ಕಾಸರಗೋಡು: ಕಾಸಗೋಡು ಜಿಲ್ಲೆಯಲ್ಲಿ ಸೋಮವಾರ ಮೂವರಿಗೆ ಕೋವಿಡ್ ಪಾಸಿಟಿವ್ ಆಗಿದೆ. 4 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಪಾಸಿಟಿವ್ ಆದವರಲ್ಲಿ ಇಬ್ಬರು ವಿದೇಶದಿಂದ, ಒಬ್ಬರು ಕೋಲ್ಕತಾದಿಂದ ಬಂದವರು.
ಕುವೈತ್‍ನಿಂದ ಆಗಮಿಸಿದ್ದ ಮಂಜೇಶ್ವರ ಪಂಚಾಯತ್ ನಿವಾಸಿ 21 ವರ್ಷದ ವ್ಯಕ್ತಿ, ಅಬುದಾಬಿಯಿಂದ ಬಂದಿದ್ದ ಮುಳಿಯಾರು ಪಂಚಾಯತ್ ನಿವಾಸಿ 38 ವರ್ಷದ ವ್ಯಕ್ತಿ, ಕೋಲ್ಕತಾದಿಂದ ಆಗಮಿಸಿದ್ದ ಬೇಡಡ್ಕ ನಿವಾಸಿ 31 ವರ್ಷದ ವ್ಯಕ್ತಿಗೆ ಕೋವಿಡ್ ಸೋಂಕು ಖಚಿತವಾಗಿದೆ.
ರೋಗದಿಂದ ಗುಣಮುಖರಾದವರಲ್ಲಿ ಇಬ್ಬರು ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ, ಇಬ್ಬರು ಪಡನ್ನಕ್ಕಾಡ್ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದರು. ದುಬಾಯಿಯಿಂದ ಆಗಮಿಸಿದ್ದ ಕುಂಬಳೆ ಪಂಚಾಯತ್ ನಿವಾಸಿಗಳಾದ 39 ವರ್ಷದ ವ್ಯಕ್ತಿ, 8 ವರ್ಷದ ಬಾಲಕ ಗುಣಮುಖರಾದವರು. ಇವರು ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದವರು. ಮಹಾರಾಷ್ಟ್ರದಿಂದ ಆಗಮಿಸಿದ್ದ ಪಡನ್ನ ಪಂಚಾಯತ್ ನಿವಾಸಿ 47 ವರ್ಷದ ವ್ಯಕ್ತಿ, ಸಂಪರ್ಕ ಮೂಲಕ ರೋಗ ತಗುಲಿದ್ದ ಕಾಸರಗೋಡು ನಗರಸಭೆ ವ್ಯಾಪ್ತಿಯ 25 ವರ್ಷದ ವ್ಯಕ್ತಿ ಗುಣಮುಖರಾದವರು. ಇವರು ಪಡನ್ನಕ್ಕಾಡ್ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದರು.
ಜಿಲ್ಲೆಯಲ್ಲಿ 3538 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3196 ಮಂದಿ, 342 ಮಂದಿ ಸಾಂಸ್ಥಿಕ ನಿಗಾದಲ್ಲಿದ್ದಾರೆ. ನೂತನವಾಗಿ 20 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 243 ಮಂದಿಯ ಫಲಿತಾಂಶ ಲಭಿಸಿಲ್ಲ.
ಕೇರಳದಲ್ಲಿ 82 ಮಂದಿಗೆ ಸೋಂಕು :
ಕೇರಳದಲ್ಲಿ ಸೋಮವಾರ 82 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಎರ್ನಾಕುಳಂ ಜಿಲ್ಲೆಯಲ್ಲಿ 13, ಪತ್ತನಂತಿಟ್ಟ-11, ಕೋಟ್ಟಯಂ-10, ಕಣ್ಣೂರು-10, ಪಾಲ್ಘಾಟ್-7, ಮಲಪ್ಪುರ-6, ಕಲ್ಲಿಕೋಟೆ-6, ಆಲಪ್ಪುಳ-5, ಕೊಲ್ಲಂ-4, ತೃಶ್ಶೂರು-3, ಕಾಸರಗೋಡು-3, ಇಡುಕ್ಕಿ-2, ತಿರುವನಂತಪುರ(12 ರಂದು ಸಾವಿಗೀಡಾದ ವ್ಯಕ್ತಿಗೆ ಕೊರೊನಾ ಸೋಂಕು ದೃಢ), ವಯನಾಡು-1 ಎಂಬಂತೆ ರೋಗ ಬಾಧಿಸಿದೆ.
ಜೂನ್ 12 ರಂದು ತಿರುವನಂತಪುರ ವಂಜಿಯೂರು ನಿವಾಸಿ ಎಸ್.ರಮೇಶನ್(67) ಸಾವಿಗೀಡಾಗಿದ್ದು ಅವರಿಗೆ ಕೊರೊನಾ ಸೋಂಕು ದೃಢೀಕರಿಸಲಾಗಿದೆ. ರೋಗ ಬಾ„ತರಲ್ಲಿ 49 ಮಂದಿ ವಿದೇಶದಿಂದ ಬಂದವರು. 23 ಮಂದಿ ಇತರ ರಾಜ್ಯಗಳಿಂದ ಬಂದವರು. 9 ಮಂದಿಗೆ ಸಂಪರ್ಕದಿಂದ ಸೋಂಕು ಹರಡಿದೆ.
ಇದೇ ಸಂದರ್ಭದಲ್ಲಿ ಸೋಮವಾರ 73 ಮಂದಿ ಗುಣಮುಖರಾಗಿದ್ದಾರೆ. ಕಣ್ಣೂರು-21, ಪಾಲ್ಘಾಟ್-12, ಕೊಲ್ಲಂ-11, ಮಲಪ್ಪುರಂ-10, ತೃಶ್ಶೂರು-6, ಕಲ್ಲಿಕೋಟೆ-4, ಕಾಸರಗೋಡು-4, ತಿರುವನಂತಪುರ-3, ಎರ್ನಾಕುಳಂ-2 ಎಂಬಂತೆ ಗುಣಮುಖರಾಗಿದ್ದಾರೆ. ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಾಗಿ 1348 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1174 ಮಂದಿ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು 1,20,727 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 1,18,704 ಮಂದಿ ಮನೆಗಳಲ್ಲಿ ಹಾಗು ಇನ್‍ಸ್ಟಿಟ್ಯೂಶನಲ್ ಕ್ವಾರೈಂಟೈನ್‍ನಲ್ಲಿದ್ದಾರೆ. 2023 ಮಂದಿ ಆಸ್ಪತ್ರೆಗಳಲ್ಲಿ ನಿಗಾವಣೆಯಲ್ಲಿದ್ದಾರೆ. ಸೋಮವಾರ ಶಂಕಿತ 219 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 1,14,753 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 1996 ಸ್ಯಾಂಪಲ್‍ಗಳ ಪರೀಕ್ಷಾ ವರದಿ ಬರಲು ಬಾಕಿಯಿದೆ. ಕಾಸರಗೋಡು ಜಿಲ್ಲೆಯಲ್ಲಿ ಕಿನಾನೂರು-ಕರಿಂದಳಂ ಹಾಟ್‍ಸ್ಪಾಟ್ ಯಾದಿಯಲ್ಲಿ ಸೇರ್ಪಡೆಗೊಂಡಿದ್ದು, ರಾಜ್ಯದಲ್ಲಿ ಒಟ್ಟು 126 ಹಾಟ್‍ಸ್ಪಾಟ್‍ಗಳಿವೆ.
ಮಾಸ್ಕ್ ಧರಿಸದ 115 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸಿದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 115 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಈ ಪ್ರಕರಣದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 6524 ಮಂದಿ ವಿರುದ್ಧ ಕೇಸು ದಾಖಲಿಸಿ, ದಂಡ ವಸೂಲಿ ಮಾಡಲಾಗಿದೆ.
ಲಾಕ್‍ಡೌನ್ ಉಲ್ಲಂಘನೆ : 8 ಕೇಸು ದಾಖಲು : ಲಾಕ್‍ಡೌನ್ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 8 ಕೇಸುಗಳನ್ನು ದಾಖಲಿಸಲಾಗಿದೆ. 15 ಮಂದಿಯನ್ನು ಬಂಧಿಸಲಾಗಿದ್ದು, 7 ವಾಹನಗಳನ್ನು ವಶಪಡಿಸಲಾಗಿದೆ. ಕಾಸರಗೋಡು ನಗರ ಠಾಣೆಯಲ್ಲಿ 1 ಕೇಸು, ಬೇಡಗಂ 1, ಆದೂರು 1, ಮೇಲ್ಪರಂಬ 1, ವೆಳ್ಳರಿಕುಂಡ್ 1, ಚಂದೇರ 2, ಬೇಕಲ 1 ಕೇಸುಗಳು ದಾಖಲಾಗಿವೆ. ಈ ಮೂಲಕ ಈ ಪ್ರಕರಣದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 2635 ಕೇಸುಗಳನ್ನು ದಾಖಲಿಸಲಾಗಿದೆ. 3313 ಮಂದಿಯನ್ನು ಬಂಧಿಸಲಾಗಿದ್ದು, 1136 ವಾಹನಗಳನ್ನು ವಶಪಡಿಸಲಾಗಿದೆ.


