ಕಾಸರಗೋಡು: ಐ.ಸಿ.ಡಿ.ಎಸ್. ಸಂಪುಷ್ಟ ಕೇರಳಂ ಯೋಜನೆ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ತೇನಾಮೃತ್(ಅಮೃತ ಜೇನು) ನ್ಯೂಟ್ರಿ ಬಾರ್ ವಿತರಣೆ ಆರಭಗೊಂಡಿದೆ.
ಕೋವಿಡ್ ಅವಧಿಯಲ್ಲಿ 3ರಿಂದ 6 ವರ್ಷದ ಮಕ್ಕಳಲ್ಲಿ ಗಂಭೀರ ಸ್ವರೂಪದಲ್ಲಿ ಪೆÇೀಷಕಾಹಾರ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೆ ಮಹಿಳಾ ಶಿಶು ಕಲ್ಯಾಣ ಇಲಾಖೆ ಈ ನ್ಯೂಟ್ರಿ ಬಾರ್ ವಿತರಣೆ ನಡೆಸುತ್ತಿದೆ. ಜಿಲ್ಲೆಯಲ್ಲಿ 126 ಮಕ್ಕಳು ಈ ಸಮಸ್ಯೆಯಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಇವರಿಗಾಗಿ ಮೊದಲ ಹಂತದಲ್ಲಿ 30 ದಿನಗಳ ಅವಧಿಗೆ ತಲಾ 100 ಗ್ರಾಂ ನಿಗದಿಪಡಿಸಿ 3780 ನ್ಯೂಟ್ರಿ ಬಾರ್ ವಿತರಣೆ ನಡೆಸಲಾಗಿದೆ.
ಮಂಜೇಶ್ವರ ಅಡಿಷನಲ್ ಪ್ರಾಜೆಕ್ಟ್ ಕಚೇರಿಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಶಾಸಕ ಎಂ.ಸಿ.ಕಮರುದ್ದೀನ್ ವಿತರಣೆಯ ಜಿಲ್ಲಾ ಮಟ್ಟದ ಉದ್ಘಾಟನೆ ನಡೆಸಿದರು. ಜಿಲ್ಲಾ ಮಹಿಳಾ ಶಿಶು ಅಭಿವೃಧ್ಧಿ ಅಧಿಕಾರಿ ಡೀನಾ ಭರತನ್, ಐ.ಸಿ.ಡಿ.ಎಸ್. ಅಧಿಕಾರಿ ಕವಿತಾರಾಣಿ ರಂಜಿತ್, ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಸಿ.ಡಿ.ಪಿ.ಒ. ಲತಾ ಕುಮಾರಿ ಉಪಸ್ಥಿತರಿದ್ದರು.


