HEALTH TIPS

ಚೆನ್ನೈ: ತಮಿಳು ವಾಹಿನಿಯ ಕ್ಯಾಮೆರಾಮ್ಯಾನ್ ಕೊರೋನಾಗೆ ಬಲಿ, ರಾಜಕಾರಣಿಗಳಿಂದ ಸಂತಾಪ

 
       ಚೆನ್ನೈ: ತಮಿಳು ಖಾಸಗಿ ವಾಹಿನಿಯ 41 ವರ್ಷದ ಕ್ಯಾಮೆರಾಮ್ಯಾನ್ ಒಬ್ಬರು ಶನಿವಾರ ಮಹಾಮಾರಿ ಕೊರೋನಾ ವೈರಸ್ ಗೆ ಬಲಿಯಾಗಿದ್ದು, ಅವರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.
      ಪೆರಿಯಾರ್ ನಗರ ನಿವಾಸಿಯಾಗಿದ್ದ ಇ ವೆಲುಮುರಗನ್ ಅವರಿಗೆ ಎರಡು ವಾರಗಳ ಹಿಂದೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿತ್ತು. ಅಂದಿನಿಂದ ರಾಜೀವ್ ಗಾಂಧಿ ಸರ್ಕಾರ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೆಲುಮುರಗನ್ ಅವರು ಇಂದು ಮೃತಪಟ್ಟಿದ್ದಾರೆ. ವೆಲುಮುರಗನ್ ಅವರು ಒಬ್ಬ ಗಂಭೀರ ಕೆಲಸಗಾರರಾಗಿದ್ದರು. "ಅವರು ಸದಾ ನಗುತ್ತಲೇ ಇರುತ್ತಿದ್ದರು ಮತ್ತು ವರದಿಗಾರನ ಮನಸ್ಸಿನಲ್ಲಿದ್ದ ಕಥೆಯನ್ನು ಹೇಗೆ ಹೊರತರುವುದು ಎಂದು ಅವರಿಗೆ ಚೆನ್ನಾಗಿ ತಿಳಿದಿತ್ತು" ಎಂದು ಅದೇ ಚಾನೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಮತ್ತು ವರದಿಗಾರ ಜಿ ಜಯಕುಮಾರ್ ನೆನಪಿಸಿಕೊಂಡಿದ್ದಾರೆ.
      ವೆಲುಮುರಗನ್ ಅವರ ಸಾವಿಗೆ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಮಹಾನಗರ ಪಾಲಿಕೆ ಆಯುಕ್ತ ಜಿ ಪ್ರಕಾಶ್ ಅವರು ಸಂತಾಪ ಸೂಚಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries