ಕುಂಬಳೆ: ಕುಂಬಳೆ ಸೀತಾಂಗೋಳಿ ರಸ್ತೆಯ ನಾಯ್ಕಾಪು ಲಿಟ್ಲು ಲಿಲ್ಲಿ ಶಾಲಾ ಬಳಿ ಭಾನುವಾರ ಸಂಜೆ ಕಾರೊಂದು ಮಗುಚಿ ಇಬ್ಬರು ದಾರುಣರಾಗಿ ಮೃತಪಟ್ಟ ಘಟನೆ ನಡೆದಿದೆ. ಓರ್ವ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕಾಸರಗೋಡು ತಳಂಗರೆ ನಿವಾಸಿ ಮಿತ್ತು(18), ಕುಂಬಳೆ ಬದ್ರಿಯಾ ನಗರದ ಅಬ್ದುಲ್ ಸಾಲಿ-ಹಸೀನಾ ದಂಪತಿಗಳ ಪುತ್ರ ಹುಸೈನ್(17) ಮೃತ ದುರ್ದೈವಿಗಳು. ಈ ಪೈಕಿ ಮಿತ್ತು ಅಪಘಾತ ನಡೆದ ಸ್ಥಳದಲ್ಲೇ ಮೃತನಾದರೆ ಹುಸೈನ್ ಆಸ್ಪತ್ರೆಗೆ ಕರೆದೊಯ್ಯುವ ಮಧ್ಯೆ ಮೃತಪಟ್ಟನು. ಜೊತೆಗಿದ್ದ ಮುಹಮ್ಮದ್ ಸುಹೈಲ್ ಗಂಭೀರಾವಸ್ಥೆಯಲ್ಲಿ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು ನಾಲ್ಕು ಮಂದಿ ಕಾರಲ್ಲಿ ಪ್ರಯಾಣಿಸುತ್ತಿದ್ದು,ಈ ಪೈಕಿ ಓರ್ವ ಯಾವುದೇ ಗಾಯಗಳಿಲ್ಲದೆ ಪಾರಾಗಿರುವರು. ಕುಂಬಳೆ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದರು.


