ಕಾಸರಗೋಡು: ಜಿಲ್ಲಾ ಪಂಚಾಯತಿಯ ವಾರ್ಷಿಕ ಯೋಜನೆಯಲ್ಲಿ ಅಳವಡಿಸಿ ಕರಂದಕ್ಕಾಡಿನ ರಾಜ್ಯ ಮಟ್ಟದ ಬೀಜ ಉತ್ಪಾದನೆ ಕೇಂದ್ರದಲ್ಲಿ ಕಾರ್ಮಿಕರಿಗಾಗಿ ನಿರ್ಮಿಸಿರುವ ಅಡುಗೆ ಮನೆ, ಭೋಜನಾಲಯ, ಸೌದೆ ಇರಿಸುವ ಕೊಠಡಿ ಇತ್ಯಾದಿಗಳಿರುವ ಕಟ್ಟಡದ ಉದ್ಘಾಟನೆ ಸೋಮವಾರ ನಡೆಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸಿದರು. ಉಪಾಧ್ಯಕ್ಷೆ ಶಾತಮ್ಮಾ ಫಿಲಿಪ್, ಅಭಿವೃಧ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಲೋಕೋಪಯೋಗಿ ಸ್ಥಾಯೀ ಸಮಿತಿ ಅಧ್ಯಕ್ಷ ಫರೀದಾ ಝಕೀರ್ ಅಹಮ್ಮದ್, ಫಾರಂ ಕಾರ್ಮಿಕರ ಯೂನಿಯನ್ ಜಿಲ್ಲಾ ಕಾರ್ಯದರ್ಶಿ ಕರಿಯನ್, ಕೃಷಿ ಸಹಾಯಕ ನಿರ್ದೇಶಕಿ ಜಯರಾಣಿ, ಕೃಷಿ ಸಹಾಯ ಕಾರ್ಯಕಾರಿ ಅಭಿಯಂತರ, ಯೋಜನೆ ನಿರ್ವಹಣೆ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.


