ಕುಂಬಳೆ: ಕುಂಬಳೆ ಕೃಷಿ ಭವನದ ನೇತೃತ್ವದಲ್ಲಿ ಫಲಪುಷ್ಪ ಗಿಡಗಳ ಕೃಷಿ ಮಾರಾಟ ಕೇಂದ್ರಕ್ಕೆ ಕುಂಬಳೆಯಲ್ಲಿ ಸೋಮವಾರ ಚಾಲನೆ ನೀಡಲಾಯಿತು. ಕೃಷಿಕರಿಗೆ ಫಲಪುಷ್ಪ ಗಿಡಗಳ ಕೃಷಿಗೆ ಅಗತ್ಯವಿರುವ ಬೀಜ ಮತ್ತು ಗೊಬ್ಬರಗಳನ್ನು ಈ ಸಂದರ್ಭ ವಿತರಿಸಲಾಯಿತು.
ಮಾರಾಟ ಕೇಂದ್ರವನ್ನು ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್.ಉದ್ಘಾಟಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ.ಆರೀಫ್, ಗ್ರಾ.ಪಂ.ಸದಸ್ಯರುಗಳಾದ ಸುಧಾಕರ ಕಾಮತ್ ಕುಂಬಳೆ, ಮುರಳೀಧರ ಯಾದವ್ ನಾಯ್ಕಾಪು ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ಕೆ.ನಾಣು ಕುಟ್ಟನ್ ಅವರು ಮಾರಾಟ ಕೇಂದ್ರದ ಕಾರ್ಯಚಟುವಟಿಕೆ ಬಗ್ಗೆ ಯೋಜನಾ ಮಾಹಿತಿ ನೀಡಿದರು. ಸಹಾಯಕ ಕೃಷಿ ಅಧಿಕಾರಿ ಕೆ.ಎನ್.ಉಷಾಕುಮಾರಿ ಸ್ವಾಗತಿಸಿ, ವಂದಿಸಿದರು.


