ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 6 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಬ್ಬರು ಗುಣಮುಖರಾಗಿದ್ದಾರೆ.
ಮಹಾರಾಷ್ಟ್ರದಿಂದ ಬಂದ 58 ವರ್ಷದ ಪಡನ್ನ ಪಂಚಾಯತ್ ನಿವಾಸಿ, ಅವರ 19 ವರ್ಷದ ಪುತ್ರ, 37 ವರ್ಷದ ಮಂಗಲ್ಪಾಡಿ ಪಂಚಾಯತ್ ನಿವಾಸಿ, ಹರಿಯಾನದಿಂದ ಬಂದ 36 ವರ್ಷದ ಕಿನಾನೂರು ಕರಿಂದಳಂ ಪಂಚಾಯತ್ ನಿವಾಸಿ, ಯುಎಇಯಿಂದ ಬಂದ 27 ವರ್ಷದ ಬೇಡಡ್ಕ ಪಂಚಾಯತ್ ನಿವಾಸಿ ಮತ್ತು 56 ವರ್ಷದ ಪಳ್ಳಿಕೆರೆ ಪಂಚಾಯತ್ ನಿವಾಸಿಗೆ ರೋಗ ಬಾಧಿಸಿದೆ. ಉಕ್ಕಿನಡ್ಕದ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 30 ವರ್ಷದ ಕುಂಬಳೆ ಪಂಚಾಯತ್ ನಿವಾಸಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ 3651 ಮಂದಿ ನಿಗಾವಣೆಯಲ್ಲಿದ್ದಾರೆ. 247 ಮಂದಿಯ ನಿಗಾವಣೆ ಕಾಲಾವಧಿ ಮುಕ್ತಾಯಗೊಂಡಿತು. ಭಾನುವಾರ ಶಂಕಿತ 338 ಮಂದಿಯನ್ನು ನಿಗಾವಣೆಗೆ ಕಳುಹಿಸಲಾಗಿದೆ.
ಕೇರಳ ರಾಜ್ಯದಲ್ಲಿ 54 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ರವಿವಾರ 54 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಇದೇ ಸಂದರ್ಭದಲ್ಲಿ 56 ಮಂದಿ ಗುಣಮುಖರಾಗಿದ್ದಾರೆ.
ಕಲ್ಲಿಕೋಟೆ-8, ಎರ್ನಾಕುಳಂ-7, ತೃಶ್ಶೂರು-7, ಪಾಲ್ಘಾಟ್-6, ಕಾಸರಗೋಡು-6, ತಿರುವನಂತಪುರ-4, ಕಣ್ಣೂರು-4, ಕೋಟ್ಟಯಂ-3, ಮಪ್ಪುರ=3, ಪತ್ತನಂತಿಟ್ಟ-2, ಇಡುಕ್ಕಿ-2, ಕೊಲ್ಲಂ-1, ವಯನಾಡು-1 ಎಂಬಂತೆ ರೋಗ ದಢೀಕರಿಸಲಾಗಿದೆ. ಇವರಲ್ಲಿ 23 ಮಂದಿ ವಿದೇಶದಿಂದ ಬಂದವರು. 25 ಮಂದಿ ಇತರ ರಾಜ್ಯಗಳಿಂದ ಬಂದವರು. ಮೂವರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಮೂವರು ಆರೋಗ್ಯ ಕಾರ್ಯಕರ್ತರಿಗೆ ರೋಗ ಬಾಧಿಸಿದೆ.
ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 56 ಮಂದಿ ಗುಣಮುಖರಾಗಿದ್ದಾರೆ. ಪಾಲ್ಘಾಟ್-27, ತೃಶ್ಶೂರು-7, ಮಲಪ್ಪುರಂ-5, ತಿರುವನಂತಪುರ-3, ಆಲಪ್ಪುಳ-3(ಒಬ್ಬರು ತಿರುವನಂತಪುರ ನಿವಾಸಿ), ಎರ್ನಾಕುಳಂ-3(ತಲಾ ಒಬ್ಬರು ತೃಶ್ಶೂರು ಮತ್ತು ಕಲ್ಲಿಕೋಟೆ ನಿವಾಸಿ), ಕೋಟ್ಟಯಂ-2, ಇಡುಕ್ಕಿ-2, ಕಣ್ಣೂರು-2, ವಯನಾಡು-1, ಕಾಸರಗೋಡು-1 ಎಂಬಂತೆ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 1340 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1101 ಮಂದಿ ರೋಗ ಮುಕ್ತರಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು 2,42,767 ಮಂದಿ ನಿಗಾವಣೆಯಲ್ಲಿದ್ದಾರೆ. ಇವರಲ್ಲಿ 2,40,744 ಮಂದಿ ಮನೆಗಳಲ್ಲೂ, ಇನ್‍ಸ್ಟಿಟ್ಯೂಶನಲ್ ಕ್ವಾರೆಂಟೈನ್‍ನಲ್ಲಿದ್ದಾರೆ. 2023 ಮಂದಿ ಆಸ್ಪತ್ರೆಗಳಲ್ಲಿ ನಿಗಾವಣೆಯಲ್ಲಿದ್ದಾರೆ. ಭಾನುವಾರ ಶಂಕಿತ 224 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ವರೆಗೆ 1,12,962 ಮಂದಿ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, 2851 ಸ್ಯಾಂಪಲ್‍ಗಳ ವರದಿ ಬರಲು ಬಾಕಿಯಿದೆ. ಕಾಸರಗೋಡು ಜಿಲ್ಲೆಯ ಕಾಂಞಂಗಾಡ್, ಕಾರಡ್ಕ, ಪಳ್ಳಿಕೆರೆಯನ್ನು ಹಾಟ್‍ಸ್ಪಾಟ್‍ನಲ್ಲಿ ಸೇರ್ಪಡೆಗೊಳಿಸಲಾಗಿದೆ. ವರ್ಕಾಡಿಯನ್ನು ಹಾಟ್‍ಸ್ಪಾಟ್‍ನಿಂದ ಹೊರತುಪಡಿಸಲಾಗಿದೆ.
ಮಾಸ್ಕ್ ಧರಿಸದ 215 ಮಂದಿ ವಿರುದ್ಧ ಕೇಸು : ಜಿಲ್ಲೆಯಲ್ಲಿ ಮಾಸ್ಕ್ ಧರಿಸದ 215 ಮಂದಿ ವಿರುದ್ಧ ಪೆÇಲೀಸರು ಕೇಸು ದಾಖಲಿಸಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ 6409 ಮಂದಿ ವಿರುದ್ಧ ಕೇಸು ದಾಖಲಿಸಿ ದಂಡ ವಿಧಿಸಲಾಗಿದೆ.
ಲಾಕ್‍ಡೌನ್ ಉಲ್ಲಂಘನೆ : 7 ಮಂದಿ ವಿರುದ್ಧ ಕೇಸು : ಲಾಕ್‍ಡೌನ್ ಉಲ್ಲಂಘಿಸಿದ ಆರೋಪದಲ್ಲಿ ಜಿಲ್ಲೆಯಲ್ಲಿ ಏಳು ಕೇಸುಗಳನ್ನು ದಾಖಲಿಸಲಾಗಿದೆ. ಮಂಜೇಶ್ವರ-2, ಮೇಲ್ಪರಂಬ-1, ಬೇಕಲ-1, ಹೊಸದುರ್ಗ-1, ವೆಳ್ಳರಿಕುಂಡು-2 ಎಂಬಂತೆ ಕೇಸು ದಾಖಲಿಸಲಾಗಿದ್ದು, ಆರು ಮಂದಿಯನ್ನು ಬಂ„ಸಲಾಗಿದೆ. ಮೂರು ವಾಹನಗಳನ್ನು ವಶಪಡಿಸಲಾಗಿದೆ. ಇದು ವರೆಗೆ 2627 ಕೇಸುಗಳನ್ನು ದಾಖಲಿಸಲಾಗಿದ್ದು, 3298 ಮಂದಿಯನ್ನು ಬಂಧಿಸಲಾಗಿದೆ. 1129 ವಾಹನಗಳನ್ನು ವಶಪಡಿಸಲಾಗಿದೆ.


