ಕಾಸರಗೋಡು: ತೆಂಗಿನ ಮರಗಳ ಬುಡದ ಬಳಿ ಮಳೆನೀರು ಇಂಗುಗುಳಿಗಳನ್ನು ತೋಡಿ ಜಲಸಂರಕ್ಷಣೆ ಖಚಿತಪಡಿಸುವ ಮತ್ತು ತೆಂಗಿನಮರಗಳ ಬುಡಕ್ಕೆ ಜೈವಿಕ ಗೊಬ್ಬರ ಒದಗಿಸುವ ಅಭಿಯಾನದ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಜೂ.29ರಂದು ಚಾಲನೆ ಲಭಿಸಲಿದೆ. ಅಂದು ಬೆಳಗ್ಗೆ 9.30ಕ್ಕೆ ಜಿಲ್ಲಾಧಿಕಾರಿ ಅವರ ಕ್ಯಾಂಪ್ ಹೌಸ್ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಚಾಲನೆ ನೀಡುವರು.
ಈ ಆರ್ಥಿಕ ವರ್ಷದಲ್ಲಿಜಿಲ್ಲೆಯ ಕೆಲವು ಗ್ರಾಮ ಪಂಚಾಯತ್ ಗಳ ಮತ್ತು ಒಂದು ನಗರಸಭೆಯಲ್ಲಿ ಜನಪರ ಯೋಜನೆಯಲ್ಲಿ ಅಳವಡಿಸಿ 4 ಲಕ್ಷ ತೆಂಗಿನಮರಗಳ ಬುಡಗಳಲ್ಲಿ ಈ ಯೋಜನೆ ಜಾರಿಗೆ ಮಂಜೂರಾತಿ ಲಭಿಸಿದೆ. ಮಧೂರು, ಕುಂಬಳೆ, ಬದಿಯಡ್ಕ, ಮೊಗ್ರಾಲ್ ಪುತ್ತೂರು, ಚೆಂಗಳ, ವರ್ಕಾಡಿ, ಮೀಂಜ, ಪುತ್ತಿಗೆ, ಪೈವಳಿಕೆ, ಮಂಜೇಶ್ವರ, ಮಂಗಲ್ಪಾಡಿ, ಕಾರಡ್ಕ, ಕುತ್ತಿಕೋಲು, ಕಯ್ಯೂರು-ಚೀಮೇನಿ, ಪಿಲಿಕೋಡ್, ಚೆರುವತ್ತೂರು, ತ್ರಿಕರಿಪುರ, ವಲಿಯಪರಂಬ, ಪಳ್ಳಿಕ್ಕರೆ, ಮಡಿಕೈ, ಬಳಾಲ್, ಕೋಡೋಂ-ಬೇಳೂರು, ಈಸ್ಟ್ ಏಳೇರಿ, ವೆಸ್ಟ್ ಏಳೇರಿ, ಕಾಞಂಗಾಡ್ ನಗರಸಭೆಗಳಲ್ಲಿ ಈ ಯೋಜನೆಗೆ ಮಂಜೂರಾತಿ ಲಭಿಸಿದೆ.
ಈ ಕಾರ್ಯಕ್ಕೆ ಪೂರಕವಾಗಿ ಜೈವಿಕ ಗೊಬ್ಬರದ ಬೆಲೆಯ ಶೇ 75 ಕೃಷಿಕರಿಗೆ ಲಭ್ಯವಾಗಲಿದೆ. ಜನಪರ ಯಫಜನೆ ಪ್ರಕಾರ ಜೈವಿಕ ಗೊಬ್ಬರ ಸೌಲಭ್ಯಕ್ಕೆ ಅರ್ಹರಾದ ಕೃಷಿಕರು ತಕ್ಷಣ ತೆಂಗಿನಮರಗಳ ಬುಡದಲ್ಲಿ ಇಂಗುಗುಂಡಿ ತೋಡುವ ಕಾರ್ಯ ನಡೆಸುವಂತೆ ಪ್ರಧಾನ ಕೃಷಿ ಅಧಿಕಾರಿ ತಿಳಿಸಿದರು. ತೆಂಗಿನಬುಡದಿಂದ 11/2 ಮೀಟರ್ ದೂರದಲ್ಲಿ ಒಂದಡಿ ಆಳದ ಗುಂಡಿ ತೋಡಿ, 25 ಕಿಲೋ ತೆಂಗಿನ ನಾರು ತುಂಬಬೇಕು. ಈ ಮೂಲಕ ತೆಂಗಿನಮರಕ್ಕೆ ಪೆÇೀಷಕಾಂಶ ದೊರೆಯುವುದರ ಜತೆಯಲ್ಲೇ ಜಲಸಂರಕ್ಷಣೆಯೂ ನಡೆಯಲಿದೆ.


