ತಿರುವನಂತಪುರ: ಕೊರೊನಾ ಹಿನ್ನೆಲೆಯಲ್ಲಿ ಭವಿಷ್ಯದ ತೂಗುಯ್ಯಾಲೆಯಲ್ಲಿ ಚಿಂತಾಕ್ರಾಂತರಾದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಶುಭ ಸುದ್ದಿಯೊಂದನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ. ರಾಜ್ಯದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶ ಜೂನ್ 30 ರಂದು ಹೊರಬೀಳಲಿದೆ ಎಂದು ಘೋಶಿಸಲಾಗಿದೆ. ಹೈಯರ್ ಸೆಕೆಂಡರಿ ಪರೀಕ್ಷೆಯ ಫಲಿತಾಂಶ ಜುಲೈ 10 ರಂದು ಪ್ರಕಟಿಸಲಾಗುವುದು. ಕೋವಿಡ್ ರಕ್ಷಣಾ ಕಾರ್ಯವನ್ನು ಮುಂದುವರಿಸುವಾಗ ಸರ್ಕಾರವು ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಎಸ್‍ಎಸ್‍ಎಲ್‍ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪ ಈಗಾಗಲೇ ಪೂರ್ಣಗೊಂಡಿದೆ. ಟ್ಯಾಬ್ಯುಲೇಶನ್ ಮತ್ತು ಪುನರ್ ಮೌಲ್ಯಮಾಪನ ಮಾತ್ರ ಉಳಿದಿವೆ. ಪರೀಕ್ಷಾ ಭವನ ಈ ಬಗ್ಗೆ ಮಂಗಳವಾರ ಮಾಹಿತಿ ಬಿಡುಗಡೆ ಮಾಡಿದೆ.
ಹೈಯರ್ ಸೆಕೆಂಡರಿ ಮತ್ತು ಪೊಕೇಶನಲ್ ಹೈಯರ್ ಸೆಕೆಂಡರಿ ಪತ್ರಿಕೆಗಳ ಮೌಲ್ಯಮಾಪನ ಮುಂದುವರೆದಿದೆ ಎಂದು ಪರೀಕ್ಷಾ ಕಾರ್ಯದರ್ಶಿ ಕೆ.ಐ.ಲಾಲ್ ಬುಧವಾರ ಹೇಳಿದ್ದಾರೆ.


