ಪೆರ್ಲ: ಅಬಕಾರಿ ದಳ ಕಾಸರಗೋಡು ಜಿಲ್ಲೆಯ ವಿವಿಧೆಡೆ ನಡೆಸುತ್ತಿರುವ ಚುರುಕಿನ ತಪಾಸಣೆಯಲ್ಲಿ 5.76 ಕರ್ನಾಟಕ ನಿರ್ಮಿತ ಮದ್ಯ, 90 ಲೀ. ಹುಳಿರಸ, 8 ಲೀ. ಅಕ್ರಮ ಸಾರಾಯಿ ಪತ್ತೆಯಾಗಿದೆ.
ಪೆರ್ಲದಲ್ಲಿ ಮದ್ಯ ಪತ್ತೆಯಾಗಿದ್ದು, ಪ್ರಕಾಶ್ ರಾವ್ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಬಂದಡ್ಕ ಗ್ರಾಮದ ದರ್ಭೆತ್ತಡ್ಕ ದಲ್ಲಿ ಹುಳಿರಸ ಪತ್ತೆಯಾಗಿದ್ದು, ಎಚ್.ಚುಕ್ರ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಮಧೂರು ಗ್ರಾಮದ ಉದಯಗಿರಿ ಮತ್ತು ಚಿತ್ತಾರಿಕಲ್ ಗ್ರಾಮದ ಕಂಬಲ್ಲೂರು ಎಂಬಲ್ಲಿ ಸಾರಾಯಿ ಪತ್ತೆಯಾಗಿದ್ದು, ಟಿ.ಎನ್.ಕುಟ್ಟಪ್ಪನ್, ಕೆ.ರಾಜು ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದೆ.

