ಪೆರ್ಲ: ಭಾರತ-ಚೀನಾ ಗಡಿಯ ಗಲ್ವನ್ ಕಣಿವೆಯಲ್ಲಿ ಚೀನಾದ ಕುತಂತ್ರಿಗಳ ವಿರುದ್ಧ ಹೋರಾಡಿ ವೀರ ಮೃತ್ಯುವನ್ನು ಅಪ್ಪಿದ ಭಾರತಾಂಬೆಯ ಹೆಮ್ಮೆಯ ಪುತ್ರರಿಗೆ ಎಣ್ಮಕಜೆ ಪಂಚಾಯತಿ ಬಿಜೆಪಿ ವತಿಯಿಂದ ಇತ್ತೀಚೆಗೆ ಪೆರ್ಲದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪೆರ್ಲ ಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ರೂಪವಾಣಿ ಆರ್ ಭಟ್ ಉದ್ಘಾಟಿಸಿದರು ಪಂಚಾಯತಿ ಸಮಿತಿ ಅಧ್ಯಕ್ಷ ಉದಯ ಚೆಟ್ಟಿಯಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ನಾರಾಯಣ ನಾಯ್ಕ ಅಡ್ಕಸ್ಥಳ ಸ್ವಾಗತಿಸಿ ವಂದಿಸಿದರು. ಹಿರಿಯ ಸದಸ್ಯ ಹರಿಶ್ಚಂದ್ರ ಆಚಾರ್ ನಲ್ಕ, ಪಕ್ಷದ ನೇತಾರರಾದ ಪುಷ್ಪ ಆಮೆಕ್ಕಳ, ಸುರೇಶ್ ವಾಣಿನಗರ, ಸವಿತಾ ಬಾಳಿಕೆ, ಮಮತಾ ರೈ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.


