ಕಾಸರಗೋಡು: ರಾಜ್ಯ ಸರ್ಕಾರದ ಲೈಫ್ ಮಿಷನ್ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ 7951 ಕುಟುಂಬಗಳಿಗೆ ಈಗ ಸಮಾಧಾನದ ನಿಟ್ಟುಸಿರು ಬಿಡುವ ಸಮಯ. ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಅಪಾಯವಿರುವ, ತಳಹದಿಯೇ ಭದ್ರವಿಲ್ಲದ, ಹಳೆಯದಾದ ಮನೆಗಳಲ್ಲಿ ಭಯದಿಂದ ದಿನಗಳೆಯುತ್ತಿದ್ದ ಈ ಮಂದಿಗೆ ಲೈಫ್ ಮಿಷನ್ ಮೂಲಕ ಸದೃಡ ಸ್ವಂತ ಮನೆಗಳಲ್ಲಿ ಸುಭದ್ರ ನೆಲೆ ಒದಗಿದೆ. ಬಿರುಸಿನ ಬೇಸಗೆ ಮತ್ತು ಬಿಸುರಿನ ಗಾಳಿಮಳೆಗೆ ದುರ್ಬಲ ಮನೆಗಳಲ್ಲಿ ಭೀತಿಯಿಂದ ಬದುಕುತ್ತಿದ್ದ ಮಂದಿಗೆ 4 ವರ್ಷದ ಆಡಳಿತೆ ಪೂರೈಸಿದ ರಾಜ್ಯ ಸರಕಾರದಿಂದ ಈ ರೀತಿಯ ಸಂತಸ ಹಂಚಲ್ಪಟ್ಟಿದೆ.
ಜನಮನ ಸೆಳೆದ 4 ಮಿಷನ್ ಗಳಲ್ಲಿ ತಯಂತ ಜನಪರ ಎನಿಸಿದ ಲೈಫ್ ಮಿಷನ್ ಮೂರನೇ ಹಂತದ ಚಟುವಟಿಕೆಗಳಲ್ಲಿ ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಮನೆ ಒದಗಿಸಿದೆ. ಮೊದಲ ಹಂತದಲ್ಲಿ ಅರ್ಧ ದಲ್ಲೇ ಕಾಮಗಾರಿ ಉಳಿದಿದ್ದ ಮನೆಗಳ ಪೂರ್ತೀಕರಣ, ಎರಡನೇ ಹಂತದಲ್ಲಿ ಜಾಗವಿದ್ದು, ಮನೆಗಳಿಲ್ಲದ ಮಂದಿಗೆ ವಸತಿ ಒದಗಿಸುವುದು, ಮೂರನೇ ಹಂತದಲ್ಲಿ ಮನೆ, ಜಾಗವಿಲ್ಲದವರಿಗೆ ಫ್ಲಾಟ್ ಒದಗಿಸುವುದು ಉದ್ದೇಶ. ಕೋವಿಡ್ ಅವಧಿಯಲ್ಲಿ ಮನೆಗಳ ಕಾಮಗಾರಿಗೆ ಬಹಳ ತ್ರಾಸ ಅನುಭವಿಸಬೇಕಾಗಿ ಬಂದಿತ್ತು. ರಾಜ್ಯ ಸರಕಾರದ-ಆರೋಗ್ಯ ಇಲಾಖೆಯ ಕಟ್ಟುನಿಟ್ಟುಗಳನ್ನು ಪಾಲಿಸುತ್ತಾ ಮನೆಗಳ ನಿರ್ಮಾಣ ಕಾರ್ಯ ನಡೆದುಬರುತ್ತಿದೆ.
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ 7951 ಮನೆಗಳ ಕಾಮಗಾರಿ ಪೂರ್ಣಗೊಂಡಿದೆ. ಮೊದಲ ಹಂತದಲ್ಲಿ 2882 ಮನೆಗಳು, ಎರಡನೇ ಹಂತದಲ್ಲಿ 2852 ವಸತಿಗಳು ಪೂರ್ತಿಗೊಂಡಿವೆ. ಗ್ರಾಮೀಣ ವಲಯಗಳಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನಾ ದೊಂದಿಗೆ ಸೇರಿಕೊಂಡು 568 ಮನೆಗಳು, ನಗರ ಪ್ರದೇಶಗಳಲ್ಲಿ 1164 ಮನೆಗಳು ಪೂರ್ಣಗೊಂಡಿವೆ. ಪರಿಶಿಷ್ಟ ಜಾತಿಯ ಮಂದಿಗೆ 455 ಮನೆಗಳು, ಪರಿಶಿಷ್ಟ ಪಂಗಡ ಮಂದಿಗೆ 632 ಮನೆಗಳು, ಅಲ್ಪಸಂಖ್ಯಾತರಿಗೆ 6 ಮನೆಗಳು, ಮೀನುಗಾರ ಜನಾಂಗದವರಿಗೆ 107 ಮನೆಗಳು ಲೈಫ್ ಮಿಷನ್ ಮೂಲಕ ನಿರ್ಮಾಣಗೊಂಡಿವೆ.
ಮೊದಲ ಹಂತದಲ್ಲಿ ಶೇ 98.16 ಮನೆಗಳು ಪೂರ್ಣಗೊಂಡಿವೆ. ಕಾಞಂಗಾಡ್ ಬ್ಲೋಕ್ ಪಂಚಾಯತ್ ವ್ಯಾಪ್ತಿಯಲ್ಲಿ ಶೇ 100 ಮನೆಗಳು ಜೂನ್ ತಿಂಗಳಲ್ಲಿ, ಮಂಜೇಶ್ವರ ಬ್ಲೋಕ್ ವ್ಯಾಪ್ತಿಯಲ್ಲಿ ಸೇ 100 ಮನೆಗಳು ಪೂರ್ಣಗೊಂಡಿವೆ. ಕಾರಡ್ಕ ಬ್ಲೋಕ್ ನಲ್ಲಿ ಶೇ 99.49, ಕಾಸರಗೋಡು ಬ್ಲೋಕ್ ವ್ಯಾಪ್ತಿಯಲ್ಲಿ ಶೇ 97.58 ಮನೆಗಳು, ನೀಲೇಶ್ವರ ಬ್ಲಾಕ್ ನಲ್ಲಿ ಶೇ ಶೇ 98.68, ಪರಪ್ಪ ಬ್ಲೋಕ್ ನಲ್ಲಿ ಶೇ 99.18 ಮನೆಗಳು ಪೂರ್ಣಗೊಂಡಿವೆ.
ಎರಡನೇ ಹಂತದಲ್ಲಿ ಕಾಞಂಗಾಡ್ ಬ್ಲೋಕ್ ಪಂಚಾಯತ್ ವ್ಯಾಪ್ತಿಯಲ್ಲಿ ಶೇ 85.61 ಮನೆಗಳು , ಮಂಜೇಶ್ವರ ಬ್ಲೋಕ್ ವ್ಯಾಪ್ತಿಯಲ್ಲಿ ಶೇ 100 ಮನೆಗಳು, ಕಾರಡ್ಕ ಬ್ಲೋಕ್ ನಲ್ಲಿ ಶೇ 78.79 ಮನೆಗಳು, ಕಾಸರಗೋಡು ಬ್ಲೋಕ್ ವ್ಯಾಪ್ತಿಯಲ್ಲಿ ಶೇ 73.10 ಮನೆಗಳು, ನೀಲೇಶ್ವರ ಬ್ಲೋಕ್ ನಲ್ಲಿ ಶೇ 92.11, ನೀಲೇಶ್ವರ ಬ್ಲೋಕ್ ವ್ಯಾಪ್ತಿಯಲ್ಲಿ 92.11, ಪರಪ್ಪ ಬ್ಲೋಕ್ ನಲ್ಲಿ ಶೇ 79.11 ಮನೆಗಳು ಪೂರ್ಣಗೊಂಡಿವೆ. ಮೂರನೇ ಹಂತದಲ್ಲಿ 2730 ಫಲಾನುಭವಿಗಳನ್ನು ಈಗಾಗಲೇ ಆಯ್ಕೆ ಮಾಡಡಲಾಗಿದೆ.

