ಕಾಸರಗೋಡು: ಕಾಸರಗೋಡು ಜಿಲ್ಲೆಗೆ ಬುಧವಾರ ಸಮಾಧಾನಕರ ದಿನವಾಗಿದ್ದು, ಒಂದು ಕೂಡ ಕೋವಿಡ್ ಪಾಸಿಟಿವ್ ಪ್ರಕರಣಗಳಿಲ್ಲ. 11 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 102 ಮಂದಿ ಸೋಂಕು ಬಾ„ತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ, ಮಹಾರಾಷ್ಟ್ರ ದಿಂದ ಬಂದಿದ್ದ, ಕುಂಬಳೆ ನಿವಾಸಿ 42, 60 ವರ್ಷದ ವ್ಯಕ್ತಿಗಳು, ಪೈವಳಿಕೆ ನಿವಾಸಿ 35 ವರ್ಷದ ವ್ಯಕ್ತಿ, ವರ್ಕಾಡಿ ನಿವಾಸಿ 60 ವರ್ಷದ ವ್ಯಕ್ತಿ, ಮಂಗಲ್ಪಾಡಿ ನಿವಾಸಿ 45 ವರ್ಷದ ವ್ಯಕ್ತಿ, ಬದಿಯಡ್ಕ ನಿವಾಸಿ 63 ವರ್ಷದ ವ್ಯಕ್ತಿ, ಯು.ಎ.ಇ.ಯಿಂದ ಬಂದಿದ್ದ, ಉದುಮ ನಿವಾಸಿ 38 ವರ್ಷದ ವ್ಯಕ್ತಿ, ಉದಯಗಿರಿ ಸಿ.ಎಫ್.ಎಲ್.ಟಿ.ಯಲ್ಲಿ ದಾಖಲಾಗಿದ್ದ, ಮಹಾರಾಷ್ಟ್ರದಿಂದ ಆಗಮಿಸಿದ್ದ ಮಂಗಲ್ಪಾಡಿ ನಿವಾಸಿ 23 ವರ್ಷದ ವ್ಯಕ್ತಿ, ಬದಿಯಡ್ಕ ನಿವಾಸಿ 36 ವರ್ಷದ ವ್ಯಕ್ತಿ ಸಹಿತ 11 ಮಂದಿ ಗುಣಮುಖರಾದವರು.
ಜಿಲ್ಲೆಯಲ್ಲಿ ಒಟ್ಟು 9125 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3204 ಮಂದಿ, ಆಸ್ಪತ್ರೆಗಳಲ್ಲಿ 355 ಮಂದಿ ನಿಗಾದಲ್ಲಿದ್ದಾರೆ. 402 ಮಂದಿ ಬುಧವಾರ ತಮ್ಮ ನಿಗಾ ಅವ„ ಪೂರ್ಣಗೊಳಿಸಿದ್ದಾರೆ. 74 ಮಂದಿ ನೂತನವಾಗಿ ಬುಧವಾರ ಐಸೊಲೇಷನ್ ವಾರ್ಡಿಗೆ ದಾಖಲಾಗಿದ್ದಾರೆ. 335 ಮಂದಿಯ ಸ್ಯಾಂಪಲ್ ಬುಧವಾರ ತಪಾಸಣೆಗೆ ಕಳುಹಿಸಲಾಗಿದೆ. 610 ಮಂದಿಯ ಫಲಿತಾಂಶ ಲಭಿಸಿಲ್ಲ.
ಕೇರಳದಲ್ಲಿ 65 ಕೊರೋನಾ ಸೋಂಕು ಪ್ರಕರಣ :
ಕೇರಳದಲ್ಲಿ ಬುಧವಾರ 65 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 57 ಮಂದಿ ರೋಗಮುಕ್ತರಾಗಿದ್ದಾರೆ. ಸೋಂಕಿತರಲ್ಲಿ 34 ಮಂದಿ ವಿದೇಶದಿಂದ ಬಂದವರು. 25 ಮಂದಿ ಇತರ ರಾಜ್ಯಗಳಿಂದ ಬಂದವರು. ಐವರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ.
ಕಲ್ಲಿಕೋಟೆ-10, ತೃಶ್ಶೂರು-9(ಒಬ್ಬರು ಸಾವಿಗೀಡಾಗಿದ್ದಾರೆ), ಮಲಪ್ಪುರಂ-7, ತಿರುವನಂತಪುರ-6, ಪಾಲ್ಘಾಟ್-6, ಕೊಲ್ಲಂ-4, ಇಡುಕ್ಕಿ-4, ಎರ್ನಾಕುಳಂ-4, ವಯನಾಡು-4, ಕಣ್ಣೂರು-4, ಪತ್ತನಂತಿಟ್ಟ-3, ಕೋಟ್ಟಯಂ-3, ಆಲಪ್ಪುಳ-1 ಎಂಬಂತೆ ಬುಧವಾರ ರೋಗ ಬಾ„ಸಿದೆ.
ಕಾಸರಗೋಡು-11, ಕಣ್ಣೂರು-13, ಆಲಪ್ಪುಳ-7, ಪತ್ತನಂತಿಟ್ಟ-6, ವಯನಾಡು-6, ಕೊಲ್ಲಂ-4, ತಿರುವನಂತಪುರ-3, ಕಲ್ಲಿಕೋಟೆ-3, ಕೋಟ್ಟಯಂ-2, ಎರ್ನಾಕುಳಂ-2 ಎಂಬಂತೆ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ 1238 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 905 ಮಂದಿ ರೋಗ ಮುಕ್ತರಾಗಿದ್ದಾರೆ. ಜೂನ್ 7 ರಂದು ತೃಶ್ಶೂರು ಜಿಲ್ಲೆಯಲ್ಲಿ ಸಾವಿಗೀಡಾದ ಕುಮಾರನ್(87) ಅವರ ಸ್ಯಾಂಪಲ್ ಪರೀಕ್ಷೆಯಲ್ಲಿ ಕೋವಿಡ್ ದೃಢೀಕರಿಸಲಾಗಿದೆ. ಇದರೊಂದಿಗೆ ಕೊರೊನಾ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 17ಕ್ಕೇರಿದೆ.
ಕೇರಳ ರಾಜ್ಯದಲ್ಲಿ ಒಟ್ಟು 2,10,592 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 2,08,748 ಮಂದಿ ಮನೆಗಳಲ್ಲೂ, ಇನ್‍ಸ್ಟಿಟ್ಯೂಶನಲ್ ಕ್ವಾರೆಂಟೈನ್‍ನಲ್ಲಿದ್ದಾರೆ. 1844 ಮಂದಿ ಆಸ್ಪತ್ರೆಗಳಲ್ಲಿ ನಿಗಾವಣೆಯಲ್ಲಿದ್ದಾರೆ. ಬುಧವಾರ ಶಂಕಿತ 206 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ತನಕ 98,304 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, ಲಭ್ಯ 93,475 ಸ್ಯಾಂಪಲ್ ನೆಗೆಟಿವ್ ಆಗಿದೆ. ಕಾಸರಗೋಡು ಜಿಲ್ಲೆಯಲ್ಲಿ ವಲಿಯಪರಂಬ ಹಾಟ್‍ಸ್ಪಾಟ್ ಯಾದಿಯಲ್ಲಿ ಸೇರ್ಪಡೆಗೊಂಡಿದೆ. ರಾಜ್ಯದಲ್ಲಿ ಒಟ್ಟು 163 ಹಾಟ್‍ಸ್ಪಾಟ್‍ಗಳಿವೆ.
ಮಾಸ್ಕ್ ಧರಿಸದ 165 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 165 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಈ ಪ್ರಕರಣದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 5487 ಮಂದಿ ವಿರುದ್ಧ ಕೇಸು ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ.
ಲಾಕ್ ಡೌನ್ ಉಲ್ಲಂಘನೆ : 6 ಕೇಸುಗಳು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 6 ಕೇಸುಗಳನ್ನು ದಾಖಲಿಸಲಾಗಿದೆ. 6 ಮಂದಿಯನ್ನು ಬಂ„ಸಲಾಗಿದ್ದು, 3 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 1 ಕೇಸು, ಕಾಸರಗೋಡು 2, ಆದೂರು 1, ಬೇಕಲ 2 ಕೇಸುಗಳು ದಾಖಲಾಗಿವೆ. ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 2608 ಕೇಸುಗಳನ್ನು ದಾಖಲಿಸಲಾಗಿದೆ. 3278 ಮಂದಿಯನ್ನು ಬಂಧಿಸಲಾಗಿದ್ದು, 1124 ವಾಹನಗಳನ್ನು ವಶಪಡಿಸಲಾಗಿದೆ.


