ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 11 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 5 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಪಾಸಿಟಿವ್ ಆದವರಲ್ಲಿ 9 ಮಂದಿ ವಿದೇಶದಿಂದ, ಇಬ್ಬರು ಮಹಾರಾಷ್ಟ್ರದಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ವಿದೇಶದಿಂದ ಬಂದವರು : ಕುವೈತ್ ನಿಂದ ಆಗಮಿಸಿದ್ದ ಮಂಜೇಶ್ವರ ಗ್ರಾಮ ಪಂಚಾಯತ್‍ನ 43 ವರ್ಷದ ನಿವಾಸಿ, ಪಳ್ಳಿಕ್ಕರೆ ಗ್ರಾಮ ಪಂಚಾಯತ್‍ನ 25 ವರ್ಷದ ನಿವಾಸಿ, ಕಾಂಞಂಗಾಡ್ ನಗರಸಭೆಯ 26, 27 ವರ್ಷದ ನಿವಾಸಿಗಳು, ಮೀಂಜ ಪಂಚಾಯತ್‍ನ 43 ವರ್ಷದ ನಿವಾಸಿ, ಪನತ್ತಡಿ ಗ್ರಾಮ ಪಂಚಾಯತ್‍ನ 34 ವರ್ಷದ ನಿವಾಸಿ, ಅಜಾನೂರು ಗ್ರಾಮ ಪಂಚಾಯತ್‍ನ 46 ವರ್ಷದ ನಿವಾಸಿ, ಅಬುದಾಬಿಯಿಂದ ಬಂದಿದ್ದ ಕಾಂಞಂಗಾಡ್ ನಗರಸಭೆಯ 25 ವರ್ಷದ ನಿವಾಸಿ, ಒಮಾನ್‍ನಿಂದ ಆಗಮಿಸಿದ್ದ ವರ್ಕಾಡಿ ಗ್ರಾಮ ಪಂಚಾಯತ್‍ನ 36 ವರ್ಷದ ನಿವಾಸಿಗೆ ಕೋವಿಡ್ ಪಾಸಿಟಿವ್ ಆಗಿದೆ.
ಮಹಾರಾಷ್ಟ್ರ ದಿಂದ ಬಂದವರು : ಮಹಾರಾಷ್ಟ್ರದಿಂದ ಆಗಮಿಸಿದ್ದ ಮಂಗಲ್ಪಾಡಿ ಗ್ರಾಮ ಪಂಚಾಯತ್ ನಿವಾಸಿ 41 ವರ್ಷದ ನಿವಾಸಿ, ಕೋಡೋಂ-ಬೇಳೂರು ಪಂಚಾಯತ್‍ನ 34 ವರ್ಷದ ನಿವಾಸಿಗೆ ಕೋವಿಡ್ ಸೋಂಕು ಖಚಿತಗೊಂಡಿದೆ.
ಸಾಮಾಜಿಕ ಸಂಪರ್ಕ ಮೂಲಕ ಸೋಂಕು ಖಚಿತಗೊಂಡಿದ್ದ, ಕಾಸರಗೋಡು ಜನರಲ್ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ 34 ವರ್ಷದ ಆರೋಗ್ಯ ಕಾರ್ಯಕರ್ತೆ ಸಹಿತ 5 ಮಂದಿ ಶನಿವಾರ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಿಂದ ಬಂದಿದ್ದ, ಕೋವಿಡ್ ಪಾಸಿಟಿವ್ ಆಗಿ ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಬದಿಯಡ್ಕ ಗ್ರಾಮ ಪಂಚಾಯತ್ ನಿವಾಸಿ 26 ವರ್ಷದ ಮಹಿಳೆ, ಅಬುದಾಬಿಯಿಂದ ಆಗಮಿಸಿದ್ದ ಬದಿಯಡ್ಕ ಗ್ರಾಮ ಪಂಚಾಯತ್ ನಿವಾಸಿ 32 ವರ್ಷದ ವ್ಯಕ್ತಿ, ಪಡನ್ನಕ್ಕಾಡ್ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ, ಹರಿಯಾಣದಿಂದ ಬಂದಿದ್ದ ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್‍ನ 36 ವರ್ಷದ ನಿವಾಸಿ, ಮಹಾರಾಷ್ಟ್ರದಿಂದ ಆಗಮಿಸಿದ್ದ ಪಡನ್ನ ಗ್ರಾಮ ಪಂಚಾಯತ್‍ನ 19 ವರ್ಷದ ನಿವಾಸಿಗೆ ಕೋವಿಡ್ ನೆಗೆಟಿವ್ ಆಗಿದೆ.
ಕೇರಳದಲ್ಲಿ 195 ಮಂದಿಗೆ ಸೋಂಕು :
ರಾಜ್ಯದಲ್ಲಿ ಶನಿವಾರ 195 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಮಲಪ್ಪುರಂ-47, ಪಾಲ್ಘಾಟ್-25, ತೃಶ್ಶೂರು-22, ಕೋಟ್ಟಯಂ-15, ಎರ್ನಾಕುಳಂ-14, ಆಲಪ್ಪುಳ-13, ಕೊಲ್ಲಂ-12, ಕಣ್ಣೂರು-11, ಕಾಸರಗೋಡು-11, ಕಲ್ಲಿಕೋಟೆ-8, ಪತ್ತನಂತಿಟ್ಟ-6, ವಯನಾಡು-5, ತಿರುವನಂತಪುರ-4, ಇಡುಕ್ಕಿ-2 ಎಂಬಂತೆ ರೋಗ ಬಾ„ಸಿದೆ. ರೋಗ ಬಾ„ತರಲ್ಲಿ 118 ಮಂದಿ ವಿದೇಶದಿಂದಲೂ, 62 ಮಂದಿ ಇತರ ರಾಜ್ಯಗಳಿಂದ ಬಂದವರು. 15 ಮಂದಿ ಸಂಪರ್ಕದಿಂದ ರೋಗ ಬಾ„ಸಿದೆ.
ಚಿಕಿತ್ಸೆ ಪಡೆಯುತ್ತಿದ್ದ 102 ಮಂದಿ ಗುಣಮುಖರಾಗಿದ್ದಾರೆ. ಮಲಪ್ಪುರ-22(ಪಾಲ್ಘಾಟ್-2, ಇಡುಕ್ಕಿ-1), ಪತ್ತನಂತಿಟ್ಟ-17, ಕಣ್ಣೂರು-15(ಪಾಲ್ಘಾಟ್-1, ತೃಶ್ಶೂರು-1), ಕೊಲ್ಲಂ-14, ಕೋಟ್ಟಯಂ-7, ತೃಶ್ಶೂರು-6, ಆಲಪ್ಪುಳ-5, ಕಾಸರಗೋಡು-5, ತಿರುವನಂತಪುರ(ಆಲಪ್ಪುಳ-1), ಇಡುಕ್ಕಿ-4, ಪಾಲ್ಘಾಟ್-2, ಎರ್ನಾಕುಳಂ(ಕೊಲ್ಲಂ)-1 ಎಂಬಂತೆ ಗುಣಮುಖರಾಗಿದ್ದಾರೆ.
ಆಸ್ಪತ್ರೆಯಲ್ಲಿ 1939 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 2108 ಮಂದಿ ಗುಣಮುಖರಾಗಿದ್ದಾರೆ. ವಿವಿಧ ಜಿಲ್ಲೆಗಳಲ್ಲಾಗಿ 1,67,978 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 1,65,515 ಮಂದಿ ಮನೆಗಳಲ್ಲೂ, 2463 ಮಂದಿ ಆಸ್ಪತ್ರೆಯಲ್ಲಿ ನಿಗಾವಣೆಯಲ್ಲಿದ್ದಾರೆ. ಶನಿವಾರ ಶಂಕಿತ 281 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಮಾಸ್ಕ್ ಧರಿಸದ 191 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ 191 ಕೇಸುಗಳನ್ನು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ ಈ ಪ್ರಕರಣಕ್ಕೆ ಸಂಬಂ„ಸಿ ಒಟ್ಟು 8983 ಕೇಸುಗಳನ್ನು ದಾಖಲಿಸಲಾಗಿದೆ.
ಲಾಕ್ ಡೌನ್ ಆದೇಶ ಉಲ್ಲಂಘನೆ : 9 ಕೇಸು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 9 ಕೇಸುಗಳನ್ನು ದಾಖಲಿಸಲಾಗಿದೆ. 42 ಮಂದಿಯನ್ನು ಬಂಧಿಸಲಾಗಿದ್ದು, 2 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 1, ಆದೂರು 2, ಮೇಲ್ಪರಂಬ 2, ಬೇಕಲ 1, ನೀಲೇಶ್ವರ 2, ಚಿತ್ತಾರಿಕಲ್ 1 ಕೇಸುಗಳನ್ನು ದಾಖಲಿಸಲಾಗಿದೆ. ಈ ವರೆಗೆ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 2823 ಕೇಸುಗಳನ್ನು ದಾಖಲಿಸಲಾಗಿದೆ. 3594 ಮಂದಿಯನ್ನು ಬಂಧಿಸಲಾಗಿದ್ದು, 1168 ವಾಹನಗಳನ್ನು ವಶಪಡಿಸಲಾಗಿದೆ.


