HEALTH TIPS

ಭಾರತ-ಚೀನಾ ನಡುವಿನ ವಿವಾದ ಮತ್ತು ಒಪ್ಪಂದಗಳು ಏನೇನು?-ಬಗೆ ಹರಿಯುತ್ತಾ ಗಡಿ ತಂಟೆ!?

       
        ನವದೆಹಲಿ: ಭಾರತ-ಚೀನಾ ಗಡಿ ಪ್ರದೇಶ ಲಡಾಖ್ ನಲ್ಲಿ ಸಮರ ಸಿದ್ಧ ವಾತಾವರಣ ಸೃಷ್ಟಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಭಾರತ ಮತ್ತು ಚೀನಾದ ಉನ್ನತ ಮಟ್ಟದ ಸೇನಾ ಮುಖ್ಯಸ್ಥರು ಶಾಂತಿ-ಮಾತುಕತೆ ನಡೆಸಲಿದ್ದಾರೆ ಎಂದು ಚೀನಾ ತಿಳಿಸಿದೆ.
      ಕಳೆದ 28 ದಿನಗಳಿಂದ ಲಡಾಖ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಚೀನಾದ ದಕ್ಷಿಣ ಕ್ಸಿನ್ ಜಿಯಾಂಗ್ ಜಿಲ್ಲೆಯ ಕಮಾಂಡರ್ ಆಗಿರುವ ಮೇಜರ್ ಜನರಲ್ ಲಿಯು ಲಿನ್ ಅವರು ಭಾರತದ ಕಾರ್ಪ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ನೇತೃತ್ವದ ನಿಯೋಗದ ನಡುವೆ ಶಾಂತಿ ಮಾತುಕತೆ ನಿನ್ನೆ ನಡೆಯಿತು.
       ಪೂರ್ವ ಲಡಾಖ್ ನ ಚುಶುಲ್ ಸೆಕ್ಟರ್ ನಲ್ಲಿರುವ ಮಾರ್ಡೋ ಪ್ರದೇಶದ ಗಡಿ ಸುರಕ್ಷತಾ ಚರ್ಚೆಯ ಕೇಂದ್ರದಲ್ಲಿ ಉಭಯ ರಾಷ್ಟ್ರಗಳ ಮಿಲಿಟರಿ ಕಮಾಂಡರ್ಸ್ ಶಾಂತಿ ಮಾತುಕತೆ ನಡೆಸಿದರು. ಎರಡು ರಾಷ್ಟ್ರಗಳ ಸಾರ್ವಭೌಮತ್ವಕ್ಕೆ ಧಕ್ಕೆ ಬಾರದ ನಿಟ್ಟಿನಲ್ಲಿ ನಡೆದುಕೊಳ್ಳುವಂತೆ ವಿಷಯ ಪ್ರಸ್ತಾಪಿಸಲಾಯಿತು. ಈ ಹಿಂದೆ 1962ರಲ್ಲಿ ಭಾರತ-ಚೀನಾ ನಡುವೆ ಯುದ್ಧದ ನಂತರದಲ್ಲಿ ಶಾಂತಿ ಸ್ಥಾಪನೆ ಉದ್ದೇಶದಿಂದ ಕೆಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿತ್ತು. ಒಪ್ಪಂದದ ಪ್ರಮುಖ ಅಂಶಗಳು ಏನಾಗಿದ್ದವು ಎಂಬುದರ ಕುರಿತು ಒಂದು ಮಾಹಿತಿ ಇಲ್ಲಿದೆ.
            ಭಾರತ-ಚೀನಾ ನಡುವಿನ ಒಪ್ಪಂದದ ಅಂಶಗಳು:
      ಕಳೆದ 1962ರಲ್ಲಿ ಚೀನಾ-ಭಾರತದ ನಡುವಿನ ಯುದ್ಧದ ನಂತರದಲ್ಲಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳು ಮಹತ್ವದ ಒಪ್ಪಂದಕ್ಕೆ ಅಂಕಿತ ಹಾಕಿದ್ದವು. ಅಂತಾರಾಷ್ಟ್ರೀಯ ಗಡಿಯಲ್ಲಿ ಶಾಂತಿಸ್ಥಾಪನೆ ದೃಷ್ಟಿಯಿಂದ ಐದು ರಾಜತಾಂತ್ರಿಕ ಹಾಗೂ ಶಿಷ್ಟಾಚಾರ ಪಾಲನೆಯ ಒಪ್ಪಂದಗಳಿಗೆ ಅಂಕಿತ ಹಾಕಲಾಗಿತ್ತು. ಭಾರತ-ಚೀನಾ ನಡುವಿನ ಪ್ರಮುಖ ಒಪ್ಪಂದಗಳು: - 1993ರ ಒಪ್ಪಂದ: ಭಾರತ-ಚೀನಾದ ಅಂತಾರಾಷ್ಟ್ರೀಯ ಗಡಿರೇಖೆಯಲ್ಲಿನ ಪ್ರದೇಶಗಳಲ್ಲಿ ಶಾಂತಿ ಕಾಪಾಡಿಕೊಳ್ಳುವುದು. - 1996ರ ಒಪ್ಪಂದ: ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಮಿಲಿಟರಿ ಕ್ಷೇತ್ರದ ವಿಶ್ವಾಸಾರ್ಹ ಕಟ್ಟಡ ಕ್ರಮಗಳಿಗೆ ಸಂಬಂಧಿಸಿದಂತೆ ಒಪ್ಪಂದ - 2005ರ ಒಪ್ಪಂದ: ಎರಡು ರಾಷ್ಟ್ರಗಳ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಮಿಲಿಟರಿ ಕ್ಷೇತ್ರದ ವಿಶ್ವಾಸಾರ್ಹ ಕಟ್ಟಡಗಳಲ್ಲಿ ಶಿಷ್ಟಾಚಾರ ಪಾಲನೆ ಕುರಿತು ಒಪ್ಪಂದ - 2012 ರ ಒಪ್ಪಂದ: ಭಾರತ-ಚೀನಾ ಗಡಿ ವ್ಯವಹಾರಗಳ ಸಮಾಲೋಚನೆ ಮತ್ತು ಸಮನ್ವಯಕ್ಕಾಗಿ ಕಾರ್ಯ ಕಾರ್ಯವಿಧಾನವನ್ನು ಸ್ಥಾಪಿಸುವ ಕುರಿತು ಒಪ್ಪಂದ - 2013 ಗಡಿ ರಕ್ಷಣಾ ಸಹಕಾರ ಒಪ್ಪಂದ: ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಮಿಲಿಟರಿ ಕ್ಷೇತ್ರದಲ್ಲಿ ವಿಶ್ವಾಸ ಹೆಚ್ಚಿಸುವ ಕ್ರಮಗಳಿಗೆ ಒತ್ತು ನೀಡುವುದು
           ನಿಯಂತ್ರಣ ಸಾಧಿಸಲು ಹವಣಿಸುತ್ತಿರುವ ಚೀನಾ:
     1962ರ ಯುದ್ಧದ ಬಳಿಕವೂ ಭಾರತೀಯ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಚೀನಾ ಹವಣಿಸುತ್ತಿದೆ. ಅದರಲ್ಲೂ ಲಡಾಖ್ ಮೇಲೆ ಚೀನಾ ಹದ್ದಿನ ಕಣ್ಣಿಟ್ಟಿದೆ. 1993ರಲ್ಲಿ ನಡೆದ ರಾಜತಾಂತ್ರಿಕ ಒಪ್ಪಂದದಲ್ಲಿ ಯಾವುದೇ ರೀತಿಯ ನಿರ್ದಿಷ್ಟ ಗಡಿರೇಖೆಯನ್ನು ಗುರುತಿಸಿರಲಿಲ್ಲ. ಗಡಿರೇಖೆಯಲ್ಲಿ ನಡೆಯುವ ಪ್ರತಿಯೊಂದು ಘಟನೆಗಳು ಹಕ್ಕು ಮತ್ತು ಪ್ರತಿಹಕ್ಕಿಗೆ ಸಂಬಂಧಿಸಿದ ಸಂಘರ್ಷವಾಗಿ ಪರಿವರ್ತಿಸುತ್ತಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಗಡಿ ವಿವಾದ ಸೃಷ್ಟಿಯಾಗುತ್ತಿತ್ತು. ಏಕೆಂದರೆ ಭಾರತ-ಚೀನಾ ಸದ್ಯದಲ್ಲಿ ಇರುವ ನಕ್ಷೆಯನ್ನು ಎರಡು ರಾಷ್ಟ್ರಗಳೂ ಒಪ್ಪಿಕೊಳ್ಳುವುದಕ್ಕೆ ಸಿದ್ಧವಿಲ್ಲ. ಅಲ್ಲದೇ ಎರಡು ರಾಷ್ಟ್ರಗಳ ನಡುವೆ ಶಾಶ್ವತ ಗಡಿರೇಖೆಗೆ ಸಂಬಂಧಿಸಿದ ಯಾವುದೇ ನಕ್ಷೆಗಳೂ ಇಲ್ಲ.
        ಚೀನಾ-ಭಾರತ ನಡುವಿನ ಗಡಿ ವಿವಾದ ಒಂದೆರೆಡಲ್ಲ:
      ಅಂತಾರಾಷ್ಟ್ರೀಯ ಗಡಿ ವಿಚಾರದಲ್ಲಿ ಭಾರತ-ಚೀನಾ ನಡುವಿನ ಸಂಘರ್ಷ ನಡೆಯುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಕೂಡಾ ಎರಡು ರಾಷ್ಟ್ರಗಳ ನಡುವೆ ಸಾಕಷ್ಟು ಗಡಿಗೆ ಸಂಬಂಧಿಸಿದಂತೆ ವಿವಾದಗಳು ಸೃಷ್ಟಿಯಾಗಿದ್ದವು. ಎರಡು ರಾಷ್ಟ್ರಗಳ ನಡುವಿನ ವಿವಾದಿತ ಗಡಿ: - 1987ರಲ್ಲಿ ಸಂದೊರೊಂಗ್ ಚು ಗಡಿ - 2013ರಲ್ಲಿ ದೆಪ್ ಸಂಗ್ ಗಡಿ - 2014 ಚುಮರ್ ಗಡಿ - 2017 ಡೋಕ್ಲಾಂ ಗಡಿ - 2020 ಗಲ್ವಾನ್ ವ್ಯಾಲಿ
          ಗಡಿಯಲ್ಲಿನ ಟಿಬೆಟ್ ತನ್ನ ಹಕ್ಕು ಎಂದ ಚೀನಾ:
     ಭಾರತ-ಚೀನಾ ನಡುವೆ ಮಾಡಿಕೊಂಡ ಒಪ್ಪಂದಗಳು ಕೇವಲ ಸಂವಾದದ ಕೊಠಡಿಗೆ ಮಾತ್ರ ಸೀಮಿತವಾಗಿರುತ್ತವೆ. ವಾಸ್ತವದಲ್ಲಿ ಈ ಒಪ್ಪಂದ ಮತ್ತು ಶಿಷ್ಟಾಚಾರಗಳು ಆಚರಣೆಗೆ ಬರುವುದೇ ಇಲ್ಲ. ಟಿಬೆಟ್ ವಿಚಾರವು ಇದಕ್ಕೊಂದು ಸ್ಪಷ್ಟ ಉದಾಹರಣೆಯಾಗಿದೆ. 1959ರಲ್ಲಿ ಬೌಗೋಳಿಕ ಗಡಿಯನ್ನು ವಿಸ್ತರಿಸಿಕೊಂಡ ಚೀನಾ ಟಿಬೆಟ್ ತನ್ನ ವ್ಯಾಪ್ತಿಗೆ ಸೇರಿದ್ದು ಎಂದು ವಾದಿಸಿದ್ದು, ಈ ಪ್ರದೇಶದಲ್ಲಿ ಸೇನೆಯನ್ನೂ ಸಹ ನಿಯೋಜಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries