ತಿರುವನಂತಪುರ: ಕುಖ್ಯಾತ ಹೋರಾಟಗಾರ್ತಿ ರೆಹೆನಾ ಫಾತಿಮಾ ವಿರುದ್ಧ ಜಾಮೀನು ರಹಿತ ದೂರು ದಾಖಲಾಗಿದೆ. ತನ್ನ ನಗ್ನ ಶರೀರದಲ್ಲಿ ಮಕ್ಕಳಿಂದ ಚಿತ್ರ ಬರೆಯಿಸಿದ ರಹೆನಾ ಫಾತಿಮ ವಿರುದ್ದ ಐಟಿ ಆಕ್ಟ್ ಪ್ರಕಾರ ದೂರು ದಾಖಲಾಗಿದೆ.ಸಾಮಾಜಿಕ ಜಾಲತಾಣದಲ್ಲಿ ರಹೆನಾಳ ವೀಡಿಯೋ ವ್ಯಾಪಕ ಹರಿಡಾಟುತ್ತಿರುವಂತೆ ವಿವಾದ ವಾಗಿದ್ದು ಜಾಮೀನು ರಹಿತ ದೂರು ದಾಖಲಾಗಿದೆ.
ರೆಹನಾ ಫಾತಿಮಾಳು ಯೂಟ್ಯೂಬ್ ಚಾನೆಲ್ ಮೂಲಕ "ಸ್ತ್ರೀ ದೇಹದ ಅಪ್ರಬುದ್ದ ಜ್ಞಾನ ಮತ್ತು ಲೈಂಗಿಕತೆಯ ಬಗ್ಗೆ ಇರುವ ಮಿಥ್ಯಾರೋಪಗಳಿಗೆ ಎದುರಾಗಿ" ಎಂಬ ಶಿರೋನಾಮೆಯೊಂದಿಗೆ ವೀಡಿಯೋ ಹರಿಯಬಿಟ್ಟಿದ್ದಳು.
ಬಾಡಿ ಆಟ್ರ್ಸ್ ಆಂಡ್ ಪೊಲಿಟಿಕ್ಸ್ ಎಂಬ ಶಿರೋನಾಮೆಯನ್ನೂ ನೀಡಿರುವ ವೀಡಿಯೋ ದಲ್ಲಿ ಲೈಂಗಿಕ ನಿರಾಶೆಗೊಳಗಾದ ಸಮಾಜದಲ್ಲಿ ವಸ್ತ್ರಗಳೊಳಗೆ ಸ್ರೀ ಸುರಕ್ಷಿತಳಲ್ಲ. ಸ್ತ್ರೀ ಶರೀರ ಎಂದರೇನು ಮತ್ತು ಲೈಂಗಿಕತೆ ಎಂದರೇನು ಎನ್ನುವುದನ್ನು ಬಹಿರಂಗವಾಗಿ ತೋರ್ಪಡಿಸಬೇಕೆಂದು ರೆಹನಾ ಬರೆದುಕೊಂಡಿದ್ದಾಳೆ. ಇದು ಮನೆಯಿಂದಲೇ ಆರಂಭಗೊಳ್ಳಬೇಕು,ಇದರಿಂದ ಸಾಮಾಜಿಕ ಬದಲಾವಣೆ ಸಾಧ್ಯ ಎಂದಾಕೆ ಹೇಳಿರುವುದು ವಿವಾದವಾಗಿತ್ತು.


