ತಿರುವನಂತಪುರ: ಏಕಾಏಕಿ ರಾಜ್ಯದಲ್ಲಿ ವ್ಯಾಪಕ ಪ್ರಮಾಣದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವುದರಿಂದ ಜನರ ಸಂಪರ್ಕವನ್ನು ನಿಯಂತ್ರಿಸುವ ದೃಷ್ಟಿಯಿಂದ ರಾಜ್ಯದಲ್ಲಿ ಮೂರು ಜಿಲ್ಲೆಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತಿದೆ. ತಿರುವನಂತಪುರ, ತ್ರಿಶೂರ್ ಮತ್ತು ಮಲಪ್ಪುರಂ ಜಿಲ್ಲೆಗಳನ್ನು ಬುಧವಾರದಿಂದ ಕಟ್ಟುನಿಟ್ಟಾಗಿ ನಿಯಂತ್ರಿಸಲಾಗಿದೆ. ಈ ಪ್ರದೇಶಗಳ ಮಾರುಕಟ್ಟೆಗಳು ಮತ್ತು ಮಾಲ್‍ಗಳು ನಿಯಂತ್ರಣದಲ್ಲಿರುತ್ತದೆ.
ರಾಜಧಾನಿಯ ಮೇಲಿನ ನಿರ್ಬಂಧಗಳು ಹೀಗಿವೆ:
ತಿರುವನಂತಪುರಂನ ಸೆಕ್ರಟರಿಯೇಟ್ ಕಾರ್ಯದರ್ಶಿ ಸೇರಿದಂತೆ ಸಾರ್ವಜನಿಕ ನಿಯಂತ್ರಣವನ್ನು ಬುಧವಾರದಿಂದಲೇ ಜಾರಿಗೆ ತರಲಾಗಿದೆ. ಜನಸಂದಣಿ ವ್ಯಾಪಕವಿರುವ ಪ್ರಮುಖ ಮಾರುಕಟ್ಟೆಗಳಾದ ಚಾಲಾ ಮತ್ತು ಪಲಯಂನಲ್ಲಿ ವ್ಯಾಪಾರ ಮುಂಗಟ್ಟುಗಳ ಚಟುವಟಿಕೆಗಳಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ತರಕಾರಿ ಮತ್ತು ಹಣ್ಣಿನ ಅಂಗಡಿಗಳು ಸೋಮವಾರ, ಮಂಗಳವಾರ, ಶುಕ್ರವಾರ ಮತ್ತು ಶನಿವಾರದಂದು ಮಾತ್ರ ವ್ಯಾಪಾರ ನಡೆಸಲಿವೆ.
ತಿರುವನಂತಪುರದಲ್ಲಿ ದಿನಸಿ ಅಂಗಡಿಗಳು ಮತ್ತು ಇತರ ಅಂಗಡಿಗಳು ಎಲ್ಲಾ ದಿನಗಳೂ ತೆರೆದಿರುತ್ತವೆ. ಆದರೆ ಮಾಲ್‍ಗಳು ಮತ್ತು ಸೂಪರ್‍ಮಾರ್ಕೆಟ್‍ಗಳು ಸೋಮವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರದಂದು ಮಾತ್ರ ತೆರೆದಿರುತ್ತವೆ. ತಿರುವನಂತಪುರಂನ ಕರಿಕಂ ಮತ್ತು ಕಡಕ್ಕಂಪಲ್ಲಿ ವಾರ್ಡ್‍ಗಳನ್ನು ಕಂಟೋನ್ಮೆಂಟ್ ವಲಯಗಳಾಗಿ ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಲಾಕ್‍ಡೌನ್ ನಿಯಂತ್ರಣಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.
ಭದ್ರತಾ ಸಿಬ್ಬಂದಿಗೆ ಕಳವಳ:
ತಿರುವನಂತಪುರಂ ವೈದ್ಯಕೀಯ ಕಾಲೇಜಿನ ಭದ್ರತಾ ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿರುವುದರಿಂದ ಆಸ್ಪತ್ರೆಗಳಲ್ಲಿನ ಇತರ ಉದ್ಯೋಗಸ್ಥರು ತೀವ್ರ ಕಳವಳಗೊಂಡಿರುವರು. ಕೋವಿಡ್ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಸಹಿತ ಅನೇಕ ಆಸ್ಪತ್ರೆಗಳ ಭದ್ರತಾ ಸಿಬ್ಬಂದಿಗಳು ರೋಗಿಗಳನ್ನು ಹತ್ತಿರದಿಂದ ಪರಿಶೀಲಿಸುವ ಹೊಣೆ ನಿರ್ವಹಿಸುತ್ತಿರುವುದರಿಂದ ಭದ್ರತಾ ಸಿಬ್ಬಂದಿಗಳ ಸೋಂಕು ಹರಡುವಿಕೆಯ ಭೀತಿಗೊಳಗಾಗಿದ್ದಾರೆ.


