ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 10 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಈ ಪೈಕಿ 8 ಮಂದಿ ಮಹಾರಾಷ್ಟ್ರದಿಂದ ಬಂದವರು. ಇಬ್ಬರು ವಿದೇಶದಿಂದ ಬಂದವರು. ಆರು ಮಂದಿ ಗುಣಮುಖರಾಗಿದ್ದಾರೆ. ಇದರೊಂದಿಗೆ ಕಾಸರಗೋಡು ಜಿಲ್ಲೆಯ 104 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಾರಾಷ್ಟ್ರದಿಂದ ಬಂದವರು : 64 ವರ್ಷದ ಉದುಮ ಪಂಚಾಯತ್ ನಿವಾಸಿ, ಒಂದೇ ಕುಟುಂಬದ 21, 54, 23 ವರ್ಷ ಪ್ರಾಯದ ಕುಂಬಳೆ ಪಂಚಾಯತ್ ನಿವಾಸಿಗಳು. 40 ವರ್ಷದ ಪೈವಳಿಕೆ ಪಂಚಾಯತ್ ನಿವಾಸಿ, 28 ವರ್ಷದ ವಲಿಯಪರಂಬ ಪಂಚಾಯತ್ ನಿವಾಸಿ, 33 ಮತ್ತು 46 ವರ್ಷದ ಮಂಗಲ್ಪಾಡಿ ಪಂಚಾಯತ್ ನಿವಾಸಿಗಳಿಗೆ ರೋಗ ಬಾಧಿಸಿದೆ.
ವಿದೇಶದಿಂದ ಬಂದವರು : ಕುವೈಟ್‍ನಿಂದ ಬಂದ 63 ವರ್ಷದ ಕುಂಬಳೆ ಪಂಚಾಯತ್ ನಿವಾಸಿ, ಸೌದಿಯಿಂದ ಬಂದ 27 ವರ್ಷದ ಕೋಡೋಂ-ಬೇಳೂರು ನಿವಾಸಿಗೆ ರೋಗ ದೃಢೀಕರಿಸಲಾಗಿದೆ.
ಜಿಲ್ಲೆಯಲ್ಲಿ ಆರು ಮಂದಿ ರೋಗ ಮುಕ್ತರಾಗಿದ್ದಾರೆ. 46 ಮತ್ತು 56 ವರ್ಷ ಪ್ರಾಯದ ಮೀಂಜ ನಿವಾಸಿಗಳು, 40 ವರ್ಷದ ಕಾಸರಗೋಡು ನಗರಸಭಾ ನಿವಾಸಿ, 29 ವರ್ಷದ ಮಂಗಲ್ಪಾಡಿ ನಿವಾಸಿ, 40 ವರ್ಷದ ಪೈವಳಿಕೆ ನಿವಾಸಿ, 47 ವರ್ಷ ಪ್ರಾಯದ ಮಂಗಲ್ಪಾಡಿ ನಿವಾಸಿ(ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಗುಣಮುಖ) ಗುಣಮುಖರಾಗಿದ್ದಾರೆ.
ಕೇರಳದಲ್ಲಿ 83 ಮಂದಿಗೆ ಸೋಂಕು :
ಕೇರಳದಲ್ಲಿ ಗುರುವಾರ 83 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ 62 ಮಂದಿ ಗುಣಮುಖರಾಗಿದ್ದಾರೆ. ಕಣ್ಣೂರು ಇರಿಟ್ಟಿ ನಿವಾಸಿ ಪಿ.ಕೆ.ಮುಹಮ್ಮದ್ ಸಾವಿಗೀಡಾಗಿದ್ದಾರೆ.
ರೋಗ ಬಾಧಿತರಲ್ಲಿ 27 ಮಂದಿ ವಿದೇಶದಿಂದ ಬಂದವರು. ಇತರ ರಾಜ್ಯಗಳಿಂದ ಬಂದ 37 ಮಂದಿಗೆ ರೋಗ ಬಾಧಿಸಿದೆ. ಸಂಪರ್ಕದಿಂದ 14 ಮಂದಿಗೆ ರೋಗ ಬಾ„ಸಿದೆ. ತೃಶ್ಶೂರಿನಲ್ಲಿ ಸಂಪರ್ಕದಿಂದ ರೋಗ ಬಾ„ಸಿದ ನಾಲ್ವರು ಕೋರ್ಪರೇಶನ್ ಶುಚೀಕರಣ ಕಾರ್ಮಿಕರಾಗಿದ್ದಾರೆ. ನಾಲ್ವರು ವೇರ್ ಹೌಸ್‍ನಲ್ಲಿ ತಲೆ ಹೊರೆ ಕಾರ್ಮಿಕರಾಗಿದ್ದಾರೆ.
ರೋಗ ಬಾಧಿತರು : ತೃಶ್ಶೂರು-25, ಪಾಲ್ಘಾಟ್-13, ಮಲಪ್ಪುರಂ-10, ಕಾಸರಗೋಡು-10, ಕೊಲ್ಲಂ-8, ಕಣ್ಣೂರು-7, ಪತ್ತನಂತಿಟ್ಟ-5, ಕೋಟ್ಟಯಂ-2, ಎರ್ನಾಕುಳಂ-2, ಕಲ್ಲಿಕೋಟೆ-1 ಎಂಬಂತೆ ರೋಗ ಬಾಧಿಸಿದೆ.
ರೋಗ ಮುಕ್ತರು : ತಿರುವನಂತಪುರ-16, ಪಾಲ್ಘಾಟ್-13. ಕಣ್ಣೂರು-8, ತೃಶ್ಶೂರು-7, ಎರ್ನಾಕುಳಂ-6, ಕಾಸರಗೋಡು-5, ಕಲ್ಲಿಕೋಟೆ-3, ಮಲಪ್ಪುರಂ-2, ಕೊಲ್ಲಂ-2 ಎಂಬಂತೆ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಇದು ವರೆಗೆ 22440 ಮಂದಿಗೆ ರೋಗ ಬಾಧಿಸಿದ್ದು, ಪ್ರಸ್ತುತ 1258 ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 218949 ಮಂದಿ ನಿಗಾವಣೆಯಲ್ಲಿದ್ದಾರೆ. 19022 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಗುರುವಾರ ಶಂಕಿತ 231 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ವರೆಗೆ 103757 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದೆ. 2873 ಮಂದಿಯ ಪರೀಕ್ಷಾ ವರದಿ ಬರಲು ಬಾಕಿಯಿದೆ. ರಾಜ್ಯದಲ್ಲಿ ಇದೀಗ 133 ಹಾಟ್‍ಸ್ಪಾಟ್‍ಗಳಿವೆ.
ಮಾಸ್ಕ ಧರಿಸದ 204 ಮಂದಿ ವಿರುದ್ಧ ಕೇಸು : ಜಿಲ್ಲೆಯಲ್ಲಿ ಮಾಸ್ಕ್ ಧರಿಸದ 204 ಮಂದಿ ವಿರುದ್ಧ ಪೆÇಲೀಸರು ಕೇಸು ದಾಖಲಿಸಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಮಾಸ್ಕ್ ಧರಿಸದ 5691 ಮಂದಿಯಿಂದ ದಂಡ ವಸೂಲಿ ಮಾಡಲಾಗಿದೆ.
ಲಾಕ್‍ಡೌನ್ ಉಲ್ಲಂಘನೆ : 4 ಕೇಸು ದಾಖಲು : ಲಾಕ್‍ಡೌನ್ ಉಲ್ಲಂಘಿಸಿದ ಆರೋಪದಲ್ಲಿ ಜಿಲ್ಲೆಯಲ್ಲಿ 4 ಕೇಸುಗಳನ್ನು ದಾಖಲಿಸಲಾಗಿದೆ. ಮಂಜೇಶ್ವರ-2, ಬೇಕಲ-1, ಹೊಸದುರ್ಗ-1 ಎಂಬಂತೆ ಕೇಸು ದಾಖಲಿಸಲಾಗಿದ್ದು, ವಿವಿಧ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ. ಇದು ವರೆಗೆ ಜಿಲ್ಲೆಯಲ್ಲಿ 2612 ಕೇಸುಗಳನ್ನು ದಾಖಲಿಸಲಾಗಿದ್ದು, 3283 ಮಂದಿಯನ್ನು ಬಂಧಿಸಲಾಗಿದೆ. 1124 ವಾಹನಗಳನ್ನು ವಶಪಡಿಸಲಾಗಿದೆ.


