ಕಾಸರಗೋಡು: ಕಾಸರಗೋಡಿನ ಕೂಡ್ಲು ಸಮೀಪದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ತಿಂಗಳ ಆಶ್ಲೇಷ ನಕ್ಷತ್ರದಂದು ಜರಗುವ ಆಶ್ಲೇಷ ಬಲಿಸೇವೆ ಜೂನ್ 25ರಂದು ಗುರುವಾರ ಜರಗಲಿದೆ.
ಅದೇ ದಿನ ಪಂಚಮಿಯೂ ಅಗಿದ್ದು ನಾಗ ಸನ್ನಿಧಿಯಲ್ಲಿ ಸಾಮೂಹಿಕ ನಾಗತಂಬಿಲವೂ ನಡೆಯಲಿದೆ. ನಾಗಸ್ವರೂಪವಾದ ಶ್ರೀ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಜರಗುವ ಆಶ್ಲೇಷ ಬಲಿ ಸೇವೆಗೆ ಬಹಳ ಮಹತ್ವವಿದೆ. ಅಂದು ಬೆಳಗ್ಗೆ 11 ಗಂಟೆಗೆ ಸಾಮೂಹಿಕ ಸಂಕಲ್ಪದೊಂದಿಗೆ ಆರಂಭಗೊಳ್ಳುವ ಆಶ್ಲೇಷ ಬಲಿಸೇವೆ ಮಧ್ಯಾಹ್ನ 12.30 ಗಂಟೆಗೆ ನಾಗ ತಂಬಿಲ, ಮಹಾಪೂಜೆ, ಬಳಿಕ ಅನ್ನದಾನ ಜರಗಲಿದೆ. ಮರು ದಿನ ಮಾಸ ಶುದ್ಧ ಷಷ್ಠಿಯಾಗಿದ್ದು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿಯಲ್ಲಿ ಮಧ್ಯಾಹ್ನ ವಿಶೇಷ ಪೂಜೆ ನಡೆಯಲಿದೆ. ಬಳಿಕ ಅನ್ನದಾನ ಜರಗಲಿದೆ. ಸಂಜೆ 7ಗಂಟೆಗೆ ಶೇಷವನ ಭಕ್ತವೃಂದದಿಂದ ಭಜನೆ ಬಳಿಕ ರಾತ್ರಿ ವಿಶೇಷ ಕಾರ್ತಿಕ ಪೂಜೆಯೂ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕೊರೊನಾ ನಿಮಿತ್ತ ಸರಕಾರದ ಎಲ್ಲಾ ನಿಯಮಗಳನ್ನು ಪೂರ್ತಿಯಾಗಿ ಪಾಲಿಸಬೇಕಾಗಿ ವಿನಂತಿ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಎಲ್ಲಾ ಭಕ್ತರು ಪಾಲ್ಗೊಳ್ಳಬೇಕಾಗಿ ಶೇಷವನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಟ್ರಸ್ಟ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.


