ಕಾಸರಗೋಡು: ಮಹಿಳಾ ಸಂರಕ್ಷಣೆ ಕಚೇರಿ ಕೋವಿಡ್ ಅವಧಿಯಲ್ಲಿ ತನ್ನ ಕಚೇರಿಯ ಚಟುವಟಿಕೆಗಳನ್ನು ಇನ್ನಷ್ಟು ಸುಗಮಗೊಳಿಸಿದೆ. ಲಾಕ್ ಡೌನ್ ಅವಧಿಯಲ್ಲಿ ಮಹಿಳೆಯರು ಎದುರಿಸುತ್ತಿರುವ ದೌರ್ಜನ್ಯ ಸಹಿತ ಸಮಸ್ಯೆಗಳನ್ನು ವರದಿ ಮಾಡುವ ಅಗತ್ಯದ ಸೇವೆ ಒದಗಿಸುವ, ಮಹಿಳಾ ಸಂರಕ್ಷಣೆ ಕಾನೂನುಗಳ ಜಾರಿಯ ಖಚಿತತೆ ನಿಟ್ಟಿನಲ್ಲಿ ಈ ಕಚೇರಿ ಸಕ್ರಿಯವಾಗಿ ಚಟುವಟಿಕೆ ನಡೆಸುತ್ತಿದೆ. ಮನೆಗಳಲ್ಲಿ ನಡೆಯುವ ದೌರ್ಜನ್ಯ ಸಹಿತ ಎಲ್ಲ ರೀತಿಯ ಕಿರುಕುಳಗಳಿಂದ ಹೆಣ್ಣುಮಕ್ಕಳನ್ನು ಸಂರಕ್ಷಿಸುವ ವನ್ ಸ್ಟಾಪ್ ಸೆಂಟರ್ ಸಹಿತ ಸೌಲಭ್ಯಗಳಿಗಾಗಿ ಮಹಿಳೆಯರು ಮಹಿಳಾ ಸಂರಕ್ಷಣೆ ಅಧಿಕಾರಿಯನ್ನು ಸಂಪರ್ಕಿಸಬಹುದು.
ಲಾಕ್ ಡೌನ್ ಅವಧಿಯಲ್ಲಿ ಮಹಿಳೆಯರು ನೇರವಾಗಿ ದೂರು ನೀಡಲು ಸಾಧ್ಯವಾಗದೇ ಇದ್ದ ಪರಿಸ್ಥಿತಿಯಲ್ಲಿ ಪರಿಹಾರಕ್ಕೆ ಬೇರೆಯದೇ ವ್ಯವಸ್ಥೆ ನಡೆಸಲಾಗಿದೆ. ಇದಕ್ಕಾಗಿ ಗ್ರಾಮಾಧಿಕಾರಿ, ವೈವದ್ಯಾಧೊಇಕಾರಿ, ಪೆÇಲೀಸ್ ಠಾಣೆ, ಶಿಶು ಕಲ್ಯಾಣ ಅಧಿಕಾರಿಗಳು, ಕುಟುಂಬಶ್ರೀ, ಶಾಲಾ ಅಧಿಕಾರಿಗಳು ಮೊದಲಾದವರು ವನ್ ಸ್ಟಾಪ್ ಸೆಂಟರ್ ಸಿಬ್ಬಂದಿ ಜೊತೆ ಸತತ ಸಂಪರ್ಕದಲ್ಲಿದ್ದು, ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸುಲಭ್ದಲ್ಲಿ ಸಾರ್ವಜನಿಕ ಸಂಪರ್ಕದೊಂದಿಗೆ ದೂರು ಸ್ವೀಕಾರ ನಡೆಸಲು ಮತ್ತು ಪರಿಹರ ಕಂಡುಕೊಳ್ಳಲು ಈ ಕಾರ್ಯಕ್ರಮ ಪೂರಕವಾಗಿದೆ.
ಮಹಿಳಾ ಸಂರಕ್ಷಣೆ ಕಚೇರಿಮುಖಾಂತರ ನೀಡಲಾಗುವ ಸೇವೆ ಸಹಿತ ಮಾಹಿತಿಗಳ ಕರಪತ್ರ, ಭಿತ್ತಿಪತ್ರ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಸಾರ್ವಜನಿಕರಿಗೆ ತಲಪಿಸುವ ವ್ಯವಸ್ಥೆ ಮಾಡಲಾಗಿದೆ.
ವನ್ ಸ್ಟಾಪ್ ಸೆಂಟರ್:
ವನ್ ಸ್ಟಾಪ್ ಸೆಂಟರ್ 2019ರ ಅಕ್ಟೋಬರ್ ತಿಂಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಆರಂಭಗೊಂಡಿದೆ. ಅಂದಿನಿಂದಲೇ ಶಾಲೆಗಳಲ್ಲಿ, ಸಿ.ಡಿ.ಎಸ್.ಗಳಲ್ಲಿ, ಕ್ಲಬ್ ಗಳಲ್ಲಿ, ಗ್ರಂಥಾಲಯಗಳಲ್ಲಿ ಮೊದಲಾದೆಡೆ ಈ ಸೇವೆಗಳ ಕುರಿತು ಜಾಗೃತಿ ತರಬೇತಿ ನಡೆಸಿಕೊಂಡು ಬರಲಾಗುತ್ತಿದೆ. ಮಹಿಳೆಯರನ್ನು ಸಂರಕ್ಷಿಸುವ ಕಾನೂನು ಸಂಬಂಧ ಚಟುವಟಿಕೆ ನಡೆಸುತ್ತಿರುವ ವನ್ ಸ್ಟಾಪ್ ಸೆಂಟರ್ ಕಾರ್ಯಕರ್ತರ ವೀಡಿಯೋ ಕರೆ ಸಭೆ ಪ್ರತಿ ಶುಕ್ರವಾರ ರಾತ್ರಿ 8 ಗಂಟೆಗೆ ಮಹಿಳಾ ಸಂರಕ್ಷಣೆ ಅಧಿಕಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದು, ಜಾರಿ ಪರಿಸ್ಥಿತಿಗಳ ಅವಲೋಕನ ನಡೆಸಲಾಗುತ್ತಿದೆ. ಪಿಂಕ್ ಪೆÇಲೀಸ್, ಸೀತಾಲಯ, ಸ್ನೇಹಿತೆ, ಕುಟುಂಬಶ್ರೀ ಸಹಿತ ವ್ಯವಸ್ಥೆಗಳ ಸಹಕಾರದೊಂದಿಗೆ ಚಟುವಟಿಕೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಮಹಿಳಾ ಸಂರಕ್ಷಣೆ ಅಧಿಕಾರಿ ಎಂ.ವಿ.ಸುನಿತಾ ತಿಳಿಸಿರುವರು.
ಶೆಲ್ಟರ್ ಹೋಂ ಗಳು:
ಕಾಸರಗೋಡು ಜಿಲ್ಲೆಯಲ್ಲಿ ಮನೆಗಳಲ್ಲಿ ನಡೆಯುವ ದೌರ್ಜನ್ಯ ಗಳಿಗೆ ಈಡಾಗಿರುವ ಮಹಿಳೆಯರ ಸಂರಕ್ಷಣೆಗೆ ಅನಿವಾರ್ಯ ಸಂದರ್ಭಗಳಲ್ಲಿ ಅವರನ್ನು ಸುರಕ್ಷಿತವಾಗಿ ತಂಗುವಂತೆ ಮಾಡುವ ಶೆಲ್ಟರ್ ಹೋಂಗಳು ಸರಕಾರಿ ಸ್ವಾಮ್ಯದಲ್ಲಿ ಇವೆ. ಮಹಿಳೆಯರ ಈ ಸಮಸ್ಯೆ ಪರಿಹಾರ ನಡೆಸುವ ನಿಟ್ಟಿನಲ್ಲಿ ಚೆನ್ನಿಕ್ಕರ ಮುಜಾಹಿದ್ ಎಜ್ಯುಕೇಶನ್ ಸೆಂಟರ್(ದೂರವಾಣಿ ಸಂಖ್ಯೆ: 9946573186, 8792789073.), ಅಂಜಂಗಾಡಿ ಸರಕಾರಿ ಮಹಿಳಾ ಮಂದಿರ(04994235201.) ಗಳಲ್ಲಿ ಉಚಿತವಾಗಿ ಕಾನೂನು ಕೌನ್ಸಿಲರ್ ಗಳ ಸೇವೆ ಲಭ್ಯವಿದೆ. ಸುರಕ್ಷಿತ ತಂಗುದಾಣ ಅಗತ್ಯವಿದ್ದಲ್ಲಿ ಅಂಜಂಗಾಡಿ ಸರಕಾರಿ ಮಹಿಳಾ ಮಂದಿರ, ಪಡನ್ನಕ್ಕಾಡ್ ಸ್ನೇಹಸದನ ಶೆಲ್ಟರ್ ಹೋಂ ಗಳಲ್ಲಿ ಸೌಲಭ್ಯಗಳಿವೆ. ವಿದ್ಯಾನಗರದ ವನ್ ಸ್ಟಾಪ್ ಸೆಂಟರ್ ಕುಟುಂಬ ಕಲ್ಯಾಣ ಉಪ ಕೇಂದ್ರದ ಬಳಿ ವಸತಿ , ಕೌನ್ಸಲಿಂಗ್ ಮತ್ತು ವೈದ್ಯಕೀಯ ಸಹಾಯ(ದೂರವಾಣಿ ಸಂಖ್ಯೆ: 9400088573.) ವಿದೆ. ಹೆಚ್ಚಿನ ಮಾಹಿತಿಗಳಿಗೆ ಜಿಲ್ಲಾ ಮಹಿಳಾ ಸಂರಕ್ಷಣೆ ಕಚೇರಿಯನ್ನು (ದೂರವಾಣಿ ಸಂಖ್ಯೆ: 04994256266) ಸಂಪರ್ಕಿಸಬಹುದು.



