ನವದೆಹಲಿ: 21ನೇ ಶತಮಾನದ ಅಂತ್ಯಕ್ಕೆ ಭಾರತದಲ್ಲಿ ಸರಾಸರಿ ತಾಪಮಾನ 4.4 ಡಿಗ್ರಿ ಸೆಲ್ಸಿಯಸ್‍ನಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಉಷ್ಣ ಮಾರುತಗಳ (ಹೀಟ್‍ವೇವ್) ಪ್ರಮಾಣವೂ 3ರಿಂದ 4 ಪಟ್ಟು ಹೆಚ್ಚಲಿದೆ ಎಂದು ಹವಾಮಾನ ಬದಲಾವಣೆ ಕುರಿತ ಕೇಂದ್ರ ಸರ್ಕಾರದ ವರದಿ ಹೇಳಿದೆ.
ಶತಮಾನದ ಅಂತ್ಯಕ್ಕೆ ಬಿಸಿಗಾಳಿಯ ತೀವ್ರತೆ ಮತ್ತಷ್ಟು ಹೆಚ್ಚಲಿದ್ದು, ಇದು ಮೂರರಿಂದ ನಾಲ್ಕು ಪಟ್ಟು ಹೆಚ್ಚಬಹುದು ಎಂದು ಕೇಂದ್ರದ ಭೂ ವಿಜ್ಞಾನ ಸಚಿವಾಲಯ ಸಿದ್ಧಪಡಿಸಿದ ವರದಿ ತಿಳಿಸಿದೆ.
ಸಚಿವಾಲಯದ ಅಧೀನದಲ್ಲಿರುವ ಹವಾಮಾನ ಬದಲಾವಣೆ ಸಂಶೋಧನಾ ಕೇಂದ್ರವು ಈ ವರದಿಯನ್ನು ಸಿದ್ಧಪಡಿಸಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಅವರು ನಾಳೆ ಈ ವರದಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಭಾರತದಲ್ಲಿ ಹಿಂದಿನಿಂದಲೂ ತಾಪಮಾನ ಏರುತ್ತಲೇ ಇದೆ. 1901ರಿಂದ 2018ರ ಅವಧಿಯಲ್ಲಿ ಉಷ್ಣತೆಯು ಸರಾಸರಿ 0.7 ಡಿಗ್ರಿ ಸೆಲ್ಸಿಯಸ್‍ನಷ್ಟು ಏರಿಕೆಯಾಗಿದೆ. ಹಸಿರು ಮನೆ ಅನಿಲ ಹೊರಸೂಸುವಿಕೆಯು ಈ ಏರಿಕೆಗೆ ಕಾರಣ ಎಂದು ವರದಿಯಲ್ಲಿ ವಿವರಿಸಲಾಗಿದೆ.
1986ರಿಂದ 2015ರವರೆಗಿನ 30 ವರ್ಷಗಳಲ್ಲಿ ಅತಿ ಹೆಚ್ಚು ಬಿಸಿಯಿದ್ದ ದಿನದ ಉಷ್ಣತೆಯು 0.63 ಡಿಗ್ರಿ ಸೆಲ್ಸಿಯಸ್‍ನಷ್ಟು ಮತ್ತು ಅತ್ಯಂತ ಚಳಿಯ ದಿನದ ಉಷ್ಣತೆಯು 5.5 ಡಿಗ್ರಿ ಸೆಲ್ಸಿಯಸ್‍ನಷ್ಟು ಹೆಚ್ಚಳವಾಗಿದೆ. ಈ ಶತಮಾನದ ಕೊನೆಯ ಹೊತ್ತಿಗೆ, ಅತಿ ಉಷ್ಣತೆಯ ದಿನದ ಬಿಸಿಯು 4.7 ಡಿಗ್ರಿ ಸೆಲ್ಸಿಯಸ್ ಮತ್ತು ಅತ್ಯಂತ ಚಳಿಯ ದಿನದ ತಾಪವು 5.5 ಡಿಗ್ರಿ ಸೆಲ್ಸಿಯಸ್‍ನಷ್ಟು ಏರಲಿದೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ.