HEALTH TIPS

ಬ್ರೇಕ್ ದಿ ಚೈನ್ ಖಚಿತಪಡಿಸಲು ಇನ್ನು "ಮಾಸ್ಟರ್" ಕಾರ್ಯಕ್ರಮ


      ಕಾಸರಗೋಡು: ಪ್ರೀತಿಯಿಂದ, ಗದರಿಕೆಯಿಂದ, ಉಪದೇಶದಿಂದ ಮಕ್ಕಳಿಗೆ ತಿಳಿಹೇಳುವ ಶಿಕ್ಷಕರು ಈ ಕೋವಿಡ್ ಸೋಂಕಿನ ಅವಧಿಯ ಪ್ರತಿರೋಧ ಚಟುವಟಿಕೆಗಳ ನೂತನ ಜವಾಬ್ದಾರಿ  ವಹಿಸಿಕೊಳ್ಳಲಿದ್ದಾರೆ. ಕೋವಿಡ್ ಸೋಂಕಿನ ಸಾಮಾಜಿಕ ಹರಡಿವಿಕೆ ತಡೆಯುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾಡಳಿತ ಹೆಚ್ಚುವರಿ ಕಠಿಣ ಕಟ್ಟುನಿಟ್ಟುಗಳನ್ನು ಜಾರಿಗೊಳಿಸಲಿದ್ದು, ಇದರ ಅಂಗವಾಗಿ "ಮಾಸ್ಟರ್" ಎಂಬ ಹೆಸರಿನ ಪೆÇ್ರೀಗ್ರಾಂ ಅಂಗವಾಗಿ ಈ ಚಟುವಟಿಕೆಗಳ ಹೊಣೆಗಾರಿಕೆಯನ್ನು ಜಿಲ್ಲೆಯ ಶಿಕ್ಷಕರು ಜಿಲ್ಲಾಡಳಿತದ ಜೊತೆಗೆ ಹಂಚಿಕೊಳ್ಳಲಿದ್ದಾರೆ. ಕೈಗಳನ್ನು ಶುಚೀಗೊಳಿಸುವುದು, ಮಾಸ್ಕ್ಧರಿಸುವುದು, ದೈಹಿಕ ಅಂತರ ಪಾಲಿಸುವುದು ಎಂಬ ಮೂರು ವಿಚಾರಗಳಿಗೆ ಮಹತ್ವ ನೀಡಿ, ಅವನ್ನು ಖಚಿತಪಡಿಸಲು ವಾರ್ಡ್ ಮಟ್ಟದಲ್ಲಿ ಪ್ರತ್ಯೇಕ ತಂಡಗಳು ನೇಮಕಗೊಳ್ಳಲಿವೆ. ಶಿಕ್ಷಕರು ಬ್ರೇಕ್ ದಿ ಚೈನ್ ಅಭಿಯಾನ ಜನಜಾಗೃತಿ ನಡೆಸುವರು. ಈ ಆದೇಶ ಉಲ್ಲಂಘಿಸುವವರನ್ನು ಮೊದಲಿಗೆ ಉಪದೇಶ ನೀಡಿ, ತದನಂತರವೂ ಪಾಲಿಸದಿದ್ದಲ್ಲಿ ಗದರಿಸಿ, ನಂತರವೂ ಪಾಲಿಸದೇ ಹೋದಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಮಾಡುವಲ್ಲಿ ಚಟುವಟಿಕೆ ನಡೆಸುವರು.
                 ಶಿಕ್ಷಕರಿಗೆ ಅಧಿಕಾರ:
      1973 ಕ್ರಿಮಿನಲ್ ಕ್ರಮ ಸಂಹಿತೆ(ಸಿ.ಆರ್.ಪಿ.ಸಿ.) ಪ್ರಕಾರ ಆದೇಶ ಉಲ್ಲಂಘಿಸುವವರ ವಿರುದ್ಧ ಬಂಧನ ನಡೆಸುವಂತೆ ಮಾಡುವ ಅಧಿಕಾರವನ್ನು ಈ ಶಿಕ್ಷಕರಿಗೆ ನೀಡಲಾಗುವುದು ಎಂದು ಜಿಲ್ಲಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ರಾಜ್ಯದಲ್ಲಿ ಪ್ರಥಮ ಬಾರಿಗೆ ಕೋವಿಡ್ ಪ್ರತಿರೋಧ ಜಾಗೃತಿ ಚಟುವಟಿಕೆಗಳಿಗೆ ಈ ಮೂಲಕ ಶಿಕ್ಷಕರ ಸೇವೆ ಖಚಿತಪಡಿಸಲಾಗುತ್ತಿದೆ ಎಂದವರು ನುಡಿದರು.
                 ಪ್ರಧಾನ ಉದ್ದೇಶ:
   ಜಿಲ್ಲಾಧಿಕಾರಿ ಅವರ ಆದೇಶ ಪ್ರಕಾರ ಶಿಕ್ಷಣ ಉಪನಿರ್ದೇಶಕಿ ಕೆ.ವಿ.ಪುಷ್ಪಾ ಅವರ ಮೇಲ್ನೋಟದಲ್ಲಿ ಶಿಕ್ಷಕರು ಈ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವರು. ಜಿಲ್ಲೆಯ ಎಲ್ಲ ವಾರ್ಡ್ ಗಳಲ್ಲೂ ಶಿಕ್ಷಕರ ಸಮಕ್ಷ ಖಚಿತಪಡಿಸಿ, ರೋಗ ಹರಡುವಿಕೆ ತಡೆಯುವುದು "ಮಾಸ್ಟರ್" ಕಾರ್ಯಕ್ರಮದ ಪ್ರಧಾನ ಉದ್ದೇಶವಾಗಿದೆ. ಬ್ರೇಕ್ ದಿ ಚೈನ್ ಕಟ್ಟುನಿಟ್ಟುಗಳಿಗೆ ವಿರುದ್ಧವಾಗಿ ಚಟುವಟಿಕೆ ನಡೆಸುವವರ ಫೆÇಟೋ ಮತ್ತು ಮಾಹಿತಿ ಸಂಗ್ರಹಿಸಲಾಗುವುದು. ಆರೋಗ್ಯ ಇಲಾಖೆಯ ಸಲಹೆ ಪಾಲಿಸದೇ ಇದ್ದವರ ಮಾಹಿತಿಗಳನ್ನು ಶಿಕ್ಷಕರು ಸಂಗ್ರಹಿಸಿ ಜಿಲ್ಲಾಡಳಿತೆಗೆ 8590684023 ಎಂಬ ವಾಟ್ಸ್ ಅಪ್ ನಂಬ್ರ ಮೂಲಕ  ಹಸ್ತಾಂತರಿಸುವರು. ಇದಕ್ಕೆ ನೇತೃತ್ವ ವಹಿಸುವ  ಶಿಕ್ಷಕರ ಮೊಬೈಲ್ ನಂಬ್ರಗಳನ್ನು ಜಿಲ್ಲಾಡಳಿತ ಸಂಗ್ರಹಿಸಿದೆ.
      ಕಾಸರಗೋಡು ಜಿಲ್ಲೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ಕೆಲವರು ಮಾಸ್ಕ್ ಧರಿಸದೇ ಇರುವುದು, ಕೆಲವು ಅಂಗಡಿಗಳಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಕೆಲವರು ಮಾಸ್ಕ್ ಧರಿಸದೇ ಇರುವುದು, ದೈಹಿಕ ಅಂತರ ಕಾಯ್ದುಕೊಳ್ಳದೇ ಇರುವುದು, ಜನ ಗುಂಪು ಸೇರುವುದು ಇತ್ಯಾದಿ ಆದೇಶ ಉಲ್ಲಂಘನೆ ಗಮನಕ್ಕೆ ಬಂದಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯ ಎಲ್ಲ ಸ್ಥಲೀಯಾಡಳಿತ ಸಂಸ್ಥೆಗಳ ವಾರ್ಡ್ ಗಳಲ್ಲಿ ಶಿಕ್ಷಕರ ಸಮಕ್ಷ ಖಚಿತಪಡಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries