ಕುಂಬಳೆ: ಅಬಕಾರಿ ಇಲಾಖೆಯು ಭಾನುವಾರ ನಡೆಸಿದ ಕಾರ್ಯಾಚರಣೆಯಲ್ಲಿ 89.37 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಮತ್ತು 11 ಕೆಜಿ ನಿಷೇಧಿತ ತಂಬಾಕನ್ನು ವಶಪಡಿಸಿಕೊಂಡಿದೆ.
ಕುಂಬಳೆ ಅಬಕಾರಿ ವ್ಯಾಪ್ತಿಯಲ್ಲಿ ಮಂಜೇಶ್ವರ ಕಡಂಬಾರ್ ಗ್ರಾಮದ ಕುಳ ಬಯಲು ನಿಂದ 89.37 ಲೀಟರ್ ಕರ್ನಾಟಕ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಜಾನ್ ಡಿಸೋಜ ಮತ್ತು ವಿಲ್ಟರ್ ಡಿಸೋಜಾ ಅವರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ. ಆರೋಪಿಗಳು ತಪ್ಪಿಸಿಕೊಂಡಿದ್ದರಿಂದ ಯಾರನ್ನೂ ಬಂಧಿಸಲಾಗಿಲ್ಲ. ಕುಂಬಳೆ ವಲಯ ಅಬಕಾರಿ ಅಧಿಕಾರಿ ಪಿ. ರಾಜೀವನ್, ಸಿಇಒಗಳಾದ ಪ್ರಿಶಿ ಪಿಎಸ್, ಕಣ್ಣಕುಂಞÂ ಟಿ, ಗಣೇಶ್ ಕೆ, ಮೇಮೋಲ್ ಜಾನ್ ಮತ್ತು ಸತ್ಯನ್ ಇ.ಕೆ. ತಪಾಸಣೆ ನೇತೃತ್ವ ವಹಿಸಿದ್ದರು.
ಬದಿಯಡ್ಕ ವಲಯ ಅಬಕಾರಿ ವಿಭಾಗ ಮತ್ತು ಹೊಸದುರ್ಗ ವಲಯದ ಅಧಿಕಾರಿಗಳು ನಡೆಸಿದ ಧಾಳಿಯಲ್ಲಿ ನಾಟೆಕಲ್ಲು ಮತ್ತು ಚೇಡಿಕುಂಡ್ ನಿಂದ 11 ಕಿಲೋಗ್ರಾಂಗಳಷ್ಟು ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.


