ಒಬ್ಬರು ಮಹಾರಾಷ್ಟ್ರದಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಕುವೈತ್‍ನಿಂದ ಆಗಮಿಸಿದ್ದ ಉದುಮ ಗ್ರಾಮ ಪಂಚಾಯತ್‍ನ 38 ವರ್ಷದ ನಿವಾಸಿ, ಕಾರಡ್ಕ ಗ್ರಾಮ ಪಂಚಾಯತ್‍ನ 33 ವರ್ಷದ ನಿವಾಸಿ, ಯು.ಎ.ಇ.ಯಿಂದ ಆಗಮಿಸಿದ್ದ 33 ವರ್ಷದ ನಿವಾಸಿ, ಕುವೈತ್‍ನಿಂದ ಬಂದಿದ್ದ ಕಾಂಞಂಗಾಡ್ ನಗರಸಭೆ ವ್ಯಾಪ್ತಿಯ 43 ವರ್ಷದ ನಿವಾಸಿ, ಯು.ಎ.ಇ.ಯಿಂದ ಆಗಮಿಸಿದ್ದ ಅಜಾನೂರು ಪಂಚಾಯತ್‍ನ 69 ವರ್ಷದ ನಿವಾಸಿ, ಮಹಾರಾಷ್ಟ್ರದಿಂದ ಬಂದಿದ್ದ 34 ವರ್ಷದ ಚೆಮ್ನಾಡ್ ಗ್ರಾಮ ಪಂಚಾಯತ್ ನಿವಾಸಿಗೆ ಕೋವಿಡ್ ಪಾಸಿಟಿವ್ ಆಗಿದೆ.
ಉದಯಗಿರಿ ಸಿ.ಎಫ್.ಎಲ್.ಟಿ. ಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ದಾಖಲಾಗಿದ್ದ 5 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಕುವೈತ್ ನಿಂದ ಬಂದಿದ್ದ ಮಧೂರು ಗ್ರಾಮ ಪಂಚಾಯತ್‍ನ 28 ವರ್ಷದ ನಿವಾಸಿ, ಮಂಗಲ್ಪಾಡಿ ಪಂಚಾಯತ್‍ನ 64, 39 ವರ್ಷದ ನಿವಾಸಿಗಳು, ಕುಂಬಳೆ ಪಂಚಾಯತ್‍ನ 43 ವರ್ಷದ ನಿವಾಸಿ, ಖತಾರ್‍ನಿಂದ ಬಂದಿದ್ದ ಮಧೂರು ಗ್ರಾಮ ಪಂಚಾಯತ್‍ನ 36 ವರ್ಷದ ನಿವಾಸಿಗೆ ಕೋವಿಡ್ ನೆಗೆಟಿವ್ ಆಗಿದೆ.
ಕೇರಳದಲ್ಲಿ 118 ಮಂದಿಗೆ ಸೋಂಕು :
ರಾಜ್ಯದಲ್ಲಿ ಭಾನುವಾರ 118 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಕಣ್ಣೂರು ಜಿಲ್ಲೆಯಲ್ಲಿ 26, ತೃಶ್ಶೂರು-17, ಕೊಲ್ಲಂ-10, ಆಲಪ್ಪುಳ-10, ತಿರುವನಂತಪುರ-9, ಎರ್ನಾಕುಳಂ-7, ಕಲ್ಲಿಕೋಟೆ-7, ಕಾಸರಗೋಡು-6, ಕೋಟ್ಟಯಂ-5, ಮಲಪ್ಪುರಂ-5, ವಯನಾಡು-5, ಇಡುಕ್ಕಿ-4, ಪಾಲ್ಘಾಟ್-4, ಪತ್ತನಂತಿಟ್ಟ-3 ಎಂಬಂತೆ ರೋಗ ಬಾಧಿಸಿದೆ.
ರೋಗ ಬಾಧಿತರಲ್ಲಿ 68 ಮಂದಿ ವಿದೇಶದಿಂದ ಹಾಗು 36 ಮಂದಿ ಇತರ ರಾಜ್ಯಗಳಿಂದ ಬಂದವರು. 14 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ.
ರೋಗ ಬಾಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 42 ಮಂದಿ ಗುಣಮುಖರಾಗಿದ್ದಾರೆ. ಕಲ್ಲಿಕೋಟೆ-7(ಪಾಲ್ಘಾಟ್-1), ಇಡುಕ್ಕಿ-6, ಆಲಪ್ಪುಳ-5, ಕೋಟ್ಟಯಂ-5, ತೃಶ್ಶೂರು-5, ಕಾಸರಗೋಡು-5, ಪಾಲ್ಘಾಟ್-3, ಪತ್ತನಂತಿಟ್ಟ-2, ತಿರುವನಂತಪುರ-1, ಎರ್ನಾಕುಳಂ(ಕೋಟ್ಟಯಂ-1), ವಯನಾಡು-1, ಕಣ್ಣೂರು-1 ಎಂಬಂತೆ ಗುಣಮುಖರಾಗಿದ್ದಾರೆ.
ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 2015 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2150 ಮಂದಿ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು 1,75,734 ಮಂದಿ ನಿಗಾವಣೆಯಲ್ಲಿದ್ದಾರೆ. ಈ ಪೈಕಿ 173123 ಮಂದಿ ಮನೆಗಳಲ್ಲೂ, 2611 ಮಂದಿ ಆಸ್ಪತ್ರೆಯಲ್ಲಿ ನಿಗಾವಣೆಯಲ್ಲಿದ್ದಾರೆ. ರವಿವಾರ ಶಂಕಿತ 335 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ತನಕ 220821 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 4041 ಸ್ಯಾಂಪಲ್ ವರದಿ ಬರಲು ಬಾಕಿಯಿದೆ.
ಮೂರು ಹೋಟೆಲ್ ಮುಚ್ಚುಗಡೆ ಆದೇಶ :
ಕಾಸರಗೋಡಿನ ಮೂರು ಹೋಟೆಲ್‍ಗಳನ್ನು ಒಂದು ವಾರದ ಮಟ್ಟಿಗೆ ಮುಚ್ಚುಗಡೆ ನಡೆಸಿ ರೋಗಾಣು ಮುಕ್ತಗೊಳಿಸಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಕಣ್ಣೂರು ವಿಮಾನ ನಿಲ್ದಾಣದಿಂದ ಮಂಗಳೂರಿಗೆ ತೆರಳಬೇಕಿದ್ದ ಇತರ ರಾಜ್ಯಗಳ ಮಂದಿ ಕಟ್ಟುನಿಟ್ಟುಗಳಿಗೆ ವಿರುದ್ಧವಾಗಿ ಕಾಸರಗೋಡಿನಲ್ಲಿ ತಂಗಿದುದು ಇದಕ್ಕೆ ಕಾರಣ. ನಗರದ ಮೂರು ವಸತಿಗೃಹಗಳಲ್ಲಿ ಅವರು ತಂಗಿದ್ದು, ಈ ಸಂಸ್ಥೆಯ ಮಂದಿ ಸಂಬಂಧಪಟ್ಟ ಅಧಿಕಾರಿಗಳಿಂದ ವಿಷಯ ಮರೆಮಾಚಿದ್ದರು.
ಮಾಸ್ಕ್ ಧರಿಸದೇ ಇದ್ದ ಕಾರಣ ಕೇಸು : ಮಾಸ್ಕ್ ಧರಿಸದೇ ಇದ್ದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ 230 ಕೇಸು ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 9213 ಕೇಸುಗಳನ್ನು ದಾಖಲಿಸಲಾಗಿದೆ.
ಲಾಕ್ ಡೌನ್ ಉಲ್ಲಂಘನೆ: 10 ಕೇಸು ದಾಖಲು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 10 ಕೇಸುಗಳನ್ನು ದಾಖಲಿಸಲಾಗಿದೆ. 29 ಮಂದಿಯನ್ನು ಬಂ„ಸಲಾಗಿದ್ದು, ಮೂರು ವಾಹನಗಳನ್ನು ವಶಪಡಿಸಲಾಗಿದೆ. ಆದೂರು ಪೆÇಲೀಸ್ ಠಾಣೆಯಲ್ಲಿ 1, ಬೇಡಗಂ 2, ಬೇಕಲ 1, ಅಂಬಲತ್ತರ 1, ನೀಲೇಶ್ವರ 1, ಚಂದೇರ 1, ಚೀಮೇನಿ 2, ವೆಳ್ಳರಿಕುಂಡ್ 1 ಕೇಸು ದಾಖಲಿಸಲಾಗಿದೆ. ಈ ಮೂಲಕ ಈ ಪ್ರರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 2833 ಕೇಸು ದಾಖಲಾಗಿದೆ. 3623 ಮಂದಿಯನ್ನು ಬಂಧಿಸಲಾಗಿದ್ದು, 1171 ವಾಹನಗಳನ್ನು ವಶಪಡಿಸಲಾಗಿದೆ.


