ಕಾಸರಗೋಡು: ಕೋವಿಡ್ 19 ಸೋಂಕಿನ ಸಾಮಾಜಿಕ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ವಿದೇಶಗಳಿಂದ, ಇತರ ರಾಜ್ಯಗಳಿಂದ ಆಗಮಿಸಿದವರು 14 ದಿನಗಳ ರೂಂ ಕ್ವಾರೆಂಟೈನ್ ಕಡ್ಡಾಯವಾಗಿ ಪಾಲಿಸಬೇಕು. ಕ್ವಾರೆಂಟೈನ್ ಅವಧಿಯಲ್ಲೂ ಪಾಲಿಸಬೇಕಾದ ಎಲ್ಲ ಸೂಚನೆಗಳನ್ನೂ ಚಾಚೂ ತಪ್ಪದೆ ಅನುಸರಿಸಬೇಕು. ಈ ಅವಧಿ ಕಳೆದ ತಕ್ಷಣ ಕ್ವಾರೆಂಟೈನ್ ನಡೆಸಿದ ವ್ಯಕ್ತಿ ಮತ್ತು ಕುಟುಂಬದ ಸದಸ್ಯರು ನಿಗಾದಲ್ಲಿರಬೇಕು. ಈ ದಿನಗಳಲ್ಲಿ ಅತೀವ ಜಾಗ್ರತೆ ಬೇಕು ಎಂದವರು ನುಡಿದರು.
ಜ್ವರ, ತಲೆನೋವು, ಉಸಿರಾಟದ ತೊಂದರೆ ಸಹಿತ ರೋಗಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆಮಾಡಬೇಕು. ಅಥವಾ ಜಿಲ್ಲಾ ನಿಯಂತ್ರಣ ಕೊಠಡಿಗೆ (ದೂರವಾಣಿ ಸಂಖ್ಯೆ: 9946000293, 9946000493) ಕರೆಮಾಡಬೇಕು ಎಂದು ಅವರು ನುಡಿದರು.


