ಕಾಸರಗೋಡು: ದೂರು ಪರಿಹಾರಕ್ಕೆ ಅತ್ಯಾಧುನಿಕ ವಿಧಾನ ಅನುಸರಿಸುವ ಮೂಲಕ ಕಾಸರಗೋಡು ಜಿಲ್ಲಾಡಳಿತೆ ಮದರಿಯಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ನಡೆಯುತ್ತಿರುವ ತಾಲೂಕು ಮಟ್ಟದ ದೂರು ಪರಿಹಾರ ಅದಾಲತ್ ಸೋಮವಾರ ಆನ್ ಲೈನ್ ಮೂಲಕ ನಡೆಸುವ ಮೂಲಕ ಲಾಕ್ ಡೌನ್ ಅವಧಿಯಲ್ಲಿ ಗಮನಸೆಳೆದಿದೆ.
ಈ ಅವಧಿಯಲ್ಲಿ ಸಾರ್ವನಿಕರು ಸರಕಾರಿ ಕಚೇರಿಗಳಿಗೆ ತೆರಳಲಾಗದೇ ಇರುವ ಪರಿಸ್ಥಿತಿಯಲ್ಲಿ ಈ ಆನ್ ಲೈನ್ ವಿಧಾನದಲ್ಲಿ ಅದಾಲತ್ ಏರ್ಪಡಿಸಲಾಗಿತ್ತು. ಮಂಜೇಶ್ವರ ತಾಲೂಕು ಮಟ್ಟದಿಂದ ಲಭಿಸಿದ್ದ 6 ದೂರುಗಳಲ್ಲಿ 5 ದೂರುಗಳಿಗೆ ಜಿಲ್ಲಾಧಿಕಾರಿ ನೇರವಾಗಿ ನೇರ ಪರಿಹಾರ ಒದಗಿಸಿದ್ದಾರೆ. ಮೀಯಪದವಿನ ಮೂಡಂಬೈಲು ನಿವಾಸಿ ಶಶಿಕಲಾ ಅವರು ಸಲ್ಲಿಸಿದ್ದ ದೂರನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ತುರ್ತು ಕ್ರಮಕ್ಕೆ ಆದೇಶ ನೀಡಿದ್ದಾರೆ.
ಶೇಣಿ ಗ್ರಾಮದಲ್ಲಿ ಭೂಶುಲ್ಕ ಪಾವತಿಗೆ ಅನುಮತಿ ನೀಡುವಂತೆ, ಮೀಯಪದವು ರೀಸರ್ವೇ ಸಂಬಂಧ ದೂರಿನಲ್ಲೂ, ಕುಂಬಳೆಯಲ್ಲಿ ಭೂಹಕ್ಕು ಲಭ್ಯತೆ ಸಂಬಂಧ ಕಭಿಸಿದ ದೂರಿನಲ್ಲಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವಂತೆ ತಹಸೀಲ್ದಾರರಿಗೆ ಆದೇಶ ನೀಡಲಾಗಿದೆ. ಪೈವಳಿಕೆ ಗ್ರಾಮಪಂಚಾಯತ್ ಬಿದಿರು ಕೃಷಿ ನರ್ಸರಿಗಾಗಿ ಕಡಿಯಲಾದ ಮರಗಳ ಹರಾಜಿಗೆ ಮುನ್ನ ಸಮಾಜ ಅಣ್ರ್ಯೀಕರಣ ವಿಭಾಗದ ಸರ್ಟಿಫಿಕೆಟ್ ಒದಗಿಸುವಂತೆ ಜಿಲ್ಲಾಧಿಕಾರಿ ಆದೇಶ ನಿಡಿದರು. ಆನ್ ಲೈನ್ ಮೂಲಕ ಸಲ್ಲಿಸಿದ್ದ ದೂರುಗಳಲ್ಲಿ ಜಿಲ್ಲಾ ಮಟ್ಟದ ಸಂಬಂಧಪಟ್ಟ ಅಧಿಕಾರಿಗಳ ಉತ್ತರ ತೃಪ್ತಿಕರವಲ್ಲದೇ ಇದ್ದಲ್ಲಿ ಜಿಲ್ಲಾಧಿಕಾರಿ ಅವರನ್ನು ಅಕ್ಷಯ ಕೇಂದ್ರಗಳ ಆನ್ ಲೈನ್ ಸೌಲಭ್ಯ ಮೂಲಕ ನೇರವಾಗಿ ಸಂಪರ್ಕಿಸುವ ಅವಕಾಶ ಒದಗಿಸಲಾಗಿತ್ತು.
ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಸಹಾಯಕ ಜಿಲ್ಲಾಧಿಕಾರಿಗಳಾದ ಕೆ.ರವಿಕುಮಾರ್, ಎ.ಕೆ.ರಮೇಂದ್ರನ್, ವಲಯ ಕಂದಾಯಾಧಿಕಾರಿ ಅಹಮ್ಮದ್ ಕಬೀರ್, ಸರ್ವೇ ಡೆಪ್ಯೂಟಿ ಡೈರೆಕ್ಟರ್ ಕೆ.ಕೆ.ರಜಿಕುಮಾರ್, ಲೋಕೋಪಯೋಗಿ ಕರ್ಯಕಾರಿ ಇಂಜಿನಿಯರ್ ವಿನೋದ್ ಕುಮಾರ್ , ಹಿರಿಯ ಜಿಯಾಲಜಿಸ್ಟ್ ಜಗದೀಶನ್, ಮಂಜೇಶ್ವರ ತಹಸೀಲ್ದಾರ್ ಆಂಟೋ, ಎನ್.ಎ.ಸಿ. ಜಿಲ್ಲಾ ಇನ್ ಫಾರ್ಮೆಟಿಕ್ಸ್ ಅಧಿಕಾರಿ ಕೆ.ರಾಜನ್, ಅಕ್ಷಯ ಜಿಲ್ಲಾ ಯೋಜನೆ ಪ್ರಬಂಧಕ ಅಜೀಷಾ ಎನ್.ಎಸ್.ಮೊದಲಾದವರು ಉಪಸ್ಥಿತರಿದ್ದರು.

