ಬದಿಯಡ್ಕ: ಕೇರಳ ಅಗ್ರಿಕಲ್ಚರಲ್ ಅಸಿಸ್ಟೆಂಟ್ ಅಸೋಸಿಯೇಶನ್‍ನ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ಬ್ಲಾಕ್ ಬದಿಯಡ್ಕ ಗ್ರಾಮಪಂಚಾಯಿತಿ ಪೆರಡಾಲ ಕೊರಗ ಕಾಲನಿಯಲ್ಲಿ ಸುಭಿಕ್ಷ ಕೇರಳಂ ಯೋಜನೆಯ ಅಂಗವಾಗಿ ತರಕಾರಿ ಗಿಡಗಳು ಹಾಗೂ ಫಲವೃಕ್ಷಗಳನ್ನು ಬೆಳೆಸುವ ಕಾರ್ಯಕ್ಕೆ ಚಾಲನೆಯನ್ನು ನೀಡಲಾಯಿತು.
ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿದರು. ಸಂಘಟನೆಯ ಜಿಲ್ಲಾ ಅಧ್ಯಕ್ಷ ಎ.ವಿ.ಮಧು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯರುಗಳಾದ ಹರೀಂದ್ರನ್ ಟಿ.ವಿ., ರಾಜೇಶ್ ಕಪ್ಪೆಳರಿ, ಶ್ರೀಹರಿ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯರುಗಳಾದ ನಿಶಾಂತ್, ಪ್ರಕಾಶನ್, ರವಿ ಕಿಳಕ್ಕೇವೀಡು, ಕರುಣಾಕರನ್ ಕೆ., ಕಾಲನಿವಾಸಿಗಳಾದ ಚಂದ್ರಹಾಸ, ಅನಿತಾ ಪಾಲ್ಗೊಂಡಿದ್ದರು.
ಮರಗೆಣಸು, ಸಿಹಿಗೆಣಸು, ಬಾಳೆ, ಫ್ಯಾಷನ್ ಫ್ರುಟ್, ನುಗ್ಗೆ, ತರಕಾರಿಗಿಡಗಳನ್ನು ನೆಡಲಾಯಿತು. ಗಿಡಗಳಿಗೆ ಕುಮ್ಮಾಯ ಹಾಗೂ ಎಲುಬಿನ ಹುಡಿಗಳನ್ನೂ ಗೊಬ್ಬರವಾಗಿ ಬಳಸಲಾಯಿತು. ಜಿಲ್ಲಾ ಕಾರ್ಯದರ್ಶಿ ಜಯರಾಮನ್ ಸ್ವಾಗತಿಸಿ, ಜಿಲ್ಲಾ ಕೋಶಾಧಿಕಾರಿ ಮುರಳೀಧರನ್ ನಾಯರ್ ವಂದಿಸಿದರು.


