ಕಾಸರಗೋಡು: ಖಾಸಗಿ ಬಸ್ ಕಾರ್ಮಿಕರಿಗೆ ಜೀವಿಸಲು ಅವಕಾಶ ನೀಡಬೇಕು, ಖಾಸಗಿ ಬಸ್ ಉದ್ದಿಮೆಯನ್ನು ಸಂರಕ್ಷಿಸಲು ಕೇರಳ ಸರಕಾರ ಪ್ರತ್ಯೇಕ ಪ್ಯಾಕೇಜ್ ಘೋಷಿಸಬೇಕು, ಖಾಸಗಿ ಬಸ್ ಕಾರ್ಮಿಕರಿಗೆ ಪ್ರತ್ಯೇಕ ವಿಮೆ ಕವರೇಜ್ ಏರ್ಪಡಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಬಸ್ ಆ್ಯಂಡ್ ಹೆವಿ ಮಸ್ದೂರ್ ಸಂಘ ಬಿಎಂಎಸ್ ನೇತೃತ್ವದಲ್ಲಿ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.
ಯೂನಿಯನ್ ಜಿಲ್ಲಾ ಅಧ್ಯಕ್ಷ ರತೀಶ್ ಮಲ್ಲಂ ಅಧ್ಯಕ್ಷತೆಯಲ್ಲಿ ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ಎ.ಶ್ರೀನಿವಾಸನ್ ಉದ್ಘಾಟಿಸಿದರು. ಕೆ.ರಾಧಾಕೃಷ್ಣನ್ ಸ್ವಾಗತಿಸಿದರು. ಸಂತೋಷ್ ಕೂಡ್ಲು ವಂದಿಸಿದರು.

