ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 9 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಯಾರಿಗೂ ಕೋವಿಡ್ ನೆಗೆಟಿವ್ ಆಗಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ. ರಾಮದಾಸ್ ತಿಳಿಸಿದರು. ಸೋಂಕು ಖಚಿತಗೊಂಡವರಲ್ಲಿ 7 ಮಂದಿ ವಿದೇಶಗಳಿಂದ ಬಂದವರು. ಇಬ್ಬರು ಮಹಾರಾಷ್ಟ್ರದಿಂದ ಆಗಮಿಸಿದವರು ಎಂದವರು ನುಡಿದರು.
ಕುವೈತ್‍ನಿಂದ ಆಗಮಿಸಿದ್ದ ನೀಲೇಶ್ವರ ನಗರಸಭೆ ವ್ಯಾಪ್ತಿಯ 46 ವರ್ಷದ ನಿವಾಸಿ, ಈಸ್ಟ್ ಏಳೇರಿ ಪಂಚಾಯತ್‍ನ 23 ವರ್ಷದ ನಿವಾಸಿ, ಬಳಾಲ್ ಪಂಚಾಯತ್‍ನ 39 ವರ್ಷದ ನಿವಾಸಿ, ದುಬಾಯಿಯಿಂದ ಆಗಮಿಸಿದ್ದ ಕಾಂಞಂಗಾಡ್ ನಗರಸಭೆ ವ್ಯಾಪ್ತಿಯ 26 ಮತ್ತು 49 ವರ್ಷದ ನಿವಾಸಿಗಳು, ಕುಂಬಳೆ ಪಂಚಾಯತ್‍ನ 47 ವರ್ಷದ ನಿವಾಸಿ, ಬಹರೈನ್‍ನಿಂದ ಬಂದಿದ್ದ ಪಳ್ಳಿಕ್ಕರೆ ಪಂಚಾಯತ್‍ನ 34 ವರ್ಷದ ನಿವಾಸಿಗೆ ಸೋಂಕು ಖಚಿತವಾಗಿದೆ.
ಮಹಾರಾಷ್ಟ್ರದಿಂದ ಬಂದಿದ್ದ ಮಂಜೇಶ್ವರ ಪಂಚಾಯತ್‍ನ 68 ವರ್ಷದ ನಿವಾಸಿ, ತ್ರಿಕರಿಪುರ ಪಂಚಾಯತ್‍ನ 51 ವರ್ಷದ ನಿವಾಸಿ ರೋಗ ಸಾಬೀತಾದವರು.
ಜಿಲ್ಲೆಯಲ್ಲಿ 3641 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ ಮನೆಗಳಲ್ಲಿ 3328 ಮಂದಿ, ಸಾಂಸ್ಥಿಕ ನಿಗಾದಲ್ಲಿ 313 ಮಂದಿ ಇದ್ದಾರೆ. 476 ಮಂದಿಯ ತಪಾಸಣೆ ಫಲಿತಾಂಶ ಲಭಿಸಿಲ್ಲ. ನೂತನವಾಗಿ 94 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 255 ಮಂದಿ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
ಕೇರಳದಲ್ಲಿ 75 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಬುಧವಾರ 75 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ 90 ಮಂದಿ ಗುಣಮುಖರಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ರೋಗ ಬಾಧಿತರಲ್ಲಿ 53 ಮಂದಿ ವಿದೇಶದಿಂದ ಬಂದವರು 19 ಮಂದಿ ಇತರ ರಾಜ್ಯಗಳಿಂದ ಬಂದವರು. ಸಂಪರ್ಕದಿಂದ 3 ಮಂದಿಗೆ ರೋಗ ಬಾಧಿಸಿದೆ.
ತಿರುವನಂತಪುರ-3, ಕೊಲ್ಲಂ-14, ಪತ್ತನಂತಿಟ್ಟ-1, ಆಲಪ್ಪುಳ-1, ಕೋಟ್ಟಯಂ-4, ಎರ್ನಾಕುಳಂ-5, ತೃಶ್ಶೂರು-8, ಮಲಪ್ಪುರಂ-11, ಪಾಲ್ಘಾಟ್-6, ಕಲ್ಲಿಕೋಟೆ-6, ವಯನಾಡು-3, ಕಣ್ಣೂರು-4, ಕಾಸರಗೋಡು-9 ಮಂದಿಗೆ ರೋಗ ಬಾಧಿಸಿದೆ
ಈ ವರೆಗೆ ರಾಜ್ಯದಲ್ಲಿ 2697 ಮಂದಿಗೆ ರೋಗ ಬಾಧಿಸಿದೆ. ಈ ಪೈಕಿ 1326 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 1351 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 20 ಮಂದಿ ಸಾವಿಗೀಡಾಗಿದ್ದಾರೆ. ಬುಧವಾರ ಶಂಕಿತ 203 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ತನಕ 1,22,466 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದೆ. 3019 ಸ್ಯಾಂಪಲ್‍ಗಳ ಪರೀಕ್ಷಾ ವರದಿ ಬರಲು ಬಾಕಿಯಿದೆ. ವಿದೇಶದಲ್ಲಿ ಕೇರಳದ 277 ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೆ ಹಲವು ಮಂದಿ ಕೇರಳೀಯರು ಇತರ ರಾಜ್ಯಗಳಲ್ಲಿ ಸಾವಿಗೀಡಾಗಿದ್ದಾರೆ.
ಮಾಸ್ಕ್ ಧರಿಸದ 203 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 203 ಕೇಸುಗಳನ್ನು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ಆರೋಪದಲ್ಲಿ ಈ ವರೆಗೆ ಒಟ್ಟು 6876 ಕೇಸುಗಳನ್ನು ದಾಖಲಿಸಲಾಗಿದೆ.
ಲಾಕ್ ಡೌನ್ ಉಲ್ಲಂಘನೆ : 8 ಕೇಸು ದಾಖಲು :
ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 8 ಕೇಸಗಳನ್ನು ದಾಖಲಿಸಲಾಗಿದೆ. 11 ಮಂದಿಯನ್ನು ಬಂಧಿಸಲಾಗಿದ್ದು, 6 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 1 ಕೇಸು, ಕುಂಬಳೆ-1, ಕಾಸರಗೋಡು-1, ಆದೂರು-1, ಮೇಲ್ಪರಂಬ-1, ನೀಲೇಶ್ವರ-1, ಚೀಮೇನಿ- 1, ವೆಳ್ಳರಿಕುಂಡ್-1 ಕೇಸು ದಾಖಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 2639 ಕೇಸುಗಳು ದಾಖಲಾಗಿವೆ. 3330 ಮಂದಿಯನ್ನು ಬಂಧಿಸಲಾಗಿದ್ದು, 1141 ವಾಹನಗಳನ್ನು ವಶಪಡಿಸಲಾಗಿದೆ.
ನಾಳೆ ಸಭೆ : ಕಾಸರಗೋಡು ಜಿಲ್ಲೆಯ ಕೊರೋನಾ ಪ್ರತಿರೋಧ ಚಟುವಟಿಕೆಗಳ ಸಂಬಂಧ ಮಾತುಕತೆ ನಡೆಸುವ ನಿಟ್ಟಿನಲ್ಲಿ ಜೂ.19ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ„ಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ಜರುಗಲಿದೆ. ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಸಂಸದ, ಶಾಸಕರು, ನಗಸಭೆ ಅಧ್ಯಕ್ಷರು, ಗ್ರಾಮ ಪಂಚಾಯತ್ ಅಸೋಸಿಯೇಶನ್ ಅಧ್ಯಕ್ಷ, ಕಾರ್ಯದರ್ಶಿ ಭಾಗವಹಿಸುವರು.


