HEALTH TIPS

ಕೊರೋನಾ ಮಧ್ಯೆ ಭಾರತ ಸೇರಿ ಹಲವು ದೇಶಗಳ ಜೊತೆ ತಗಾದೆ, ಚೀನಾ ಭಾರಿ ಬೆಲೆ ತೆರಬೇಕಿದೆ: ತಜ್ಞರು

 
           ನವದೆಹಲಿ: ಕೊರೋನಾ ಮಹಾಮಾರಿ ವ್ಯಾಪಾಕವಾಗಿ ಹರಡುತ್ತಿರುವ ಮಧ್ಯೆಯೇ ಪೂರ್ವ ಲಡಾಖ್ ನಲ್ಲಿ ಚೀನಾ ಭಾರತದ ವಿರುದ್ಧ ಆಕ್ರಮಣಕಾರಿ ಮಿಲಿಟರಿ ನಡೆ ಅನುಸರಿಸುತ್ತಿರುವುದಕ್ಕೆ ದಶಕಗಳ ಕಾಲ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಸೇನಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
         ಕೊರೋನಾ ವೈರಸ್ ಚೀನಾ ಸೃಷ್ಟಿ ಎಂದು ಆರೋಪಿಸುತ್ತಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ವಿರುದ್ಧ ಸೆಟೆದುನಿಂತಿದ್ದಾರೆ. ಇನ್ನು ಹಾಂಕಾಂಗ್ ರಾಜಕೀಯದಲ್ಲಿ ಚೀನಾ ಮೂಗು ತೂರಿಸುತ್ತಿದೆ. ಅಮೆರಿಕ ಮತ್ತು ಆಸ್ಟ್ರೇಲಿಯಾ ಜೊತೆಗಿನ ವಾಣಿಜ್ಯ ಸಮರ, ಇದೆಲ್ಲ ವಿಶ್ವದಲ್ಲಿ ಅದನ್ನು ಒಂಟಿಯನ್ನಾಗಿಸುತ್ತಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಇಡೀ ಜಗತ್ತೆ ಹೋರಾಟ ನಡೆಸುತ್ತಿದ್ದರೆ ಅತ್ತ ಚೀನಾ ಮಾತ್ರ ಪೂರ್ವ ಲಡಾಖ್ ಮತ್ತು ದಕ್ಷಿಣ ಚೀನಾದಲ್ಲಿ ಕಳೆದೆರಡು ತಿಂಗಳಿಂದ ಭಾರಿ ದೊಡ್ಡ ಪ್ರಮಾಣದ ಹಣವನ್ನೇ ವ್ಯಯಿಸಿರುವುದು ಬೀಜಿಂಗ್ ನ ನೈಜ ಮುಖವನ್ನು ಅನಾವರಣ ಮಾಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
         ಕೊರೋನಾ ವೈರಸ್ ಚೀನಾ ಮೇಡ್ ಎಂದು ಹಲವು ದೇಶಗಳು ಧ್ವನಿಯೆತ್ತುತ್ತಿವೆ. ಜಾಗತಿಕ ಮಟ್ಟದಲ್ಲಿ ಹೆಸರು ಕೆಡಿಸಿಕೊಳ್ಳುತ್ತಿರುವ ಚೀನಾ ಪೂರ್ವ ಲಡಾಖ್ ನಲ್ಲಿ ಆಕ್ರಮಣಕಾರಿ ಮಿಲಿಟರಿ ವರ್ತನೆಯನ್ನು ತೋರಿದ್ದು ಈ ಮೂಲಕ ತನ್ನ ತನವನ್ನು ಜಗತ್ತಿನ ಮುಂದೆ ಬಟಾಬಯಲು ಮಾಡಿಕೊಂಡಿದೆ.
       ಭಾರತೀಯ ಯೋಧರನ್ನು ಹತ್ಯೆ ಮಾಡುವ ಮೂಲಕ ಚೀನಾ ಭಾರತ ಮತ್ತು ವಿಶ್ವದ ಕೆಲ ರಾಷ್ಟ್ರಗಳೊಂದಿಗೆ ತನ್ನ ಸ್ನೇಹವನ್ನು ಕೆಡಿಸಿಕೊಂಡಿದೆ. ಇದಕ್ಕೆ ಚೀನಾ ಮುಂದಿನ ಹಲವು ದಶಕಗಳ ಕಾಲ ದುಬಾರಿ ಬೆಲೆ ತೆರಬೇಕಾಗುತ್ತದೆ ಎಂದು ಸೇನಾಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries