ನವದೆಹಲಿ: ಕೊರೋನಾ ವೈರಸ್ ಗೆ ಕಡಿಮೆ ಡೋಸ್‍ನ ಸ್ಟಿರಾಯ್ಡ್ ಡೆಕ್ಸಾಮೆಥಾಸೊನ್ ಚಿಕಿತ್ಸೆ ಅತ್ಯಂತ ಪರಿಣಾಮಕಾರಿಯಾದದ್ದು ಎಂದು ಆಕ್ಸ್ ಫರ್ಡ್ ವಿವಿ ಸಂಶೋಧಕರು ಹೇಳಿದ 10 ದಿನಗಳ ನಂತರ ಭಾರತ ಅದನ್ನು ಒಪ್ಪಿಕೊಂಡಿದ್ದು, ಈಗ ಆ ಔಷಧಿಯನ್ನು ಕೊವಿಡ್-19 ಚಿಕಿತ್ಸೆಗೆ ಬಳಸಲು ಅನುಮತಿ ನೀಡಿದೆ.
ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಪರಿಷ್ಕøತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಕೋವಿಡ್ -19 ಗಂಭೀರ ರೋಗಿಗಳಿಗೆ ಸ್ಟೀರಾಯ್ಡ್ ಮೀಥೈಲ್‍ಪ್ರೆಡ್ನಿಸೋಲೋನ್‍ಗೆ ಪರ್ಯಾಯವಾಗಿ ಡೆಕ್ಸಾಮೆಥಾಸೊನ್ ನೀಡಬಹುದು ಎಂದು ಹೇಳಿದೆ. ಮೀಥೈಲ್‍ಪ್ರೆಡ್ನಿಸೋಲೋನ್ ಅನ್ನು ಬಹಳ ಹಿಂದೆಯೇ ಕ್ಲಿನಿಕಲ್ ಪೆÇ್ರೀಟೋಕಾಲ್‍ನಲ್ಲಿ ಸೇರಿಸಲಾಗಿದೆ.
ಡೆಕ್ಸಾಮೆಥಾಸೊನ್ ಬಳಕೆಯಿಂದ ವೆಂಟಿಲೇಟರ್‍ನಲ್ಲಿರುವ ರೋಗಿಗಳಲ್ಲಿ ಮೂರರಲ್ಲಿ ಒಬ್ಬರ ಜೀವ ಉಳಿಯುತ್ತದೆ. ಇನ್ನು ಆಕ್ಸಿಜನ್ ಸಂಪರ್ಕದಲ್ಲಿ ಇರುವವರಲ್ಲಿ ಐವರಲ್ಲಿ ಒಬ್ಬರ ಜೀವ ಉಳಿಯಲಿದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.
ಕೊರೋನಾ ವೈರಸ್ ಪಿಡುಗು ಆರಂಭವಾದಂದಿನಿಂದ ಡೆಕ್ಸಾಮೆಥಾಸೊನ್ ಅನ್ನು ರೋಗಿಗಳ ಚಿಕಿತ್ಸೆಗೆ ಬಳಸಲಾಗಿದ್ದು ಇಲ್ಲಿಯವರೆಗೆ ಏನಿಲ್ಲವೆಂದರೂ 5,000 ಜನರ ಜೀವ ಉಳಿಸಲಾಗಿದೆ ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ.


