ತಿರುವನಂತಪುರ: ರಾಜ್ಯ ಸರ್ಕಾರ ಮತ್ತೆ ವಿವಾದದ ಸುಳಿಯಲ್ಲಿ ಸಿಲುಕುವ ಸಾಧ್ಯತೆ ತೆರೆದುಕೊಂಡಿದೆ. ರಾಜ್ಯ ಸರ್ಕಾರ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರನ್ನು ನೇಮಿಸಿರುವುದು ಇದೀಗ ಚರ್ಚೆಗೆ ಕಾರಣವಾಗುತ್ತಿದೆ. ಕೆ.ವಿ.ಮನೋಜ್ ಕುಮಾರ್ ಹೊಸ ಅಧ್ಯಕ್ಷರಾಗಿ ನಿಯುಕ್ತರಾಗಿದ್ದಾರೆ. ಮಾನದಂಡಗಳನ್ನು ದುರ್ಬಲಗೊಳಿಸುವ ಮೂಲಕ ಸಿಪಿಎಂ ಪಕ್ಷದ ಸಕ್ರೀಯ ಸದಸ್ಯನೋರ್ವನನ್ನು ನೇಮಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂಬ ಆರೋಪದ ನಡುವೆ ಈ ನೇಮಕಾತಿ ಬಂದಿದೆ.
ಮನೋಜ್ ಕುಮಾರ್ ಅವರನ್ನು ಸಮಾಜ ಕಲ್ಯಾಣ ಇಲಾಖೆಯ ಉಸ್ತುವಾರಿ ಸಚಿವ ಕೆ.ಕೆ.ಶೈಲಜಾ ಅವರನ್ನೊಳಗೊಂಡ ಸಮಿತಿಯು ಆಯ್ಕೆ ಮಾಡಿದೆ. ತಲಶ್ವೇರಿ ವಕೀಲರ ಸಂಘದ ನಾಯಕರಾಗಿ ಗುರುತಿಸಿಕೊಂಡಿರುವ ಮನೋಜ್ ಕುಮಾರ್ ಸಿಪಿಎಂ ಕಾರ್ಯಕರ್ತ. ಮನೋಜ್ ಕುಮಾರ್ ಅವರು ಮುಖ್ಯ ಕಾರ್ಯದರ್ಶಿ ಹುದ್ದೆಗೆ ಅಗತ್ಯವಾದ ಅರ್ಹತೆಗಳನ್ನು ಹೊಂದಿಲ್ಲ ಮತ್ತು ಸರ್ಕಾರದ ಮಾನದಂಡಗಳನ್ನು ದುರ್ಬಲಗೊಳಿಸಿದ್ದಾರೆ ಎಂದು ವಿವಿಧ ಮೂಲಗಳು ಆರೋಪಿಸಿವೆ.
ಅರ್ಹತಾ ಮಾನದಂಡಗಳಿಗೆ ಅನುಸಾರ ನ್ಯಾಯಾಧೀಶರನ್ನು ನೇಮಿಸುವುದು ರೂಢಿಯಾಗಿದೆ. ಆದರೆ, ಮನೋಜ್ ಕುಮಾರ್ ಅವರನ್ನು ನೇಮಕ ಮಾಡಲು ಈ ಸ್ಥಾನಕ್ಕೆ ಅರ್ಹರಾಗಿದ್ದ ಇಬ್ಬರು ಜಿಲ್ಲಾ ನ್ಯಾಯಾಧೀಶರಿಗೆ ಅವಕಾಶ ತಪ್ಪಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಮುಖ್ಯ ನ್ಯಾಯಮೂರ್ತಿಯನ್ನು ಮೂರು ವರ್ಷಗಳ ನ್ಯಾಯಾಂಗ ಅಧಿಕಾರದೊಂದಿಗೆ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಗುವುದು.
ಆಯೋಗದ ಅಧ್ಯಕ್ಷರಿಗೆ ಪ್ರಮುಖ ಅರ್ಹತೆಗಳೆಂದರೆ ಮಕ್ಕಳ ಹಕ್ಕುಗಳ ಜ್ಞಾನ ಮತ್ತು ಆಯೋಗದ ಕಾರ್ಯಾಚಟುವಟಿಕೆಯ ಅರಿವು ಮುಖ್ಯಚವಾಗಿರುತ್ತದೆ. ಆದರೆ ಮನೋಜ್ ಕುಮಾರ್ ಅವರು ಶಾಲೆಯೊಂದರ ಪಿಟಿಎ ಅಧ್ಯಕ್ಷರಾಗಿರುವರೇ ಹೊರತು ಬೇರೆ ಹೆಚ್ಚಿನ ಸ್ಥಾನಮಾನ ಈವರೆಗೆ ಹೊಂದಿದವರಲ್ಲ. ವರದಿಗಳು ಹೇಳುವಂತೆ, ಮೇ 25 ಮತ್ತು 26 ರಂದು ಸಂದರ್ಶನವೊಂದರಲ್ಲಿ ಅವರು ಆಯೋಗದ ಅಧ್ಯಕ್ಷರಾಗಿ ಆಯ್ಕೆಯಾದರು.


