ಕಾಸರಗೋಡು: ಮಾದಕ ಪದಾರ್ಥ ವಿರುದ್ಧ ಪೆÇಲೀಸರು ನಡೆಸುವ ಪ್ರಚಾರ ಕಾರ್ಯಕ್ರಮ"ನವಜೀವನ 2020"ಕ್ಕೆ ಶುಕ್ರವಾರ ಚಾಲನೆ ಲಭಿಸಿದೆ.
ರಾಜ್ಯ ಪೆÇಲೀಸ್ ವರಿಷ್ಠ ಲೋಕನಾಥ್ ಬೆಹ್ರಾ ಆನ್ ಲೈನ್ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಾರ್ಕೋಟಿಕ್ ಕೇಸುಗಳ ಪತ್ತೆಯಲ್ಲಿ ಅತ್ಯುತ್ತಮ ಸಾಧನೆ ನಡೆಸಿದ ಸಿಬ್ಬಂದಿಗೆ ಅಭಿನಂದನೆ ನಡೆಯಿತು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ನೇತೃತ್ವ ವಹಿಸಿದ್ದರು. ಮಾದಕಪದಾರ್ಥಗಳ ತಡೆ ಸಂಬಂಧ ಆಯ್ದ ಸಿಬ್ಬಂದಿಗೆ ತರಗತಿ ನಡೆಯಿತು.


